ದೇವರ ಸ್ಮರಣೆಯಿಂದ ಮನುಷ್ಯ ಒಳ್ಳೆಯವನಗುತ್ತಾನೆ: ಅಲ್ಲಾಸಾಬ

ಲೋಕದರ್ಶನ ವರದಿ

ಯಲಬುಗರ್ಾ 11: ಪರಸ್ಪರ  ಪ್ರೀತಿ ಸೌಹಾರ್ದತೆಯಿಂದ ಬಾಳಬೇಕು ಅಂದಾಗ ಸಮಾಜದಲ್ಲಿ ಇತರರೊಂದಿಗೆ ಉತ್ತಮ ಸಹಬಾಳ್ವೆ ನಡೆಸಲು ಸಾಧ್ಯವಾಗುತ್ತದೆ ಎಂದು ಮುಖಂಡರಾದ ಅಲ್ಲಾಸಾಬ ವಾಲಿಕಾರ ಹೇಳಿದರು.

ತಾಲೂಕಿನ ದಮ್ಮೂರು ಗ್ರಾಮದಲ್ಲಿ ಸುನ್ನಿ ಜಾಮಿಯಾ ಮಸ್ಜಿದ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಭೂಮಿಯ ಮೇಲೆ ಯಾರು ಶಾಸ್ವತವಲ್ಲಾ ನಮ್ಮ ಆಯುಷ್ಯ ಮುಗಿದ ಮೇಲೆ ಎಲ್ಲರು ಮಣ್ಣಲ್ಲಿ ಮಣ್ಣಾಗುವವರೆ ಆದ್ದರಿಂದ ಇರುವಷ್ಟು ದಿನ ಇತರೆ ಸಮಾಜದ ಬಾಂದವರೊಂದಿಗೆ ಅತ್ಯಂತ ಪ್ರೀತಿ ವಿಶ್ವಾಸದಿಂದ ಇರಬೇಕು ಎಂದರು.

ಹಜರತ್ ಖಾಜಿ ನಜೀರ ಅಹಮ್ಮದ್,ಎಸ್ ವಾಯ್ ಎಸ್ ಕೊಪ್ಪಳ ಮಾತನಾಡಿ, ಮುಸಲ್ಮಾನರಾದವರು ಪ್ರತಿ ದಿನ ಐದು ಬಾರಿ ನಮಾಜ್ ಮಾಡಲೇಬೇಕು ಅದರಿಂದ ಸಿಗುವ ಮಾನಸಿಕ ನೆಮ್ಮದಿ ಮತ್ತೆಲ್ಲೂ ಸಿಗುವದಿಲ್ಲಾ ಹಾಗೂ ಇತ್ತಿಚೀನ ದಿನಗಳಲಿ ಹೆತ್ತ ತಂದೆ ತಾಯಿಯರನ್ನು ವೃದ್ದಾಶ್ರಮಕ್ಕೆ ಕಳುಹಿಸುವ ಜನರು ಹೆಚ್ಚಾಗಿದ್ದಾರೆ ಅದರಿಂದ ಸಮಾಜದಲ್ಲಿ ಹಿರಿಯರಿಗೆ ಗೌರವ ಸಿಗದಂತಾಗಿದೆ ಇಷ್ಟು ಪುಟ್ಟ ಗ್ರಾಮದಲ್ಲಿ ಇಂತಹದ್ದೊಂದು ಉತ್ತಮ ರೀತಿಯ ಮಸ್ಜಿದ್ ಕಟ್ಟಿಸಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ ಹಾಗೂ ಪ್ರೀತಿ ಹೃದಯದಲ್ಲಿದ್ದರೆ ಸಾಲದು ಅದನ್ನು ಹೊರಗಡೆ ತೊರಿಸಬೇಕು ಎಂದರು.

ಪೀರೆ ತರೀಖತ್ ಸೈಯದ್ ಮಹಮ್ಮದ್ ಅಬ್ದುಲ್ಖಾದರ್ ಖಾಜಿ ಅದ್ಯಕ್ಷತೆ ವಹಿಸಿದ್ದರು, ಹಜರತ್ ಮೌಲಾನ ಖಾಜಿ ಗುಲಾಮ್ ಹುಸೇನ ರಜ್ದಿ, ಹಾಲಿಜನಾಬ ಅಬ್ದುಲ್ ಖಾದರ ರಜ್ದಿ ಇಂಜಿನೀಯರ್ ದಾವಣಗೇರಿ, ಜನಾಬ ಕಾಶೀಮಸಾಬ ತಳಕಲ್, ಮೈಬುಸಾಬ ಮಕಾಂದಾರ, ಸಿದ್ದಯ್ಯ ಕಳ್ಳಿಮಠ, ಮೌನೇಶ ಬಡಿಗೇರ, ಎಮ್ ಎಪ್ ನಧಾಪ್, ಡಿ ಎಚ್ ಕುದರಿ, ಪಪಂ ಸದಸ್ಯ ರೀಯಾಜ್ ಅಹ್ಮದ್ ಖಾಜಿ, ರಾಜಸಾಬ ಹೊಸಮನಿ, ಹನುಮಂತ ಶ್ಯಾನಬೋಗ, ಎ ಎಮ್ ಕೊಪ್ಪಳ, ಹಾಲೇಶ ಚವ್ಹಾಣ, ಮತರ್ುಜಸಾಬ ಸಂಕನೂರು, ರಷಿದಸಾಬ ಹಣಜಗೇರಿ ಸೇರಿದಂತೆ ಅನೇಕ ಮುಖಂಡರು ಗ್ರಾಮಸ್ಥರು ಹಾಜರಿದ್ದರು.