ಲೋಕದರ್ಶನ ವರದಿ
ವಿಜಯಪುರ 26: ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಕಾರವಾಗಿ ಮಂಗಳವಾರ ಉಗ್ರರ ನೆಲೆಗಳ ಮೇಲೆ ಭಾರತೀಯ ಯೋಧರು ನಡೆಸಿದ ಮಿಂಚಿನ ದಾಳಿಗೆ ವಿಜಯಪುರದಲ್ಲಿ ದೇಶರಕ್ಷಕರ ಪಡೆ, ನಮೋ ಭಾರತ ಹಾಗೂ ಮೋದಿ ಬ್ರಿಗೇಡ್ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಭಾರತ ಮಾತಾಕಿ ಜೈ, ಯೋಧರಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಹಾಕಿದರು. ನಂತರ ಭಾರತ ಯೋಧರ ಮಿಂಚಿನ ದಾಳಿಗೆ ಕೇಕೆ ಚಪ್ಪಾಳೆ ಮೂಲಕ ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಯೋಧರ ಕಾರ್ಯಕ್ಕೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇಶರಕ್ಷಕರ ಪಡೆ ಸಂಯೋಜಕ ರೋಹನ ಆಪ್ಟೆ ಅವರು ಮಾತನಾಡಿ, ಭಾರತೀಯ ಸೈನ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣ ಸ್ವಾತಂತ್ರ್ಯ ನೀಡಿದರ ಪರಿಣಾಮವಾಗಿ ಈ ಮಿಂಚಿನ ದಾಳಿ ನಡೆದಿದ್ದು, ನಮ್ಮ ವಾಯುಪಡೆ ಒಳ ನುಗ್ಗಿ ಸುಮಾರು 300 ಉಗ್ರರರನ್ನು ಹಾಗೂ ಅವರ ನೆಲೆಗಳನ್ನು ನಾಶ ಮಾಡಿದ್ದಾರೆ. ಪುಲ್ವಾಮ್ ದಾಳಿಯ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಇದರಿಂದ ವಿರೋಧಿ ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಇನ್ನೋಮ್ಮೆ ಭಾರತ ದೇಶದ ತಂಟೆಗೆ ಬರೋರಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ. ಇದೇ ವೇಳೆ ಯೋಧರ ಕಾರ್ಯಕ್ಕೆ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು.
ದೇಶರಕ್ಷಕರ ಪಡೆಯ ಮಾದ್ಯಮ ಪ್ರಮುಖ ತ್ರಿಲೋಚನ ಗವಿಮಠ ಮಾತನಾಡಿ, ನಮ್ಮ ಯೋಧರು ಗಟ್ಟಿ ನಿಧರ್ಾರ ತೆಗೆದುಕೊಂಡು ಉಗ್ರರ ಹೇಯ್ ಸಂಚಿಗೆ ಪ್ರಾಣ ಕಳೆದುಕೊಂಡು ನಮ್ಮ ಯೋಧರಿಗೆ ಗೌರವ ತಂದು ಕೊಟ್ಟಿದ್ದಾರೆ. ಸ್ವತಂತ್ರ ಭಾರತದಲ್ಲಿ ವಾಯು ಪಡೆ ಮೊಟ್ಟ ಮೊದಲ ಬಾರಿಗೆ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ್ದು ಇದೊಂದು ಐತಿಹಾಸಿಕ ದಿನವೆಂದು ಹರ್ಷ ವ್ಯಕ್ತಪಡಿಸಿ ದಿಟ್ಟ ನಿಧರ್ಾರ ಕೈಗೊಂಡು ಸಂಪೂರ್ಣ ಸ್ವಾತಂತ್ರ್ಯ ನೀಡಿದ ಪ್ರಧಾನಿ ನರೇಂದ್ರ ಮೋದಿಜಿ ಅವರು ಮತ್ತೋಮ್ಮೆ ಪ್ರಧಾನಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟಕರಾದ ಅಮಿತ್ ದೇಸಾಯಿ, ಅಜಯ ಸೂರ್ಯವಂಶಿ, ಗೋವಿಂದ ತಾಪಡೀಯಾ, ಸಮೀರ್ ಕುಲಕಣರ್ೀ, ಬಸು ತುಪ್ಪದ, ವಿನೋದ ತೆಲಸಂಗ, ಪ್ರಕಾಶ ಬಿರಾದರ, ಮೋಹನ ಪತ್ತಾರ್, ವಿನಾಯಕ ಬೋಸ್ಲೆ, ರಮೇಶ ನಾಯಕವಾಡಿ ಸೇರಿದಂತೆ ಮತ್ತೀತರರು ಇದ್ದರು.