ಲೋಕದರ್ಶನ ವರದಿ
ಬೆಳಗಾವಿ, 15: ದಲಿತ ಸಂಘರ್ಷ ಸಮಿತಿಗಳು ಸೇರಿದಂತೆ ಶೋಷಿತ ಮತ್ತು ಹಿಂದುಳಿದ ವರ್ಗಗಳ ಎಲ್ಲ ಸಂಘಟನೆಗಳು ತಮ್ಮ ಹೋರಾಟದ ದಾರಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದ್ದಾರೆ.
ಬಡ್ತಿ ವಿಷಯದಲ್ಲಿ ಸುಪ್ರೀಂ ಕೋಟರ್್ ನೀಡಿರುವ ತೀಪರ್ಿನ ವಿರುದ್ಧ ನಗರದ ಬೆನನ್ ಸ್ಮಿತ್ ಕಾಲೇಜ್ ಆವರಣದಲ್ಲಿ ಕನರ್ಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರದಂದು ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಶಕಗಳ ಸುಧೀರ್ಘ ಹೋರಾಟದ ನಂತರವೂ ಬೇಡಿಕೆಗಳು ಈಡೇರುತ್ತಿಲ್ಲ. ಈ ನಡುವೆ ಹೋರಾಟದಲ್ಲಿ ರಾಜಕಾರಣ ಸೇರಿಕೊಳ್ಳುತ್ತಿದೆ. ಯುವಕರನ್ನು ದಾರಿ ತಪ್ಪಿಸುವ ವ್ಯವಸ್ಥಿತ ಸಂಚು ನಡೆದಿದೆ. ಹೋರಾಟದ ಫಲ ಶೂನ್ಯವಾಗುತ್ತಿದೆ. ನಮ್ಮವರಿಂದ ಆಯ್ಕೆಯಾಗಿ ಹೋದವರು ನಮ್ಮಿಂದಲೇ ಆಯ್ಕೆಯಾಗಿದ್ದೇವೆ ಎಂದು ಹೇಳಿಕೊಳ್ಳುತ್ತಿಲ್ಲ. ನಮ್ಮಿಂದಲೇ ಆಯ್ಕೆಯಾಗಿದ್ದಾರೆ ಎಂಬುದನ್ನು ಸಾಬೀತು ಪಡಿಸುವಷ್ಟು ನಾವು ಬಲಿಷ್ಠರಾಗಬೇಕಿದೆ ಎಂದರು.
ಕೇವಲ ಆಕ್ರೋಶದ ಮಾತುಗಳಿಂದ ಏನನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಬದುಕಿನ ನಿಜ ಚಿತ್ರಣ ಅರಿಯಬೇಕಾಗಿದೆ. ಮತದಾರರನ್ನು ಜಾಗೃತಗೊಳಿಸಬೇಕಾಗಿದೆ. ಆ ಮೂಲಕ ನಮ್ಮವರನ್ನು ಆಯ್ಕೆ ಮಾಡಬೇಕಾಗಿದೆ. ಸಮುದಾಯದ ಯಾವ ಜಾತಿಯ ಮೇಲೂ ಅನ್ಯಾಯವಾದರೇ ಎಲ್ಲರೂ ಒಟ್ಟಾಗಿ ಪ್ರತಿಭಟಿಸಬೇಕಾಗಿದೆ. ಒಗ್ಗಟ್ಟಿನ ಪ್ರದರ್ಶನ ನಡೆಯಬೇಕಾಗಿದೆ. ಮನುವಾದದ ವಿರುದ್ಧ ಸಂಘಟಿತ ಹೋರಾಟಕ್ಕೆ ಅಣಿಯಾಗಬೇಕಾಗಿದೆ ಎಂದರು.
ಕೇಂದ್ರ ಸರಕಾರದ ಇತ್ತೀಚಿನ ನಡೆಗಳು ಅಪಾಯಕಾರಿಯಾಗಿವೆ. ಆ ಅಪಾಯಗಳ ವಿರುದ್ಧ ಬೃಹತ್ ಶಕ್ತಿ ಪ್ರದರ್ಶನ ಆಗಬೇಕಿದೆ ಎಂದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯಕರ ಮಾತನಾಡಿ, ಸಂವಿಧಾನ ಪ್ರತಿಗಳಿಗೆ ಬೆಂಕಿ ಹಚ್ಚುವ ದುಸ್ಸಾಹಸ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಇಡಿ ಶೋಷಿತ ಸಮುದಾಯವು ಬುದ್ದ ಬಸವ ಅಂಬೇಡ್ಕರರ ಸಿದ್ದಾಂತದ ಅಡಿಯಲ್ಲಿ ಹೋರಾಟ ನಡೆಸಬೇಕಾಗಿದೆ. ಆ ಮೂಲ ಸಿದ್ದಾಂತವನ್ನು ಅರಿಯದರಿಂದ ಹೋರಾಟಗಳು ಫಲ ನೀಡುತ್ತಿಲ್ಲ ಎಂದರು.
ಹೋರಾಟಗಾರರು ರಾಜಕೀಯದ ತಂತ್ರಗಳನ್ನು ಅರಿಯಬೇಕು. ಹೋರಾಟದ ಮೂಲಕ ನಾಯಕತ್ವಗಳನ್ನು ರೂಪಿಸಬೇಕು. ಹೋರಾಟದ ಮೂಲಕ ನಾಯಕರಾದವರು ಮತ್ತೆ ಹೋರಾಟದ ಅನಿವಾರ್ಯತೆ ಎದುರಾದಾಗ ಹೋರಾಟಗಾರರ ಪರ ನಿಲ್ಲಬೇಕು. ಅಂತಹ ನಾಯಕತ್ವಗಳನ್ನು ರೂಪಿಸಬೇಕಾಗಿದೆ ಎಂದರು.
ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. ಸತ್ಯ ಭದ್ರಾವತಿ ಸ್ವಾಗತಿಸಿದರು. ಮರೀಶ ನಾಗಣ್ಣವರ ಪ್ರಾಸ್ತಾವಿಕ ಮಾತನಾಡಿದರು.
ಪ್ರಕಾಶ ತಳವಾರ, ಲಕ್ಷ್ಮಣ ಯಳ್ಳೂರಕರ, ಮಾರುತಿ ರಂಗಾಪೂರ, ಬಾಬು ಪೂಜಾರಿ, ಮುಂಡರಗಿ ನಾಗರಾಜ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.