ಸರ್ವಧರ್ಮ ಸಾಮೂಹಿಕ ವಿವಾಹ ದೇಶಕ್ಕೆ ಮಾದರಿ

ಲೋಕದರ್ಶನ ವರದಿ

ಬೈಲಹೊಂಗಲ 22: ಜಾತಿ, ಮತ-ಪಂಥ ಎನ್ನದೇ ಮದರಸಾಗಳಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಮೂಲಕ ನಾವೇಲ್ಲರೂ ಭಾರತೀಯರು ಎಂದು ಸಂದೇಶ ಪಸರಿಸಿದ  ಕೀತರ್ಿ ಬೈಲಹೊಂಗಲ ಭಾಗದ ಹಿಂದೂ-ಮುಸ್ಲಿಂ ಭಾಂದವರಿಗೆ ಸಲ್ಲುತ್ತದೆ. ಇದು ದೇಶಕ್ಕೆ ಮಾದರಿಯಾಗಿದೆ ಎಂದು ಗುಜರಾತ ರಾಜ್ಯದ  ಶೇಖುಲ ಹದೀಸ ಜಾಮಿಯಾ ಅರಬಿಯಾ ಕಾಸಮಿಯಾ ಖರೋಡ ಹಜರತ ಮೌಲಾನಾ ಮುಹಮ್ಮದ ಹನೀಫ ಲೋಹಾರವಿ ಹೇಳಿದರು.

        ಅವರು ತಾಲೂಕಿನ ಬೈಲವಾಡ ಕ್ರಾಸ ಹತ್ತಿರದ ಮದರಸಾ-ಎ-ಅರಬಿಯಾ ಅನ್ವಾರೂಲ ಉಲೂಮದಲ್ಲಿ  ಶುಕ್ರವಾರ ನಡೆದ ಇಸ್ಸಾ ಫೌಂಡೇಶನ್ ಜಾಮಿಯಾ ಫೈಜಾನುಲ್ ಕುರಾನ ಅಹ್ಮದಾಬಾದ ಹಾಗೂ ಇಸ್ಲಾಮಿಯಾ ಸೋಶಿಯಲ್ ವೆಲಫೇರ್, ಏಜುಕೇಶನಲ್ ಸೊಸಾಯಿಟಿ ಬೈಲಹೊಂಗಲ ಇವರ ಸಂಯುಕ್ತ ಆಶ್ರಯದಲ್ಲಿ ಹಿಂದೂ ಹಾಗೂ ಮುಸ್ಲಿಂ ಧರ್ಮದ 100 ವಧುವರರ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಸ್ಸಾ ಫೌಂಡೆಶನ್ ವತಿಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಶಾರೀರಿಕ ಸದೃಡ ಸಂಪತ್ತು ಅಲ್ಲದೇ ಹಲವಾರು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜಮಖಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.

      ಇಂದಿನ ಕಷ್ಟದ ದಿನಮಾನಗಳಲ್ಲಿ  ಬಡ ಜನತೆಗೆ ಮದುವೆ ಮಾಡಿಕೊಳ್ಳಲು ಕಷ್ಟಕರವಾಗಿದೆ. ಕಷ್ಟವನ್ನು ದೂರಮಾಡಿ ಬಡವರು ಖುಷಿ ಜೀವನ ಸಾಗಿಸಲೆಂಬ ಇಸ್ಸಾ ಫೌಂಡೇಶನ್ ಉದ್ದೇಶ ಹೊಂದಿದೆ. ಭಾರತ ದೇಶ ಜಾತ್ಯಾತೀತ ದೇಶವೆಂದು ಇಡೀ ವಿಶ್ವಕ್ಕೆ ಸಂದೇಶ ಸಾರಲು ಈ ಉಚಿತ ಸಾಮೂಹಿಕ ವಿವಾಹಗಳನ್ನು ನೆರವೇರಿಸುತ್ತಿದ್ದೇವೆ ಎಂದರು.

