ಗಾಂಧೀಜಿ ಅವರ ಜೀವನವೇ ಒಂದು ಸಂದೇಶ: ಶಾಸಕ ಹಿಟ್ನಾಳ

ಕೊಪ್ಪಳ : ಗಾಂಧೀಜಿಯವರ ಜೀವನವೇ ನಮಗೆ ಒಂದು ಸಂದೇಶ. ಇಂದಿನ ಯುವಕರಿಗೆ ಗಾಂಧೀಜಿ ಅವರು ಮಾದರಿ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು(ಅ.02) ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಏರ್ಪಡಿಸಲಾಗಿದ್ದ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಲವಾರು ಹೋರಾಟದ ಮೂಲಕ ಗಾಂಧೀಜಿಯವರು ನಮಗೆ ಸ್ವಾತಂತ್ರ್ಯವನ್ನು ದೊರಕಿಸಿ ಕೊಟ್ಟರು. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಗಾಂಧೀಜಿಯವರ ಕನಸಾಗಿತ್ತು. ಇಂದು ನಾವು ಎಲ್ಲೆಡೆ ಇಷ್ಟು ಸ್ವಚ್ಛ ಪರಿಸರವನ್ನು ಕಾಣುತ್ತಿದ್ದೇವೆಂದರೆ ಅದಕ್ಕೆ ಗಾಂಧೀಜಿಯವರೇ ಕಾರಣ. ಇಂದಿನ ಯುವ ಪೀಳಿಗೆಯವರು ಗಾಂಧೀಜಿಯವರ ಬೌದ್ಧಿಕ, ಸಾಂಸ್ಕೃತಿಕ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು. ಅವರಂತೆ ನಮ್ಮ ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರೀ ಅವರು ಕೂಡ ಒಬ್ಬರು. ಅವರ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ನಮಗೆಲ್ಲ ಮಾದರಿಯಾಗಬೇಕು ಎಂದು ಅವರು ಹೇಳಿದರು.

ಗಾಂಧೀಜಿಯವರ ಕುರಿತು ವಿಶೇಷ ಉಪನ್ಯಾಸ ನೀಡಿದ ಕೊಪ್ಪಳದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಭುರಾಜ ನಾಯಕ್, ಗಾಂಧೀಜಿಯವರ ಸತ್ಯ, ಅಹಿಂಸೆ, ಸರಳತೆಯನ್ನು ಅಳವಡಿಸಿಕೊಂಡರೆ ನಾವು ಏನನ್ನಾದರೂ ಸಾಧಿಸಬಹುದು. ಮುಂದಿನ ಜನಾಂಗ ಇವುಗಳನ್ನು  ಅರ್ಥ ಮಾಡಿಕೊಂಡು, ಅವರ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೇಲೆ ನಮ್ಮ ಭಾರತ ದೇಶದ ಭವಿಷ್ಯ ನಿಂತಿದೆ. ಗಾಂಧೀಜಿಯವರ ಬೋಧನೆ, ನೀತಿ, ಜೀವನ ಸಂದೇಶವನ್ನು ಎಲ್ಲರೂ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಗಾಂಧೀಜಿ ಅವರ ಆತ್ಮ ಕತೆ ನನ್ನ ಸತ್ಯಾನ್ವೇಷಣೆ ಪುಸ್ತಕದಲ್ಲಿ ಇಂದಿನ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ವಿದ್ಯಾಥರ್ಿಗಳಿಗೆ, ವೈದ್ಯರಿಗೆ ಮತ್ತು ಎಲ್ಲಾ ವರ್ಗದವರಿಗೂ ಅನ್ವಯವಾಗುವಂತ ಸಂದೇಶಗಳನ್ನು ಅವರು ಬರೆದಿದ್ದಾರೆ. ಗಾಂಧೀಜಿಯವರು ಬ್ರಿಟಿಷರ  ದಬ್ಬಾಳಿಕೆಯ ವಿರುದ್ಧ ಹೋರಾಟ ಮಾಡಿ ನಮಗೆ ಸ್ತಾತಂತ್ರ್ಯವನ್ನು ದಕ್ಕಿಸಿಕೊಟ್ಟಿದ್ದಾರೆ. ಗಾಂಧೀಜಿ ಅವರು ಸತ್ಯವೇ ದೇವರು ಎಂದು ನಂಬಿದವರು. ಸತ್ಯ ಪಥವನ್ನು ಬಿಟ್ಟು ಅವರು ಬದುಕಿಲ್ಲ. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಗಾಂಧೀಜಿಯವರ ಸತ್ಯ ಪರ ನಿಲುವುಗಳನ್ನು ಕಾಣುವುದು ಕಷ್ಟ. ಆದರೆ ಅವರ ನಿಲುವು, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯವಾಗಬೇಕು ಎಂದು ಅವರು ಹೇಳಿದರು.

