ಗದಗ 27: ಪ್ರೇರಣಾ ಕಾರ್ಯಕ್ರಮವು ಸಮಗ್ರ ಶಿಕ್ಷಣ ಅಭಿಯಾನ ಮತ್ತು ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ನಮ್ಮ ಜಿಲ್ಲೆಯಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಸಹಕಾರಿಯಾಗಿದೆ. ಈ ಕಾರ್ಯಕ್ರಮದ ಕುರಿತು ಜಿಲ್ಲೆಯ ಎಲ್ಲ ಅಧಿಕಾರಿಗಳು ಸಮಗ್ರವಾಗಿ ಅಥರ್ೈಸಿಕೊಂಡು ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡುವುದಾಗಿ ಗದಗ ಜಿಲ್ಲೆ ಉಪನಿದರ್ೇಶಕರು (ಆಡಳಿತ) ಜಿ. ರುದ್ರಪ್ಪ. ತಿಳಿಸಿದರು.
ಪ್ರೇರಣಾ ಕಾರ್ಯಕ್ರಮದ ಗದಗ ಜಿಲ್ಲಾ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿ. ಗಂಗಪ್ಪ ಉಪನಿದರ್ೇಶಕರು (ಅಭಿವೃದ್ಧಿ) ಹಾಗೂ ಡಯಟ್ ಪ್ರಾಚಾರ್ಯರು ಗದಗ ರವರು ಮಾತನಾಡಿ ಪ್ರೇರಣಾ ಕಾರ್ಯಕ್ರಮವು ಸಮಗ್ರ ಶಿಕ್ಷಣ ಅಭಿಯಾನ ಮತ್ತು ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಪ್ರ್ರಾಯೋಗಿಕವಾಗಿ ಅನುಷ್ಠಾನವಾಗಿ ಯಶಸ್ವಿಯಾದ ನಂತರ ರಾಜ್ಯ ಹಂತದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮವನ್ನು ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ವಿಸ್ತರಿಸಿ, ಸುಮಾರು 48,000 ಸರಕಾರಿ ಶಾಲೆಗಳ 4 ರಿಂದ 9ನೇ ತರಗತಿಯ ಸುಮಾರು 27,00,000 ವಿದಾಥರ್ಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಲಿದ್ದಾರೆ. ಪ್ರೇರಣಾ ಕಾರ್ಯಕ್ರಮ ಅನುಷ್ಠಾನದ ಶಿಕ್ಷಣ ಸ್ಟಾರ್ ಪಡೆಯುವುದರಿಂದ ವಿದ್ಯಾಥರ್ಿಗಳ ಹಾಜರಾತಿ, ಕಲಿಕೆಯಲ್ಲಿ ಭಾಗವಹಿಸುವಿಕೆ, ಪ್ರೇರಣಾ ಕ್ಲಬ್ ಮತ್ತು ಸಹಪಾಠಿ ಕಲಿಕೆಯ ಮೂಲಕ, ನಾಯಕತ್ವ ಗುಣಗಳು ಬೆಳವಣಿಗೆಯಾಗಿ ನಿರಂತರ ಅಭ್ಯಾಸ ಮಾಡಲು, ಅಭ್ಯಾಸ ಪುಸ್ತಕಗಳು ಸಹಕಾರಿಯಾಗಿದ್ದು ಹಾಗೂ ಕಲಿಕಾ ನಕ್ಷೆಯ ಮೂಲಕ, ಕಲಿಕೆಯ ಗುರಿ ತಲುಪಲು ಹಾಗೂ ಈ ಮೂಲಕ ಪೋಷಕರಿಗೆ ವಿದ್ಯಾಥರ್ಿಗಳ ಕಲಿಕಾ ಗುಣಮಟ್ಟವನ್ನು ತಿಳಿಯಲು, ಈ ಕಾರ್ಯಕ್ರಮವು ತುಂಬಾ ಸಹಕಾರಿಯಾಗಿದೆ ಆದ್ದರಿಂದ ಜಿಲ್ಲೆಯ ಎಲ್ಲ ಅಧಿಕಾರಿಗಳು, ಶಿಕ್ಷಕರು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮದ ಕುರಿತು ಪ್ರಸ್ತಾವಿಕವಾಗಿ ಡಿ,ವೈ.ಪಿ.ಸಿ.ಓ. ಸ.ಶಿ.ಅ. ಜಿ.ಎಲ್. ಬಾರಾಟಕ್ಕೆ ಮಾತನಾಡಿದರು, ಬೆಳಗಾವಿ ವಿಭಾಗದ ಶಿಕ್ಷಣ ಫೌಂಡೆಷನ್ ನಿವರ್ಾಹಕರಾದ ನಾರಾಯಣ ಕಿಲರ್ೋಸ್ಕರ್, ಕಾರ್ಯಕ್ರಮ ಪರಿಚಯಿಸದರು, ವಿ. ವಿ ನಡುವಿನಮನಿ, ಎ.ಪಿ.ಸಿ.ಓ. ಸ.ಶಿ.ಅ. ನಿರೂಪಿಸಿದರು ಹಾಗೂ ಶಿಕ್ಷಣ ಫೌಂಡೇಷನ್ ನ ಜಿಲ್ಲಾ ನಿವರ್ಾಹಕರು ಕಲ್ಮೇಶ ಉಗರಗೋಳ ವಂದಿಸಿದರು. ಈ ಸಭೆಯಲ್ಲಿ ಶಿಕ್ಷಣ ಫೌಂಡೇಷನ್ ಬೆಳಗಾವಿ ವಲಯ ತಾಂತ್ರಿಕ ನಿವರ್ಾಹಕರು ಶ್ರೀಶೈಲ ಅಥಣಿ, ಗದಗ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಭಾಗವಹಿಸಿದ್ದರು.