       ಇಸ್ಸಾ ಪೌಂಡೇಶನ ಸರ್ವಧರ್ಮ ಸಾಮೂಹಿಕ ವಿವಾಹ ಮಾಡುವ ಮೂಲಕ ಅವರ ಬಾಳಿಗೆ ಬೆಳಕಾಗಿದೆ. ಮುಂಬರುವ ದಿನಗಳಲ್ಲಿ ಬೈಲಹೊಂಗಲದಲ್ಲಿ ಸಾವಿರಾರು ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುವ ಭರವಸೆ ನೀಡಿದರು. ಕೆಲವರು ವೋಟ ಬ್ಯಾಂಕಗೋಸ್ಕರ ರಾಜಕೀಯ ಮಾಡುತ್ತಿದ್ದು, ಇದಕ್ಕೆ ಯಾರೂ ಕಿವಿಗೊಡದೆ ಸಮಾಜದಲ್ಲಿ ಶಾಂತಿ, ಸೌಹಾರ್ಧತೆಯಿಂದ ಬಾಳಿ ಬದುಕಬೇಕಾಗಿದೆ. ರಕ್ತದಲ್ಲಿ ಯಾವುದೇ ಭೇದ ಭಾವವಿಲ್ಲ ಎಲ್ಲರ ರಕ್ತ ಒಂದೇಯಾಗಿದ್ದು ನಾವೇಲ್ಲರೂ ಭಾರತೀಯರು ಒಂದಾಗಿದ್ದವೆ, ಒಂದಾಗಿ ಬಾಳುತ್ತೇವೆ ಎಂದರದಲ್ಲದೇ ನವಜೋಡಿಗಳ ಜೀವನ ಹಾಲು ಜೇನಿನಂತಾಗಲಿ ಎಂದು ಹಾರೈಸಿದರು. ಮುರಗೋಡ-ಬೈಲವಾಡ  ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಇಂದಿನ ಪ್ರಸ್ತಕ್ತ ದಿನಮಾನಗಳಲ್ಲಿ ಸಮಾಜದಲ್ಲಿ ಆವೇಶಗಳ ಮಾತು ಶಾಶ್ವತವಲ್ಲ. ಆಯಾ ಧರ್ಮದ ತತ್ವ-ಸಿದ್ದಾಂತ ಪರಂಪರೆಯನ್ನು ತಮ್ಮ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಇಸ್ಸಾ ಫೌಂಡೇಶನ ವತಿಯಿಂದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹಿಂದೂ-ಮುಸ್ಲಿಂ, ಕ್ರೈಸ್ತ್ ಧರ್ಮಗಳಲ್ಲಿ ಭಾವೈಕ್ಯತೆ ಮೂಡಿಸುತ್ತಿರುವ ಕಾರ್ಯ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಗಿದೆ ಎಂದರು.

    ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಈ ನಾಡಿನಲ್ಲಿ ಹಿಂದೂ-ಮುಸ್ಲಿಂ, ಕ್ರೈಸ್ತ ಭಾಂದವರು ಸಹೋದರತ್ವ ಭಾವನೆಯಿಂದ ಕೂಡಿ ಬಾಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

  ಶಿವಾನಂದಮಠದ ಮಹಾದೇವ ಸ್ವಾಮೀಜಿ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಅಹ್ಮದಾಬಾದದ ಹಜರತ ಮೌಲಾನಾ ಹಬೀಬಸಾಹೇಬ, ಬೆಳಗಾವಿಯ ಹಜರತ ಮೌಲಾನಾ ಮುಫ್ತಿ ಅಬ್ದುಲಅಜೀಜ ಸಾಹೇಬ, ಮುಫ್ತಿ ಕಾಸೀಮಸಾಹೇಬ, ಸೆಂಟ್ ಪ್ರಾನ್ಸಿಸ್ ಜೇವಿಯರ್ ಚರ್ಚ ಫಾದರ್ ರಿಚರ್ಡ ಡಿ ಅಲ್ಮೇಡಾ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.

    ಮಾಜಿ ಶಾಸಕ ಪೈರೋಜ ಸೇಠ, ಮೌಲಾನಾ ಶೌಕತ ದೀವಾನಗೇರಿ, ಪುರಸಭೆ ಮಾಜಿ ಅಧ್ಯಕ್ಷ  ಬಿ.ಎಂ.ಕುಡಸೋಮನ್ನವರ, ಕೆ.ಎಲ್.ಇ.ನಿದರ್ೇಶಕ ಡಾ.ವ್ಹಿ.ಎಸ್.ಸಾಧುನವರ, ಬಸವರಾಜ ಬಾಳೇಕುಂದರಗಿ, ಚಿತ್ರನಟ ಶಿವರಂಜನ ಬೋಳಣ್ಣವರ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಜಿಪಂ.ಸದಸ್ಯ ಶಂಕರ ಮಾಡಲಗಿ, ರಮೇಶ ರಾಯಪ್ಪಗೋಳ ಮಾತನಾಡಿದರು.