ಗಾಂಧೀಜಿಯವರ ಸರಳತೆ ಮತ್ತು ಅಹಿಂಸಾ ಮಾರ್ಗಗಳನ್ನು ಇಂದಿನ ಯುವಕರು ಅನುಸರಿಸಬೇಕು.  ಇಂದಿನ ರಾಜಕಾರಣ ಪ್ರಜಾಪ್ರಭುತ್ವದ ಉದ್ದೇಶ ಮತ್ತು ಧರ್ಮವನ್ನು ಒಳಗೊಂಡಿರಬೇಕು. ದುಡಿಯದೇ ಬರುವ ಹಣ ಅದು ಪಾಪಿಗಳ ಹಣವಿದ್ದಂತೆ ಅದನ್ನು ಸ್ವೀಕರಿಸಬಾರದು.  ಇಂದಿನ ದಿನಮಾನದಲ್ಲಿ ನಾವು ಚಾರಿತ್ರ್ಯವಿಲ್ಲದ ಶಿಕ್ಷಣವನ್ನು ಪಡೆಯುತ್ತಿದ್ದೇವೆ. ವಿದ್ಯೆಗೆ ಗುರು ಮತ್ತು ಹಿರಿಯರು ಎಂಬ ಎರಡು ರೇಖೆಗಳು ಎಂಬುದನ್ನು ಅರಿತರೆ ಸಮಾಜದ ಹಿರಿಯರನ್ನು ಗೌರವಿಸಲು ಸಾಧ್ಯ. ನೀತಿ ಇಲ್ಲದ ವಿಜ್ಞಾನ, ಹಿಡಿತವಿಲ್ಲದ  ಲೇಖನಿ ಎಲ್ಲವನ್ನೂ ನಾಶಮಾಡುತ್ತದೆ ಎಂದು ಗಾಧೀಜಿಯವರು ಹೇಳಿದ್ದಾರೆ. ಜಗತ್ತಿನ ಶಾಂತಿ, ಸ್ಥಿರತೆ, ಪ್ರಗತಿಗೆ ಗಾಂಧಿ ಅವರ ವಿಚಾರಧಾರೆಗಳು ಮಾರ್ಗದಶರ್ಿಯಾಗಿವೆ. ಜಗತ್ತು ಕೈ ಸೋತು ನಿಂತಾಗ ಗಾಧೀಜಿಯವರ ವಿಚಾರಗಳು ಕೈ ಹಿಡಿಯುತ್ತವೆ ಎಂಬ ಸ್ವಾಮಿ ವಿವೇಕಾನಂದರ ಮಾತು ಅಕ್ಷರಶಃ ಸತ್ಯ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಬದಲಾವಣೆ ಎನ್ನುವುದು ನಮ್ಮಿಂದಲೇ ಆರಂಭವಾಗಬೇಕು. ಗಾಂಧೀಜಿಯವರು ಹೇಳಿರುವ ಮೌಲ್ಯಗಳನ್ನು ಶಾಲಾ ಮಕ್ಕಳು ಮತ್ತು ಎಲ್ಲರೂ ಅಳವಡಿಸಿ ಕೊಳ್ಳಬೇಕು. ಸ್ವಚ್ಛತೆ ಇದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಪ್ರತಿ ವಿದ್ಯಾಥರ್ಿಯೂ ಎರಡು ಗಿಡಗಳನ್ನು ನೆಟ್ಟು ಪೋಷಿಸಬೇಕು. ತಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ನ್ನು ತ್ಯಜಿಸಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿಮರ್ಿಸಬೇಕು ಎಂದು ಹೇಳುತ್ತಾ, ಶಾಲಾ ವಿದ್ಯಾಥರ್ಿಗಳಿಗೆ ಜಲ ಶಕ್ತಿ ಅಭಿಯಾನ, ಮಳೆನೀರು ಕೊಯ್ಲಿನ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು. ಬರಗಾಲದಲ್ಲಿ ನೀರಿಗೆ ನಾವು ತೊಂದರೆ ಪಡುತ್ತೇವೆ ಆದ್ದರಿಂದ ನೀರಿನ ಸಂರಕ್ಷಣೆ ಬಗ್ಗೆ ಇಂದಿನಿಂದಲೇ ಜಾಗೃತವಾಗಿರಬೇಕು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಗೊಂಡ ಗಾಂಧೀಜಿ ಅವರ ಪಾಪು-ಬಾಪು  ಪುಸ್ತಕವನ್ನು ಶಾಸಕರು ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಗಾಂಧೀಜಿಯವರ ಜೀವನ ಬಿಂಬಿಸುವ ಛಾಯಾಚಿತ್ರ ಪ್ರದರ್ಶನವನ್ನು ಅವರು ಉದ್ಘಾಟಿಸಿದರು.

ಇದೇ ಸಂದರ್ಭ ರಂಗೋಲಿಯಲ್ಲಿ ಗಾಂಧೀಜಿಯವರ ಚಿತ್ರ ರಚಿಸಿದ ಕಲಾವಿದ ಮೊಹಮ್ಮದ ದಾದಾಪೀರ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಮಾರುತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ನೇಹಾ ಜೈನ್, ಜಿಲ್ಲಾ ಪಂಚಾಯತ್ ಉಪಕಾರ್ಯದಶರ್ಿ ಎನ್. ಕೆ. ತೊರವಿ, ಜಿ.ಪಂ. ಯೋಜನಾ ನಿದರ್ೇಶಕ ರವಿ ಬಿಸರಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೆಶಕಿ ಅಮಿತಾ ಯರಗೋಳ್ಕರ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿದರ್ೇಶಕ ಜಿ. ಸುರೇಶ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಈಶಪ್ಪ ಆಶಾಪುರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಜಿಲ್ಲಾ ಸಂಖ್ಯಾಧಿಕಾರಿ ಕೃಷ್ಣಮೂತರ್ಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಅಂಬಿಕಾ ಭಾಗ್ಯನಗರ ಮತ್ತು ಸಂಗಡಿಗರು ಪ್ರಾರ್ಥನೆ ಹಾಗೂ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭ ಗಾಂಧೀಜಿಯವರ ಜೀವನ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಲಾಯಿತು.