ಲೋಕದರ್ಶನವರದಿ
ರಾಣೇಬೆನ್ನೂರು14: ಇಂದಿನ ಆಧುನಿಕ ಯುಗದಲ್ಲಿ ಯಾವುದೇ ಕ್ಷೇತ್ರದಲ್ಲಿ ಅಭುತಪೂರ್ವ ಯಶಸ್ಸು ತಮ್ಮದಾಗಬೇಕಾದರೆ ಮೊದಲು ನಮ್ಮ ಮನಸ್ಸನ್ನು ಕೇಂದ್ರಿಕರಿಸುವುದು ಮಹತ್ವದ ಪ್ರಯತ್ನವಾಗಿರಬೇಕು. ಪ್ರತಿಯೊಬ್ಬ ವಿದ್ಯಾಥರ್ಿಯಲ್ಲಿ ಅಸಾಮಾನ್ಯ ಶಕ್ತಿ ಅಡಕವಾಗಿದೆ. ನೀವುಗಳು ಭವಿಷ್ಯದ ಬದುಕಿನ ಉನ್ನತ ಬದಲಾವಣೆಯ ಹರಿಕಾರರಾಗಬೇಕೆಂದರೆ ವಿದ್ಯಾಥರ್ಿ ಜೀವನದಲ್ಲಿ ಸಾಮಾಜಿಕ, ಕೌಟುಂಬಿಕ, ಶೈಕ್ಷಣಿಕ ಮತ್ತು ವಯಕ್ತಿಕ ಸಮಸ್ಯೆಗಳನ್ನು ಮೆಟ್ಟಿ ನಿಂತಾಗ ಮಾತ್ರ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬಹುದು ಎಂದು ತಹಶೀಲ್ದಾರ ಬಸವರಾಜ ಕೋಟೂರ ಹೇಳಿದರು.
ಜಿಪಂ, ತಾಪಂ ಮತ್ತು ಸಮಾಜ ಕಲ್ಯಾಣ ಇಲಾಖೆ ನತ್ತು ನಂದೀಶ್ವರ ಅಮ್ಕಾಡ್ ಸಂಸ್ಥೆ ಇವರ ಆಶ್ರಯದಲ್ಲಿ ತಾಲೂಕಿನ ಪೂರ್ವ ಮೆಟ್ರಿಕ್ ಮತ್ತು ಮೆಟ್ರಿಕ್ನಂತರದ ಹಾಸ್ಟೇಲ್ನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾಥರ್ಿಗಳಿಗೆ ಶ್ರೀರಾಮ ನಗರದ ಬಾಲಕಿಯರ ಮೆಟ್ರಿಕ್ ವಸತಿ ನಿಲಯದಲ್ಲಿ ಏರ್ಪಡಿಸಿದ್ದ ವಾಷರ್ಿಕ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಪೂರ್ವ ತಯಾರಿ ಕುರಿತು ಒಂದು ದಿನದ ವಿಶೇಷ ನೈಪುಣ್ಯ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಧನೆಯ ಛಲ, ಛಲದೊಂದಿಗೆ ಗುರಿ ಮುಟ್ಟುವ ಆತ್ಮವಿಶ್ವಾಸ ತಮ್ಮಲ್ಲಿದ್ದರೆ ಸಾಧನೆಗೆ ಕೊನೆ ಇಲ್ಲದಂತಾಗುತ್ತದೆ ಎಂದರು.
ನಂದೀಶ್ವರ ಅಮ್ಕಾಡ್ ಸಂಸ್ಥೆಯ ತರಬೇತಿದಾರ ನಂದೀಶ ಬಿಬಿ ಶೆಟ್ಟರ್ ಮಾತನಾಡಿ, ಇಂದಿನ ಬಹುತೇಕ ವಿದ್ಯಾಥರ್ಿಗಳು ಕಠಿಣ ಶ್ರಮವಹಿಸದೆ ಸೋಮಾರಿತನದಿಂದ ಜೀವನವನ್ನು ಸವೆಸುತ್ತಿದ್ದಾರೆ. ಇದರಿಂದ ತಮ್ಮ ಜೀವನವನ್ನು ತಾವೇ ಅಧೋಗತಿಯತ್ತ ಕೊಂಡೊಯ್ಯುತ್ತಿದ್ದಾರೆ. ಪರಸ್ಥಿತಿ ಹೀಗೆ ಮುಂದುವರೆದರೆ ತಂದೆ-ತಾಯಿ ಹಾಗೂ ಇಡೀ ಸಮಾಜಕ್ಕೆ ಹೊರೆಯಾಗಿ ಬದುಕಬೇಕಾಗುತ್ತದೆ. ಸದಾ ಲವಲವಿಕೆಯಿಂದ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವುದರ ಜೊತೆಗೆ ಉಜ್ವಲ ಭವಿಷ್ಯ ಹೊಂದಬೇಕೆಂದರು.
ಶಾಲಾ ಕಾಲೇಜುಗಳಲ್ಲಿ ಪ್ರತಿನಿತ್ಯದ ಪಾಠಗಳನ್ನ ಅಂದೇ ಓದಿ, ಬರೆದು ಮತ್ತು ವಿಶ್ಲೇಷಣೆಯ ಪುನರಾವರ್ತನೆ ಮಾಡುತ್ತ ಬಂದರೆ ಉತ್ತಮ ನಿರೀಕ್ಷೆಯ ಫಲಿತಾಂಶ ನಿಮ್ಮದಾಗುತ್ತದೆ. ಅಂಕಗಳಿಸುವುದಕ್ಕೋಸ್ಕರ ಕಷ್ಟ ಪಟ್ಟು ಓದುವುದಕ್ಕಿಂತ, ತಮ್ಮ ಜ್ಞಾನದ ಭಂಡಾರವನ್ನು ಇಮ್ಮಡಿಗೊಳಿಸಲು ಇಷ್ಟಪಟ್ಟು ಓದಿದಾಗ ಶೈಕ್ಷಣಿಕ ಕ್ಷೇತ್ರದಲ್ಲಿ ಎಲ್ಲವೂ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ವಿದ್ಯಾಥರ್ಿಗಳೂ ಸಹ ಇಷ್ಟಪಟ್ಟು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕಂದರು.
ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳೊಂದಿಗೆ ಸಂವಾದದ ಮೂಲಕ ನೆನಪಿನ ಶಕ್ತಿ, ಏಕಾಗ್ರತೆ, ಭಯನಿವಾರಣೆ, ಮೆದುಳಿನ ನಿರ್ವಹಣೆ ಕುರಿತಂತೆ ತರಬೇತಿ ನೀಡಲಾಯಿತು. ತಾಲೂಕಿನ ಏಳು ಹಾಸ್ಟೆಲ್ನ ವಿದ್ಯಾಥರ್ಿಗಳು 300 ಕ್ಕೂ ಅಧಿಕ ವಿದ್ಯಾಥರ್ಿಗಳು ತರಬೇತಿಯ ಪ್ರಯೋಜನ ಪಡೆದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದರ್ೇಶಕಿ ಕೌಶೀರಾ ಭಾನು, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು