ಉಡುಪಿ , ಡಿಸೆಂಬರ್ 8 : ಜನರಿಗೆ ತೊಂದರೆ ಕೊಡುತ್ತಿದ್ದ ಚಿರತೆಯನ್ನು ಬೋನಿಗೆ ಕೆಡುವವಲ್ಲಿ ಅರಣ್ಯ ಸಿಬ್ಬಂದಿಕೊನೆಗೂ ಯಶಸ್ವಿಯಾಗಿದೆ. ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಲಹಳ್ಳಿ ಬಳಿಯ ಯಾದಡಿ-ಮತ್ಯಾಡಿ ಗ್ರಾಮದ ಗುಡ್ಡತ್ತಿನಲ್ಲಿ ಚಿರತೆ ಬಲೆಗೆ ಸಿಕ್ಕಿಬಿದ್ದಿದ್ದು ಸದ್ಯ ಜನರು ನೆಮ್ಮದಿ ನಿಟ್ಟಿಸಿರು ಬಿಡುವಂತಾಗಿದೆ.. ಇತ್ತೀಚಿನ ದಿನಗಳಲ್ಲಿ ಈ ಸ್ಥಳದಲ್ಲಿ ಬಲೆಗೆ ಬಿದ್ದ ಸಿಕ್ಕಿಬಿದ್ದ ಎರಡನೇ ಚಿರತೆ ಇದಾಗಿದೆ . ಮೊದಲ ಚಿರತೆ ಕಳೆದ ನವೆಂಬರ್ 27 ರಂದು ಸಿಕ್ಕಿಬಿದ್ದಿತ್ತು. ಆದರೆ ಸ್ಥಳೀಯರು ಇನ್ನೂ ಎರಡು ಚಿರತೆಗಳನ್ನು ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದು ಇವುಗಳನ್ನು ಹಿಡಿಯಬೇಕು ಎಂದು ಹೇಳಿದ್ದಾರೆ. ದನಕರುಗಳು ಮತ್ತು ನಾಯಿಗಳು ಕಣ್ಮರೆಯಾಗುತ್ತಿವೆ ಎಂದು ಅವರು ದೂರು ನೀಡಿದ್ದರು. ಹೀಗಾಗಿ, ಅರಣ್ಯ ಅಧಿಕಾರಿಗಳು ನವೆಂಬರ್ 28 ರಂದು ಗುಡ್ಡಟ್ಟೆಯ ಚಂದ್ರವತಿಯ ಮನೆಯ ಬಳಿ ಪಂಜರವನ್ನು ಇಟ್ಟುಕೊಂಡು ಕಡೆಗೂ ಬಲೆಗೆ ಚಿರತೆ ಕೆಡುವುದರಲ್ಲಿ ಯಶ ಕಂಡಿದ್ದಾರೆ. ಚಿರತೆ ಶನಿವಾರ ಸಿಕ್ಕಿಬಿದ್ದಿರಬೇಕು ಎಂದುಅರಣ್ಯ ಅಧಿಕಾರಿ ಜಿ ಚಿದಾನಂದಪ್ಪ ಹೇಳಿದ್ದಾರೆ. "ಚಿರತೆ ಸಿಕ್ಕಿಬಿದ್ದಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ದೊರಕಿದೆ ಎಂದು ಅವರು ಹೇಳಿದರು. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪಂಜರದಿಂದ ಚಿರತೆಯನ್ನು ಸ್ಥಳಾಂತರಿಸಿ, ಪಶುವೈದ್ಯ ವೈದ್ಯರೊಬ್ಬರು ಚಿರತೆಯನ್ನು ಪರೀಕ್ಷಿಸಿ ಆರೋಗ್ಯವಾಗಿದೆ ಎಂದು ಘೋಷಿಸಿದ್ದಾರೆ ನಂತರ ಅದನ್ನು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಬಿಡಲಾಗಿದೆ ಎಂದು ಅವರು ಹೇಳಿದರು. ಜನರು ಎರಡು ಚಿರತೆಗಳ ಬಗ್ಗೆ ದೂರು ನೀಡಿದ್ದರಿಂದ, ಅದೇ ಪ್ರದೇಶದಲ್ಲಿ ಮತ್ತೊಂದು ಬಲೆ ಇಡಲು ಇಲಾಖೆ ಅಯೋಜಿಸಿದೆ ಎಂದೂ ಚಿದಾನಂದಪ್ಪ ಹೇಳಿದರು.