ರಾಜ್ಯದ ಮೂರೂ ಪಕ್ಷಗಳ ಚಿತ್ತ 17 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯತ್ತ....!!

ಬೆಂಗಳೂರು, ಆಗಸ್ಟ್ 3  - ರಾಜ್ಯದಲ್ಲಿ 14 ತಿಂಗಳ ಮೈತ್ರಿ ಸರ್ಕಾರ ಪತನದ ನಂತರ ಕಾಂಗ್ರೆಸ್,  ಜೆಡಿಎಸ್ ನಾಯಕರು ತಮ್ಮ ಪಕ್ಷಗಳನ್ನು ಬಲಪಡಿಸುವತ್ತ  ಗಮನ ಹರಿಸಿದ್ದಾರೆ.  ಈ ವರ್ಷದ ಅಂತ್ಯದಲ್ಲಿ  ನಡೆಯಲಿರುವ  ವಿಧಾನಸಭಾ ಉಪ ಚುನಾವಣೆಗಳಿಗೆ ಎರಡೂ ಪಕ್ಷಗಳು ಸಿದ್ಧತೆ ನಡೆಸುತ್ತಿವೆ ಎಂದು ವರದಿಯಾಗಿದೆ.  ಈ ವರ್ಷದ ಅಂತ್ಯದ ವೇಳೆಗೆ 17 ವಿಧಾನಸಭಾ ಕ್ಷೇತ್ರಗಳಿಗೆ  ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್  ನಾಯಕ  ಹೆಚ್.ಡಿ.  ಕುಮಾರ ಸ್ವಾಮಿ  ತಮ್ಮ ಪಕ್ಷದ  ಭವಿಷ್ಯದ ಕಾರ್ಯಸೂಚಿಗಳ   ಬಗ್ಗೆ  ಗಮನ ಹರಿಸಿದ್ದಾರೆ.   ಪಕ್ಷದ ಕಾರ್ಯ ತಂತ್ರದಂತೆ   ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ  ವಿಧಾನಸಭಾ ಕ್ಷೇತ್ರದಿಂದ  ತಮ್ಮ  ಪುತ್ರ  ನಿಖಿಲ್ ಗೌಡ ಅವರನ್ನು  ಉಪ ಚುನಾವಣೆಯಲ್ಲಿ ಕಣಕ್ಕಿಳಿಸಲು ಯೋಜಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು  ಪಕ್ಷದ ನಾಯಕರು  ಭೇಟಿಮಾಡಿ ಚರ್ಚೆ ನಡೆಸುತ್ತಿದ್ದಾರೆ  ನಾರಾಯಣ ಗೌಡ  2018 ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ  ಜೆಡಿಎಸ್ ಅಭ್ಯರ್ಥಿಯಾಗಿ  ಗೆದ್ದಿದ್ದರು. ಸ್ಪೀಕರ್ ರಮೇಶ್ ಕುಮಾರ್ ಅವರು ಗೌಡ ಅವರನ್ನು ಅನರ್ಹಗೊಳಿಸಿದ ನಂತರ ಈ ಸ್ಥಾನ  ಖಾಲಿಯಾಗಿದೆ.  ಕುಮಾರ ಸ್ವಾಮಿ ಪಕ್ಷದ ಯುವ ಹಿಂಬಾಲಕರನ್ನು  ಗಮನದಲ್ಲಿಟ್ಟುಕೊಂಡು ನಿಖಿಲ್  ಅವರನ್ನು ಕಣಕ್ಕಿಳಿಸಲು  ಯೋಜಿಸುತ್ತಿದ್ದಾರೆ. ಭವಿಷ್ಯದಲ್ಲಿ ಪಕ್ಷದ ಜವಾಬ್ದಾರಿಗಳನ್ನು   ವಹಿಸಿಕೊಳ್ಳುವ ಆಸಕ್ತಿಯನ್ನು   ನಿಖಿಲ್  ಪ್ರದಶರ್ಿಸಿದ್ದು  ಈ ಕಾರ್ಯತಂತ್ರದ ಭಾಗವಾಗಿ ನಿಖಿಲ್ ಅವರನ್ನು ವಿಧಾನಸಭೆಗೆ ಕಳುಹಿಸುವ ನಿರೀಕ್ಷೆಯಿದೆ. ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಮಂಡ್ಯ ಕ್ಷೇತ್ರದಿಂದ ಸ್ಪಧರ್ಿಸಿದ್ದರು. ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಎದುರು  ಸೋಲು ಅನುಭವಿಸಿದ್ದರು.    ಲೋಕಸಭಾ ಚುನಾವಣಾ ಫಲಿತಾಂಶ  ಪ್ರಕಟಗೊಂಡಾಗಿನಿಂದ  ಪಕ್ಷದ  ವ್ಯವಹಾರಗಳಿಂದ ದೂರ ಸರಿದಿರುವ ನಿಖಿಲ್ ಕುಮಾರಸ್ವಾಮಿ  ಚಲನಚಿತ್ರಗಳತ್ತ ಗಮನ ಹರಿಸಿದ್ದಾರೆ.  ಈಗ ಸರ್ಕಾರ ಹಾಗೂ ಮೈತ್ರಿಕೂಟದ ಪತನದೊಂದಿಗೆ ನಿಖಿಲ್ ಹೆಸರು ಮುನ್ನೆಲೆಗೆ ಬಂದಿದೆ. ಮತ್ತೊಂದೆಡೆ, ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ  ಹೊಸ ಸರ್ಕಾರ  ರಚಿಸಿರುವ  ಭಾರತೀಯ ಜನತಾ ಪಕ್ಷ ಸಹ ಉಪ ಚುನಾವಣೆಗಳತ್ತ ಗಮನ ಹರಿಸುತ್ತಿದೆ. ವಿಧಾನಸಭೆಯಲ್ಲಿ  ಬಹುಮತ ಹೆಚ್ಚಿಸಿಕೊಳ್ಳುವ  ಪ್ರಯತ್ನಗಳು ನಡೆಯುತ್ತಿವೆ.  ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ  ಕಣಕ್ಕಿಳಿದರೆ  ಅವರ ವಿರುದ್ಧ  ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸಲು  ಬಿಜೆಪಿ  ಚಿಂತನೆ ನಡೆಸಿದೆ.