ಲೋಕದರ್ಶನ ವರದಿ
ಬೆಳಗಾವಿ 07: ಸಾಮಾಜಿಕ ಕೋಮು ಸೌಹಾರ್ದತೆಗಾಗಿ, ಮನುಷ್ಯನ ಉನ್ನತಿ ಹಾಗೂ ನೆಮ್ಮದಿಗಾಗಿ ಧರ್ಮದ ತಳಹದಿಯ ಬದುಕು ಇಂದು ಅವಶ್ಯವಾಗಿ ಬೇಕಾಗಿದೆ. ಆ ನಿಟ್ಟಿನಲ್ಲಿ ನಾಡಿನ ಧಾಮರ್ಿಕ ಕ್ಷೇತ್ರದ ಬಹಳಷ್ಟು ಪರಮ ಪೂಜ್ಯರು ಮಾರ್ಗದರ್ಶನ ಮಾಡಿರುವರು. ಅಂಥ ಮಠಾಧೀಶರಕಾರ್ಯ ಅವಿಸ್ಮರಣೀಯವಾಗಿದೆ ಎಂದು ಸಾವಳಗಿಯ ಸಿದ್ದ ಸಂಸ್ಥಾನ ಮಠದಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಇತ್ತೀಚಿಗೆ ಬೆಳಗಾವಿ ಸದಾಶಿವ ನಗರದ ಕೆ.ಬಿ.ಆರ್. ರಂಗಮಂದಿರದಲ್ಲಿ ಖನಗಾಂವಿಯ ಖನ್ನಮ್ಮಾದೇವಿ ನಾಟ್ಯ ಸಂಘದ ವತಿಯಿಂದ ಜರುಗಿದ ಸಾವಳಗಿ ಶಿವಲಿಂಗೇಶ್ವರ ಮಹಾತ್ಮೆ ನಾಟಕದ ಪ್ರಥಮ ಪ್ರಯೋಗವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಾವಳಗಿನ ಶಿವಲಿಂಗೇಶ್ವರ ಮಹಾಸ್ವಾಮಿಗಳ ಧಾಮರ್ಿಕ ಕಾರ್ಯ ಶ್ಲಾಘನೀಯವಾಗಿದೆ ನಾಡಿನ ಕೋಮುಸೌಹಾರ್ದತಗೆ ಈ ಮಠದ ಪರಂಪರೆ ಮಾದರಿಯಾಗಿದೆ ಎಂದರು. ಇಂತಹ ಶ್ರೀಗಳ ಜೀವನ ಸಾಧನೆ ಬದುಕು ಹಾಗೂ ಅವರು ಮಾಡಿರುವ ಮಹಾನ ಕಾರ್ಯಗಳ ಕುರಿತು ನಾಟಕ ರಚಿಸಿದ ಲೇಖಕ ಬಸವರಾಜ ಪಟ್ಟಣಶೆಟ್ಟಿಯವರಕಾರ್ಯ ಶ್ಲಾಘನೀಯಎಂದರು.
ಬೆಳಗಾವಿ ಮಹಾನಗರ ಸಭೆಯ ಮಹಾಪೌರರಾದ ಬಸಪ್ಪಚಿಪ್ಪಲದಿನ್ನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲೂಕಾ ಪಂಚಾಯತಿ ಸದಸ್ಯಯಲ್ಲಪ್ಪ ಎಚ್.ಕೋಳೆಕರ ಮಾತನಾಡಿ ಧಾಮರ್ಿಕ ಹಿನ್ನಲೆಯರ ಚಿತವಾದ ನಾಟಕವನ್ನು ಪ್ರಯೋಗಿಸುವ ಪ್ರಯತ್ನಕ್ಕೆ ಶುಭಕೋರಿದರು.
ಶಿವಾಪೂರದ ಕಾಡಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ಮುಖ್ಯಅತಿಥಿಗಳಾಗಿ ಸಂಜು ಪಟ್ಟಣಶೆಟ್ಟಿ, ಸಾಹಿತಿ, ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ, ಎಸ್.ಟಿ. ಎಸ್.ಸಿ.ಸಂಘದ ಅಧ್ಯಕ್ಷರಾದ ರಾಜುಕೋಲಕಾರ, ಶಿಕ್ಷಕಿ ರೇಖಾಅಂಗಡಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.