ಲೋಕದರ್ಶನ ವರದಿ
ಬೈಲಹೊಂಗಲ 14: ರಾಜ್ಯ ಸರಕಾರದಿಂದ ನೂರಾರು ಕೋಟಿ ವೆಚ್ಚದಲ್ಲಿ ಸಂಗೊಳ್ಳಿ ಗ್ರಾಮದಲ್ಲಿ ನಿಮರ್ಿಸುತ್ತಿರುವ ಸಂಗೊಳ್ಳಿ ರಾಯಣ್ಣ ಮಾದರಿ ಸೈನಿಕ ಶಾಲೆ ರಾಷ್ಟ್ರೀಯ ಮಾನ್ಯತೆ ಸಿಗುವಂತಾಗಬೇಕೆಂದು ಬೆಳಗಾವಿ ಲಿಂಗರಾಜ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ಹೇಳಿದರು.
ದಿ.13ರಂದು ಸಂಗೊಳ್ಳಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಉತ್ಸವ-2020 ನಿಮಿತ್ಯ ವಿಚಾರ ಸಂಕೀರಣ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ವ್ಯಾಪ್ತಿಯ ವಿದ್ಯಾಥರ್ಿಗಳು ಸಂಗೊಳ್ಳಿ ಗ್ರಾಮಕ್ಕೆ ಬಂದು ಕಲಿಯುವಂತಾಗಬೇಕು. ಮಕ್ಕಳಿಗೆ ಒಳ್ಳೆಯ ಗುಣಮಟ್ಟ ಶಿಕ್ಷಣ, ನುರಿತ ಶಿಕ್ಷಕರು ನೇಮಕವಾಗಬೇಕು. ದೇಶದ ಸಂಸತ ಭವನ ಮುಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಿ ರಾಯಣ್ಣನ ಶೌರ್ಯ ಸಾಹಸ ದೇಶದ್ಯಾಂತ ಪಸರಿಸುವಂತಾಗಬೇಕು ಎಂದರು.
ರಾಷ್ರ್ಟೀಯ ವೀರರ ಸ್ಮಾರಕಗಳು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರಗಳಾಗಬೇಕು. ಮೊಟ್ಟಮೊದಲ ಬಾರಿಗೆ ಬೆಳಗಾವಿಯಲ್ಲಿ 1959 ರಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆ ಆಗಿದೆ ಎಂದರು. ಯುವಕರಿಗೆ ರಾಯಣ್ಣನ ಸ್ಪೂತರ್ಿದಾಯಕವಾಗುವಂತಹ ಕಾರ್ಯಗಳಾಗಬೇಕು ಎಂದರು. ಈ ನಿಟ್ಟಿನಲ್ಲಿ ರಾಯಣ್ಣನ ಉತ್ಸವವನ್ನು ಸರಕಾರ ಪ್ರತಿವರ್ಷ ಆಚರಣೆ ಮಾಡುತ್ತಿರುವುದು ಹರ್ಷದಾಯಕವಾಗಿದೆ ಎಂದರು.
ಧಾರವಾಡ ಜನಪದ ಕನರ್ಾಟಕ ಪರಿಷತ ಅಧ್ಯಕ್ಷ ಡಾ.ಶ್ರೀಶೈಲ ಹುದ್ದಾರ ಅವರು ಜನಪದ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪಾತ್ರದ ಕುರಿತು ಮಾತನಾಡಿ, ಸಂಗೊಳ್ಳಿ ರಾಯಣ್ಣನ ಜಾನಪದ ಸಾಹಿತ್ಯ ಪುಸ್ತಕ ರೂಪದಲ್ಲಿ ಹೊರ ಬರಬೇಕೆಂದು ಒತ್ತಾಯಿಸಿದರು.
ಧಾರವಾಡ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ ಕನರ್ಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರು ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಈ ವಿಷಯದ ಕುರಿತು ಮಾಮರ್ಿಕವಾಗಿ ಮಾತನಾಡಿದರು.
ನರಗುಂದ ಎಸ್.ಎಸ್.ಸರಕಾರಿ ಪದವಿ ಕಾಲೇಜು ಉಪನ್ಯಾಸಕ ಡಾ.ಎ.ಬಿ. ವಗ್ಗರ ಮಾತನಾಡಿ, ಕಿತ್ತೂರು ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಕುರಿತಾದ ಆಂಗ್ಲ ದಾಖಲೆಗಳ ಸಂಶೋಧನೆ ಹಾಗೂ ಅಧ್ಯಯನ ನಡೆಯಬೇಕು. ಕೆಲವೇ ದಿನಗಳಲ್ಲಿ ಕಿತ್ತೂರು ಸಂಸ್ಥಾನದ ದಾಖಲೆಗಳು ಸಂಪುಟ 1 ಕೃತಿ ಲೋಕಾರ್ಪಣೆಗೊಳ್ಳಲಿದೆ ಎಂದರು.
ತಾ.ಪಂ ಅಧ್ಯಕ್ಷೆ ನೀಲವ್ವ ರಾ.ಫಕೀರಣವರ ಸಮಾರಂಭ ಉದ್ಘಾಟಿಸಿದರು. ವೇದಿಕೆ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ, ತಾ.ಪಂ ಸದಸ್ಯ ಗೌಸಸಾಬ ಬುಡ್ಡೇಮುಲ್ಲಾ, ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ಹಳೆಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ ಇದ್ದರು. ಈ ಸಂದರ್ಭದಲ್ಲಿ ನೂರಾರು ವಿದ್ಯಾಥರ್ಿಗಳು, ಗ್ರಾಮಸ್ಥರು ಇದ್ದರು. ರಾಜು ಅಕ್ಕಿ ನಿರೂಪಿಸಿದರು. ಬಸವರಾಜ ಕಮತ ವಂದಿಸಿದರು