ಲೋಕದರ್ಶನ ವರದಿ
ಶೇಡಬಾಳ: ಎಲ್ಲ ಸನ್ಮಾನಗಳಿಗಿಂತ ಸಹವತರ್ಿಗಳು ಮಾಡುವ ಸನ್ಮಾನ ಅತ್ಯಂತ ಅವಿಸ್ಮರಣೀಯವಾದದ್ದು ಎಂದು ಉಗಾರ ಬುದ್ರುಕ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಿ ಕೆ.ಎ.ಹನಗಂಡಿ ಹೇಳಿದರು.
ಅವರು ಬುಧವಾರ ದಿ. 3 ರಂದು ಉಗಾರ ಬುದ್ರುಕ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಸಭಾಂಗಣದಲ್ಲಿ ಜರುಗಿದ ಬಿಳ್ಕೋಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ ಕಳೆದ 9 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಸಹ ಶಿಕ್ಷಕರು ನನ್ನೊಂದಿಗೆ ಸಹೋದರತ್ವದ ಭಾವನೆಯಿಂದ ವತರ್ಿಸಿದ್ದು, ವಿದ್ಯಾಥರ್ಿಗಳು ಮಾತೆಯ ಸ್ಥಾನದಲ್ಲಿ ಕಂಡಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ರಾಮ ನಾಯಿಕ ವಹಿಸಿದ್ದರು. ಶಾಲೆಯ ಮುಖ್ಯಾಧ್ಯಾಪಕಿ ಎ.ಬಿ.ಕಾಮತ ಹಾಗೂ ಸಹ ಶಿಕ್ಷಕರು ಇಲ್ಲಿಂದ ವಗರ್ಾವಣೆಗೊಂಡಿರುವ ಶಿಕ್ಷಕಿ ಕೆ.ಎ.ಹನಗಂಡಿ ಅವರನ್ನು ಶಾಲು ಹೊದಿಸಿ ಸತ್ಕರಿಸಿ ಸನ್ಮಾನಿಸಿದರು.
ಈ ಸಮಯದಲ್ಲಿ ರಾಮ ನಾಯಿಕ, ಎ.ಬಿ.ಕಾಮತ, ವ್ಹಿ.ಕೆ.ಪೂಜಾರಿ, ಉತ್ತಮ ಕೋಳಿ, ಎಸ್.ಎಸ್.ಗಡೆನ್ನವರ, ಪಿ.ಜಿ.ಕಾಂಬಳೆ, ಬಿ.ಎ.ಮುಲ್ಲಾ, ಜಿ.ಜೆ.ಮಾಂಜರೆ, ಮಾಕಾಳೆ, ಗಂಗಪ್ಪನವರ, ವಿಠ್ಠಲ ಕೋಳಿ, ಶಿವು ಗಸ್ತಿ, ಭಾರತಿ ಗಂಗೂರ, ದೀಪಾ ಸೋನಾರ ಸೇರಿದಂತೆ ವಿದ್ಯಾಥರ್ಿಗಳು ಶಿಕ್ಷಕರು, ಗ್ರಾಮಸ್ಥರು, ಸಿಬ್ಬಂದಿ ವರ್ಗ ಇದ್ದರು.
ವಿಠ್ಠಲ ಕೋಳಿ ಸ್ವಾಗತಿಸಿದರು. ಜಿ.ಜೆ.ಮಾಂಜರೆ ವಂದಿಸಿದರು. ಶಿವು ಗಸ್ತಿ ಕಾರ್ಯಕ್ರಮ ನಿರೂಪಿಸಿದರು.