ಲೋಕದರ್ಶನವರದಿ
ಮಹಾಲಿಂಗಪುರ01: ಪಾಲಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಒಳ್ಳೆಯ ಸಂಸ್ಕಾರ ನೀಡಬೇಕು.ಆಗ ಶಾಲೆಯಲ್ಲಿ ನೀಡುವ ಶಿಕ್ಷಣ, ಮನೆಯಲ್ಲಿಯ ಸಂಸ್ಕಾರ ಎರಡೂ ವಿದ್ಯಾಥರ್ಿಯ ಸುಂದರ ಬದುಕಿಗೆ ಕಾರಣವಾಗುತ್ತವೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಅವರು ಸಮೀಪದ ಸೈದಾಪುರ ಗ್ರಾಮದ ಬಸವೇಶ್ವರ ಶಿಕ್ಷಣ ಸಂಸ್ಥೆಯ ಎಕ್ಸಲೆಂಟ್ ಕನ್ನಡ ಪ್ರಾಥಮಿಕ ಶಾಲೆಯ 6ನೇ ವಾಷರ್ಿಕ ಸ್ನೇಹ ಸಮ್ಮೇಳನ ಮೊಗ್ಗಿನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಶಾಲಾಭ್ಯಾಸಕ್ಕಾಗಿ ಹಣ ವೆಚ್ಚ ಮಾಡಿದರೆ ಸಾಲದು ಅವರಿಗೆ ಒಳ್ಳೆಯ ನೀತಿ ಪಾಠ ಮಾಡುವುದರೊಂದಿಗೆ ಅವರ ನೈತಿಕ ಬಲವನ್ನು ಹೆಚ್ಚಿಸಬೇಕು.
ಆಗ ಅವರ ವ್ಯಕ್ತಿತ್ವ ವಿಕಸನಗೊಂಡು ಒಳ್ಳೆಯ ನಾಗರಿಕರಾಗುತ್ತಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಡಿವೈಎಸ್ಪಿ ಅಶೋಕ ಪೂಜೇರಿ, ಶರಣಗೌಡ ಪಾಟೀಲ ಮಾತನಾಡಿದರು.
ಕಾರ್ಯಕ್ರಮದ ನಿಮಿತ್ತ ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನ, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪಧರ್ೆಯಲ್ಲಿ ವಿಜೇತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ಮಕ್ಕಳಿಂದ ಹಾಡು, ನೃತ್ಯ, ನಾಟಕ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲಕರನ್ನು ರಂಜಿಸಿದವು.
ಕಪರಟ್ಟಿ ಗುರುಮಹಾದೇವಾಶ್ರಮದ ಬಸವರಾಜ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಶಿವಲಿಂಗ ಪೋಳ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ರಂಗನಗೌಡ ಪಾಟೀಲ, ಮಂಜುನಾಥ ಪೋಳ, ಚಿನ್ನಪ್ಪ ಬಾಯಪ್ಪಗೋಳ, ಮಹಮ್ಮದ ಹೂಲಿಕಟ್ಟಿ, ಅಶೊಕ ಕೇತಗೌಡ, ಮಹಾಲಿಂಗ ಅರಭಾಂವಿ ಆನಂದ ಕೇತಗೌಡ, ಶಿವಲಿಂಗ ಸಿದ್ನಾಳ ಇದ್ದರು. ರಾಮು ಹರಿಜನ ಸ್ವಾಗತಿಸಿದರು. ರಾಜಶ್ರೀ ಕೇತಗೌಡ ವರದಿ ವಾಚಿಸಿದರು. ರವಿ ಕಲ್ಲೋಳಿ ನಿರೂಪಿಸಿದರು. ಕಾಂಚನಾ ಪೋಳ್ ವಂದಿಸಿದರು.