ಐಪಿಎಲ್ ದುಬಾರಿ ವಿದೇಶಿ ಆಟಗಾರ ಪ್ಯಾಟ್ ಕಮಿನ್ಸ್

ಕೋಲ್ಕತಾ, ಡಿ 19 :      ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತಿ ದುಬಾರಿ ವಿದೇಶಿ ಆಟಗಾರನೆಂಬ ಹಿರಿಮೆಗೆ ಆಸ್ಟ್ರೇಲಿಯಾ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಭಾಜನವಾಗಿದ್ದಾರೆ.

ಕೋಲ್ಕತಾದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸಾಲಿಗಾಗಿನ ಹರಾಜು ಪ್ರಕ್ರಿಯೆಯಲ್ಲಿ 2 ಕೋಟಿ ರೂ.ಗಳ ಮೂಲಬೆಲೆಯನ್ನು ಹೊಂದಿರುವ ಪ್ಯಾಟ್ ಕಮಿನ್ಸ್ ಬರೋಬ್ಬರಿ 15.50 ಕೋಟಿ ರೂ.ಗಳನ್ನು ಬಾಚಿದ್ದಾರೆ. ಆ ಮೂಲಕ 2017 ಆವೃತ್ತಿಯಲ್ಲಿ 14.5 ಕೋಟಿ ರೂ. ಗಳಿಸಿದ್ದ ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್ ಬೆನ್  ಸ್ಟೋಕ್ಸ್ ಅವರನ್ನು ಕಮಿನ್ಸ್ ಹಿಂದಿಕ್ಕಿದರು.

ಜಿದ್ದಾಜಿದ್ದಿನಿಂದ ಸಾಗಿದ ಹರಾಜು ಪ್ರಕ್ರಿಯೆಯಲ್ಲಿ ಕೊನೆಗೆ 15.50 ಕೋಟಿ ರೂ.ಗಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತೆಕ್ಕೆಗೆ ಸೇರುವಲ್ಲಿ ಪ್ಯಾಟ್ ಕಮಿನ್ಸ್ ಯಶಸ್ವಿಯಾಗಿದ್ದಾರೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಪ್ಯಾಟ್ ಕಮಿನ್ಸ್ ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾರಿ ಆಸಕ್ತಿಯನ್ನು ತೋರಿತ್ತು. ಅಲ್ಲದೆ 15 ಕೋಟಿ ರೂ.ಗಳ ವರೆಗೂ ಬಿಡ್ ಸಲ್ಲಿಸಿತ್ತು. ಆದರೆ ಆಗಲೇ ಹರಾಜು ಮೊತ್ತದ ಅಭಾವ ಎದುರುತ್ತಿರುವ ಆರ್ಸಿಬಿ, ಕೊನೆಗೂ ರೇಸ್ನಿಂದ ಹಿಂದೆ ಸರಿಯಲು ನಿರ್ಧರಿಸಿತ್ತು.