ಜ್ಞಾನವು ಸಮಾಜದಲ್ಲಿ ಹೇಗೆ ಬೆರೆಯಬೇಕೆಂಬುದು ತಿಳಿಸುವುದೇ ಜ್ಞಾನ ವಿಕಾಸದ ಮುಖ್ಯ ಉದ್ದೇಶ: ಮಾಗಡಿ

ಲೋಕದರ್ಶನ ವರದಿ

ಶಿರಹಟ್ಟಿ 19: ನಮಗೆಲ್ಲರಿಗೂ ಇರುವ ಜ್ಞಾನವನ್ನು ವಿವೇಚನಾಯುತವಾಗಿ ಎಲ್ಲಿ ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕೆಂಬುದನ್ನು ಹಾಗೂ ಸಮಾಜದಲ್ಲಿ ಗೌರವಯುತ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂಬ ಅರಿವನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಿರುವುದರಿಂದ ಶಿರಹಟ್ಟಿ ವಿಭಾಗದಲ್ಲಿ ಸ್ತ್ರೀಯರ ಸಬಲೀಕರಣವಾಗಿದೆ. ಎಲ್ಲಿ ಹೆಣ್ಣನ್ನು ಪೂಜಿಸುತ್ತೇವೋ ಅಲ್ಲಿ ದೇವತೆಗಳು ನೆಲೆಯಾಗಿರುತ್ತಾರೆ. ಜಾತಿಧರ್ಮ ಭೇದವಿಲ್ಲದೇ ವೀರೇಂದ್ರ ಹೆಗ್ಗಡೆಯವರು ಸ್ತ್ರೀಯರ ಸಬಲೀಕರಣದ ಬಗ್ಗೆ ಇಂತಹ ಕಾರ್ಯಕ್ರಮವನ್ನು ಜಾರಿಗೆ ತಂದಿರುವುದು ನಮ್ಮೆಲ್ಲರ ಭಾಗ್ಯ. ಎಂದು ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹೂಮಾಯೂನ ಮಾಗಡಿ ಕರೆ ನೀಡಿದರು.

ಅವರು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕು ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆದ ಜ್ಞಾನವಿಕಾಸ ಎಂಬುದು ಮಹಿಳೆಯರಿಗೆ ಚಲನಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಯೋಜನಾಧಿಕಾರಿ ಶಿವಣ್ಣ ಎಸ್ ಮಾತನಾಡಿ, ಶಿರಹಟ್ಟಿ ಯೋಜನಾ ವ್ಯಾಪ್ತಿಯಲ್ಲಿ 25 ಜ್ಞಾನವಿಕಾಸ ಕೇಂದ್ರಗಳಿದ್ದು 1250 ಸದಸ್ಯರಿಗೆ ಜ್ಞಾನ ವಿಕಾಸ ಆಗುವ ಉದ್ದೇಶವನ್ನಿಟ್ಟುಕೊಂಡು ಪ್ರತೀ ಕೇಂದ್ರದಲ್ಲಿ ದುಶ್ಚಟದಿಂದಾಗುವ ಪರಿಣಾಮದ ಬಗ್ಗೆ ಸಂಸ್ಕೃತಿ ಸಂಸ್ಕಾರದ ಬಗ್ಗೆ, ಮಕ್ಕಳ ಶಿಕ್ಷಣದ ಬಗ್ಗೆ ಚಲನಚಿತ್ರದ ಮುಖಾಂತರ ಅರಿವನ್ನು ಮೂಡಿಸವದರ ಜೊತೆಗೆ ಆಧುನಿಕಯುಗದಲ್ಲಿ ಸ್ತ್ರೀಯರು ಮೊಬೈಲ್,ಟಿ.ವ್ಹಿ ಗಳಿಗೆ ಹೆಚ್ಚಿನ ಸಮಯವನ್ನು ಕೊಡುವುದರಿಂದ ಕುಟುಂಬದ ಸದಸ್ಯರ ಜೊತೆ ಸಾಂಪ್ರದಾಯಿಕ ಹಬ್ಬಗಳನ್ನು ಮಾಡುವುದು ಕಡಿಮೆಯಾಗುತ್ತಿದೆ. ಇದರಿಂದ ಕುಟುಂಬದ ಹೊಂದಾಣಿಕೆಯಲ್ಲಿ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸದಸ್ಯರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಜ್ಞಾನವಿಕಾಸ ಸಮನ್ವಯಾಧಿಕಾರಿ ಚಂದ್ರಕಲಾ, ಮೇಲ್ವಿಚಾರಕಿ ಗುಡಿ ಜ್ಯೋತಿ, ನಿರ್ಮಲಾ& ಮಂಜುಳಾ ಸೇವಾ ಪ್ರತಿನಿಧಿಗಳು ಹಾಗೂ ಯಲ್ಲಮ್ಮಾದೇವಿ, ಮಹಮ್ಮದ ಶಾವಲಿ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.