  ವೇದಿಕೆ ಮೇಲೆ ಡಾ.ಸಿ.ಎಸ್.ಸಾಧುನವರ, ಕಾರ್ಖಾನೆ ಅಧ್ಯಕ್ಷ ಗುರುಪುತ್ರಪ್ಪ ಹೊಸಮನಿ, ವಕೀಲ ಶ್ರೀಶೈಲ ಬೋಳಣ್ಣವರ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಸೀಲ್ದಾರ ಡಾ.ದೊಡ್ಡಪ್ಪ ಹೂಗಾರ, ತಾಪಂ.ಇಓ ಸಮೀರ ಮುಲ್ಲಾ, ಶ್ರೀಶೈಲ ಆಲದಕಟ್ಟಿ, ದಯಾನಂದ ಮುಪ್ಪಯ್ಯನವರಮಠ, ರಾಜು ಸೇಠ, ಗ್ರಾಪಂ.ಅಧ್ಯಕ್ಷೆ ದೊಡ್ಡವ್ವ ಗಿರೆಪ್ಪಗೌಡರ, ಸುನಂದಾ ಬೆಳಗಾವಿ ತಾಲೂಕಿನ ಎಲ್ಲ  ಮೌಲ್ವಿಗಳು, ಗಣ್ಯರು ಇದ್ದರು.

    ಮಠಾಧೀಶರು, ಮೌಲ್ವಿಗಳು, ಕ್ರೈಸ್ತ ಧರ್ಮಗುರುಗಳ ಸಮ್ಮುಖದಲ್ಲಿ ಸರ್ವಧರ್ಮದ ವಧು-ವರರು ತಮ್ಮ ಧರ್ಮದ ಸಂಪ್ರದಾಯ, ವಿಧಿ-ವಿಧಾನಗಳಿಗೆ ಅನುಗುಣವಾಗಿ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನವಜೋಡಿಗೆ ಭಗವದ್ಗೀತೆ, ಕುರಾನ್ ಧರ್ಮಗ್ರಂಥಗಳನ್ನು ನೀಡಿ  ಹರಿಸಿದರು.

    ಡಾ.ಎಸ್.ಐ.ಖಾಜಿ,  ಡಾ.ಎಸ್.ಎಂ.ಸಂಗೊಳ್ಳಿ, ಅಖ್ತರ ತಾಳಿಕೋಟಿ, ಸಲೀಂ ತಿಗಡಿ, ಮಹ್ಮದಸಾಬ ನದಾಫ, ಮಹ್ಮದಹಾಶೀಂ ಕಂಪು, ಮುಪ್ತಿ ಅಬ್ಬಾಸ ರಫಾಯಿ, ದಸ್ತಗೀರಸಾಬ ದಾಸ್ತಿಕೊಪ್ಪ, ಬುಡ್ಡೇಸಾಬ ಮದಲಮಟ್ಟಿ, ಮಹ್ಮದರಫೀಕ ನಾಯಿಕ, ಶಫೀ ಹುಬ್ಬಳ್ಳಿ, ತಮೀಮ ಮಾನೂರಶೇಖ, ಹಾಫೀಜ ಇಸಾಕ ದೇಸಾಯಿ, ಫಕ್ರುದ್ದೀನ ಮೊಖಾಶಿ, ಶಕೀಲ ಸೈಯದ ಹಾಗೂ ತಾಲೂಕಿನ ಎಲ್ಲ ಹಿಂದೂ-ಮುಸ್ಲಿಂ ಸಹಸ್ರಾರು ಭಾಂದವರು ಇದ್ದರು. ಕುಡಿಯುವ ನೀರು, ಸಸ್ಯಾಹಾರಿ ಭೋಜನ, ಪಾರ್ಕಿಂಗ್  ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು. 

    ಅಹ್ಮದಾಬಾದದ ಇಸ್ಸಾ ಫೌಂಡೇಶನ್ ಜಾಮಿಯಾ ಫೈಜಾನುಲ್ ಕುರಾನ ವತಿಯಿಂದ ವಧುವರರಿಗೆ  ಐದು ಜೊತೆ ಸಮವಸ್ತ್ರ, ಪ್ರಿಜ್, ಹೊಲಿಗೆಯಂತ್ರ, ಪಲ್ಲಂಗ, ಕುರ್ಚಿ, ಬಾಂಡೆ ಸಾಮಾಗ್ರಿಗಳು, ಟ್ರೇಜರಿ ಹೀಗೆ ಇನ್ನೂ ಅನೇಕ ಮನೆ ಬಳಕೆ ಸಾಮಾಗ್ರಿಗಳನ್ನು ಸುಮಾರು  60 ಸಾವಿರ ರೂಪಾಯಿ ಬೆಲೆಯುಳ್ಳ ಸಾಮಾಗ್ರಿಗಳನ್ನು ನೀಡಲಾಯಿತು.

    ಮಹಾಂತೇಶ ತುರಮರಿ ನಿರೂಪಿಸಿದರು. ಬಾಪು ಸೈಯದ ಸ್ವಾಗತಿಸಿದರು. ಮೌಲಾನಾ ಶೌಕತ ದೀವಾನಗೇರಿ ವಂದಿಸಿದರು.