ಶಿವಯೋಗಿಗಳ ಸ್ಮರಣೆ ಮಾಡುವುದೇ ಮಹಾಪುಣ್ಯ

ಲೋಕದರ್ಶನವರದಿ

ರಾಣೇಬೆನ್ನೂರು09: ಸರ್ವ ಸಮಾಜದ ಏಳ್ಗೆಗಾಗಿ ಶ್ರಮಿಸಿದ ಹಾನಗಲ್ ಗುರುಕುಮಾರ ಶಿವಯೋಗಿಗಳ ಸ್ಮರಣೆ ಮಾಡುವುದೇ ಮಹಾ ಪುಣ್ಯ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.

   ಅವರು ಶನಿವಾರ ಇಲ್ಲಿನ ಪಟ್ಟಣಶೆಟ್ಟಿಯವರ ಓಣಿಯ ಹಿರೇಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಏರ್ಪಡಿಸಿದ್ದ ಲಿಂ. ಹಾನಗಲ್ ಗುರು ಕುಮಾರಸ್ವಾಮಿಗಳ ಸಂಸ್ಮರಣೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

  12ನೇ ಶತಮಾನದ ಜಗಜ್ಯೋತಿ ಬಸವಣ್ಣ ಹಾಗೂ ನೀಲಾಂಬಿಕೆಯ 2ನೇಯ ಅವತಾರವೇ ರಾಣಿಬೆನ್ನೂರ ತಾಲೂಕಿನ ಜೋಯಿಸರಹರಳಹಳ್ಳಿಯ ಬಸಯ್ಯ ಹಿರೇಮಠ ನೀಲಮ್ಮ ದಂಪತಿಗಳ ಉದರದಲ್ಲಿ ಜನಿಸಿದ ಹಾನಗಲ್ ಕುಮಾರ ಶಿವಯೋಗಿಗಳು ಎಂದು ನುಡಿದರು. 

     ಮೋಕ್ಷದ ಬದಲು ಪುನರ್ಜನ್ಮವನ್ನು ಇಚ್ಚೆ ಪಟ್ಟವರಲ್ಲಿ ದ್ವಾಪಾರಯುಗದ ಶ್ರೀಕೃಷ್ಣ ಪರಮಾತ್ಮ ಮತ್ತು ಕಲಿಯುಗದ ಹಾನಗಲ್ ಕುಮಾರ ಶಿವಯೋಗಿಗಳು. ಇಂದಿನ ವಿಜ್ಞಾನಕ್ಕೆ ಇದ್ದ ಪ್ರಾಮುಖ್ಯತೆ ಅಂದಿನ ಕಾಲಾಜ್ಞಾನಕ್ಕೆ ಇತ್ತು, ಗಟ್ಟಿಮಾಳಯ್ಯ ಹಾಗೂ ಚನ್ನಬಸವಣ್ಣರು ತಮ್ಮ ವಚನಗಳಲ್ಲಿ ಅಂದೇ ಕಾಲಜ್ಞಾನ ಕುರಿತು ಅಂದೆಯೇ ಕನರ್ಾಟಕದ ಜೋಯಿಸರಹರಳ್ಳಿಯಲ್ಲಿ ಜನ್ಮ ತಾಳುವ ಬಸಯ್ಯ ಹಾಗೂ ನೀಲಮ್ಮ ಹಿರೇಮಠ ದಂಪತಿಗಳ ಉದರದಲ್ಲಿ ಕುಮಾರ ಶಿವಯೋಗಿಗಳು ಜನಿಸಿದವರಾಗಿದ್ದಾರೆ ಎಂದರು. 

    ಬಡ ಜಂಗಮ ದಂಪತಿಗಳ ಉದರದಲ್ಲಿ ಜನಿಸಿದ ಹಾಲಯ್ಯ ಭಿಕ್ಷೆ ಬೇಡಿ ಕುಟುಂಬವನ್ನು ರಕ್ಷಿಸುವುದು ಸಾಮಾನ್ಯವಾಗಿತ್ತು. ಬಡ ಕುಟುಂಬದಲ್ಲಿ ಹಾಲಯ್ಯ ಗುರುಕುಲದಲ್ಲಿ 7ನೇ ತರಗತಿಯ ಪರೀಕ್ಷೆ ಪೇಲಾಗಿದ್ದು, ಅದನ್ನು ನಕರಾತ್ಮಕವಾಗಿ ಸ್ವೀಕರಿಸದೆ ಸಕಾರಾತ್ಮಕವಾಗಿ ಸ್ವೀಕರಿಸಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಶಾಲೆ ತೆರೆದು ಬಹಳಷ್ಟು ಬಡ ಮಕ್ಕಳಿಗೆ ವಿದ್ಯಾಧಾನ ಮಾಡಿದ್ದು, ಅವರ ಬದುಕಿಗೆ ಹೊಸ ತಿರುವು ನೀಡಿತು ಎಂದರು. 

