ಅಜಿತ ನಾಯಕರ ಹತ್ಯೆ : ಆರೋಪಿಗಳನ್ನು ಬಂಧಿಸುವಂತೆ ಮನವಿ

 

ಅಂಕೋಲಾ : ಹಿರಿಯ ನ್ಯಾಯವಾದಿ, ಸಾಮಾಜಿಕ ಧುರೀಣ ರಾಜಕೀಯ ವ್ಯಕ್ತಿಯಾದ ದಾಂಡೇಲಿಯ ಅಜಿತ ಎಂ. ನಾಯಕ ಅವರನ್ನು ಜುಲೈ 27 ರಂದು ದುಷ್ಕಮರ್ಿಗಳಿಂದ ಹತ್ಯೆಗೀಡಾಗಿದ್ದು, ಈ ಹೇಯ ಹಾಗೂ ಹೇಡಿತ ನದ ಕೃತ್ಯವನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಸಕರ್ಾರದವರು ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಸೋಮವಾರ ನಾಡವರ ಸಂಘ ಅಂಕೋಲಾದವರು ತಹಶೀಲ್ದಾರ ಅವರಿಗೆ ಮನವಿ ನೀಡಿದರು. 

ಮನವಿಯನ್ನು ತಹಶೀಲ್ದಾರ ವಿವೇಕ ವಿ. ಶೇಣ್ವಿ ಅವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಾಡವರ ಸಂಘದ ಉಪಾಧ್ಯಕ್ಷ ಆರ್.ಟಿ.ಮಿರಾಶಿ, ಕಾರ್ಯದಶರ್ಿ ಎ.ಎನ್.ತಲಗೇರಿ, ಸದಸ್ಯರಾದ ಆರ್.ಕೆ.ನಾಯಕ, ವಿನೋದ ಬಿ. ಬಾಸಗೋಡ, ಜಿ.ಎಂ.ನಾಯಕ, ಎನ್.ಕೆ.ನಾಯಕ, ಪಾಂಡುರಂಗ ವಿ. ನಾಯಕ, ಬಾಲಚಂದ್ರ ಆರ್. ನಾಯಕ, ಬೊಮ್ಮಯ್ಯ ಎಚ್.ನಾಯಕ, ಬೀರಣ್ಣ ನಾಯಕ ಶೆಟಗೇರಿ, ನಾರಾಯಣ ವಿ.ನಾಯಕ ಸೇರಿದಂತೆ ಇತರರಿದ್ದರು.