ಲಾಡ್ಸರ್್ 11: ಮೊದಲ ದಿನ ನಿರಂತರ ಮಳೆ, ಎರಡನೇ ದಿನ ಮಳೆಯ ನಡುವೆ ಆಟವಾಡಿದ ಭಾರತ ತಂಡ ಕೇವಲ 107 ರನ್ಗಳಿಗೆ ಆಲೌಟ್ ಆಗಿದೆ.
ಒಂದುಕಡೆ ಮಳೆ, ಇನ್ನೊಂದು ಕಡೆ ಇಂಗ್ಲೆಂಡ್ ಬೌಲರ್ಗಳ ಬಿರುಸಿನ ದಾಳಿಗೆ ಕಂಗೆಟ್ಟ ಟೀಮ್ ಇಂಡಿಯಾದ ಯಾವೊಬ್ಬ ಆಟಗಾರನೂ ಕ್ರೀಸ್ನಲ್ಲಿ ಸ್ಥಿರವಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಪರಿಣಾಮ ಕೇವಲ 107 ರನ್ಗಳಿಗೆ ಸರ್ವಪತನ ಕಂಡಿತು.
ಆದರೆ ಪಂದ್ಯದ ಬಳಿಕ ಮಾತನಾಡಿದ ತಂಡದ ಉಪ ನಾಯಕ ಅಜಿಂಕ್ಯ ರಹಾನೆ, ಇಂತಹ ವಾತಾವರಣದಲ್ಲಿ ಯಾವುದೇ ತಂಡವಾದರೂ ಇದೇ ಪರಿಸ್ಥಿತಿ ಎದುರಿಸಬೇಕಾಗಿತ್ತು. ನಮ್ಮ ಆಟವೂ ಉತ್ತಮವಾಗಿರಲಿಲ್ಲ. ಆದರೆ ಪಂದ್ಯ ಇನ್ನು ಮುಗಿದಿಲ್ಲ. ಇಂಗ್ಲೆಂಡ್ ಬೌಲಿಂಗ್ ಉತ್ತಮವಾಗಿತ್ತು ಎಂದ ರಹಾನೆ, ಎರಡನೇ ಇನ್ನಿಂಗ್ಸ್ನಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್ ನಡೆಸಿ ಸ್ಪಧರ್ಾತ್ಮಕ ಗುರಿ ನೀಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಪಂದ್ಯ ಅರ್ಧ ಮಾತ್ರ ಮುಗಿದಿದ್ದು, ಇನ್ನು 3 ದಿನ ಆಟ ಬಾಕಿ ಇದೆ. ಈ ಪಂದ್ಯದಲ್ಲಿ ನಾವು ಸೋತಿದ್ದೇವೆ ಎಂದುಕೊಳ್ಳದೆ ಆಡಬೇಕಿದೆ. ಮೊದಲು ನಮಗೆ ನಂಬಿಕೆ ಮುಖ್ಯ. ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದಕ್ಕೆ ಇನ್ನು ಸಮಯವಿದೆ. ಪಂದ್ಯ ಮುಗಿದ ನಂತರ ಸರಣಿ 1-1 ರಲ್ಲಿ ಸಮವಾಗಬಹುದು ಎಂದು ಅಭಿಪ್ರಾಯಪಟ್ಟರು.