    ನಿಜಗುಣ ಶಿವಯೋಗಿಗಳವರ ಶಿಷ್ಯರಾಗಿ ಅವರ ಕೈವಲ್ಯ ಪದ್ಧತಿಯ ಮೋಕ್ಷದ ದಾರಿಗೆ ಮಾರುಹೋಗಿ ಸರ್ವ ಸಮಾಜವನ್ನು ಸಂಸ್ಕಾರ ಹಾಗೂ ಸಂಸ್ಕೃತಿಗೆ ತಂದರವಲ್ಲಿ ಮೊದಲಿಗರು, ಅಂದು ಅವರು ಜನ್ಮ ತಾಳದಿದ್ದರೆ ಅಂಧರ ಬದುಕು ಕತ್ತಲೆಯಾಗುತ್ತಿತ್ತು. ಗದುಗಿನ ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳವರು ಶಿವಯೋಗಿಗಳ ಶಿಷ್ಯರಾಗಿ ಅಂಧರ ಬಾಳಿಗೆ ಬೆಳಕು ನೀಡಿದವರು, ಅವರು ಶಿವಯೋಗಿ ಮಂದಿರ ಸ್ಥಾಪಿಸಿ ಅಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಮೂಲಕ ಸಂಗೀತ, ಸಾಹಿತ್ಯ, ಕನ್ನಡದ ಉಳುವಿಗಾಗಿ ಬಹಳಷ್ಟು ಶ್ರಮಿಸಿದ ಮಹಾ ಪುರುಷರು. ಅವರನ್ನು ನೆನೆಯುವುದೇ ನಮ್ಮ ಭಾಗ್ಯ ಎಂದರು. 

       1904 ರಲ್ಲಿ ವೀರಶೈವ ಮಹಾಸಭಾ ಸ್ಥಾಪಿಸಿ ವೀರಶೈವ ಸಮಾಜದ ಏಳ್ಗೆಗಾಗಿ ಶ್ರಮಿಸಿದ ಮಹಾಪುಣ್ಯ ಪುರುಷರು ಅವರು. ಯೋಗವನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಜಾರಿಗೆ ತಂದವರು ಶಿವಯೋಗಿಗಳು. ಉತ್ತರಪ್ರದೇಶದ ಕುಂಭಮೇಳದಲ್ಲಿ ಯೋಗ ಪ್ರದಶರ್ಿಸಿದರು. ಅಲ್ಲದೇ ರಾಜ್ಯದಲ್ಲಿ ಗೋಶಾಲೆ ತೆರೆದವರು ಮೊದಲಿಗರು. ಎಷ್ಟೇ ಸಾಧನೆ ಕಾಯಕ ಮಾಡಿದರೂ ಎಲ್ಲಿಯೂ ಹೆಸರನ್ನು ಉಲ್ಲೇಖಿಸದೆ ಎಲೆಮರೆ ಕಾಯಿಯಂತೆ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾ ಪುರುಷರು ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.  

ಆವರಗೊಳ್ಳದ ಓಂಕಾರ ಸ್ವಾಮಿಗಳು ಲಿಂ. ಹಾನಗಲ್ ಗುರು ಕುಮಾರಸ್ವಾಮಿಗಳ ಸಂಸ್ಮರಣೋತ್ಸವ ಉದ್ಘಾಟಿಸಿದರು. ಸ್ಥಳೀಯ ಪುಟ್ಟಯ್ಯನ ಮಠದ ಗುರುಬಸವ ಸ್ವಾಮಿಗಳು, ಮಣಕೂರ ಮಲ್ಲಿಕಾಜರ್ುನ ಶ್ರೀಗಳು ಉದೇಶಾಮೃತ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಿ.ಬಿ. ಮಾಸಣಗಿ ಉಪನ್ಯಾಸ ನೀಡಿದರು

      ಮಹಾಸಭಾದ ಕಾರ್ಯದಶರ್ಿ ಚಂದ್ರಣ್ಣ ಸೊಪ್ಪಿನ, ಎ.ಎಸ್. ಹಿರೇಮಠ, ಕೆ.ಎಂ. ಬಂದಮ್ಮನವರ, ಹಾಲಯ್ಯ ಶಾಸ್ತ್ರಿಗಳು, ಎಂ.ಎಸ್. ಕೋರಿಶೆಟ್ಟರ, ಪ್ರಭಾವತಿ ತಿಳವಳ್ಳಿ, ಎಂ,ಚನ್ನಬಸಪ್ಪ, ಕಸ್ತೂರಮ್ಮ ಪಾಟೀಲ, ಗಾಯತ್ರಮ್ಮ ಕುರವತ್ತಿ, ಪ್ರಭು ಹಲಗೇರಿ ಸೇರಿದಂತೆ  ಮತ್ತಿತರ ಗಣ್ಯರು ಉಪಸ್ಥಿತರಿದ್ದರು.