ಕಲೆ-ಕಲಾವಿದರನ್ನು ಬೆಳೆಸುವುದು ಸಿದ್ದಪ್ಪಜ್ಜನ ಪರಂಪರೆ

ಲೋಕದರ್ಶನ ವರದಿ 

ಹುನಗುಂದ19: ಸಿದ್ದನಕೊಳ್ಳ ಕಲಾವಿದರನ್ನು ಪೋಷಿಸುವ ಮಠ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ  ನಾಗೇಂದ್ರ ಮಾಗಡಿ ಹೇಳಿದರು.

ತಾಲೂಕಿನ ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಪಿ.ದಿಕ್ಷೀತ್ ಪೌಂಡೇಶನ್,ಎಸ್.ಎಸ್.ಕೆ ಸಮಾಜ ಹಾಗೂ ಸಿದ್ದಶ್ರೀ ಗ್ರಾಮೀಣಾಭಿವೃದ್ದಿ ಮತ್ತು ಸಮಾಜ ಸೇವಾಶ್ರಮದ ಸಹಯೋಗದಲ್ಲಿ ನಡೆದ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ನಿಮಿತ್ತ ನಡೆದ 2 ದಿನದ ಚಲನಚಿತ್ರೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದನಕೊಳ್ಳದ ಸಿದ್ದಶ್ರೀ ಉತ್ಸವದಲ್ಲಿ ಚಲನಚಿತ್ರೋತ್ಸವ ಆಯೋಜಿಸುವ ಮೂಲಕ ಪ್ರತಿಭಾವಂತ ಕಲಾವಿದರನ್ನು ವೇದಿಕೆ ಕಲ್ಪಿಸಿದೆ. ಕಲಾವಿದರಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಿದಾಗ ಮಾತ್ರ ಕಲೆ ಬೆಳೆದು ಉಳಿಯಲು ಸಾಧ್ಯ. ಎಲ್ಲಾ ಭಾಗದ ಕಲಾವಿದರನ್ನು ಪ್ರೋತ್ಸಾಹ ನೀಡುವುದರ ಜೊತೆಗೆ ಉತ್ತರ ಕರ್ನಾಟಕದ  ಕಲಾವಿದರನ್ನು ಕೂಡಾ ಪ್ರತಿಯೊಬ್ಬರಿಗೆ ಪ್ರೋತ್ಸಾಹ ನೀಡಬೇಕು ಎಂದರು.  

ಅರಣ್ಯ ಪ್ರದೇಶದಲ್ಲಿರುವ ಸಿದ್ದನಕೊಳ್ಳ ಕ್ಷೇತ್ರವೂ ಧಾಮರ್ಿಕ ಭೋಧನೆಗಳ ಜೊತೆಗೆ ನಾಡಿನ,ಕಲೆ ಸಾಹಿತ್ಯ,ಸಂಗೀತ,ಸಾಂಸ್ಕ್ರತಿಕ ಶ್ರೀಮಂತಿಕೆಗೆ ತನ್ನದೇಯಾದ ಕೊಡುಗೆಯನ್ನು ನೀಡಿದೆ. ಕ್ಷೇತ್ರದ ಧಮರ್ಾಧಿಕಾರಿಗಳಾದ ಡಾ.ಶಿವಕುಮಾರ ಶ್ರಿಗಳು ಸಿದ್ದಶ್ರೀ ರಾಷ್ಟ್ರೀಯ ಉತ್ಸವವನ್ನು ಪ್ರತಿವರ್ಷ ಅತ್ಯಂತ  ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಿದ್ದಪ್ಪಜ್ಜನ ಪರಂಪರೆಗೆ ವಿಶೇಷ ಮೆರಗು ತಂದಿದ್ದಾರೆ ಎಂದರು.

ಸಿದ್ದನಕೊಳ್ಳದ ಧರ್ಮಾಧಿಕಾರಿ  ಡಾ.ಶಿವಕುಮಾರ ಸ್ವಾಮೀಜಿ ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಪ್ರತಿಯೊಬ್ಬರು ಬೆಳೆಸುವಂತ ಕೆಲಸ ಮಾಡಬೇಕು. ಆಧ್ಯಾತ್ಮೀಕ,ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಸಿದ್ದಪ್ಪಜ್ಜನವರು ಕಲೆ-ಕಲಾವಿದರನ್ನು ಪ್ರೋತ್ಸಾಹ ನೀಡುವುದು ಅವರ ಪರಂಪರೆಯಾಗಿದೆ. ಅದೇ ಪರಂಪರೆಯನ್ನು ನಾನು ಮುಂದುವರೆಸಿಕೊಂಡು ಹೊರಟಿದ್ದೇನೆ. ಸಿದ್ದಪ್ಪಜ್ಜನವರ ಭಕ್ತಾಧಿಗಳಿಂದ ಇಂದು ಸಿದ್ದನಕೊಳ್ಳದ ಸಿದ್ದಶ್ರೀ ಉತ್ಸವ ಯಶ್ವಸಿಯಾಗಿ ನಡೆಯುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ನರಗುಂದ ಭಂಡಾಯ, ಕೆಂಪು ಹಂಚಿನ ಮನೆಗಳು ಚಲನಚಿತ್ರಗಳ ಟೈಲರ್ ಹಾಗೂ ಟೀಸರ್ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್ ಗಾಯಕಿ ಮಧುಶ್ರೀ ಭಟ್ಟಾಚಾರ್ಯ,ರಾಬಿ ಬಾದಲ್, ಬಾಲಿವುಡ್ ನಿದರ್ೇಶಕ ಮನೀಶ ತಿವಾರಿ, ಪ್ರೀತಿ ಜೈನ್, ನಿಮರ್ಾಪಕರಾದ ಅರವಿಂದ ಮುಳಗುಂದ್, ಶ್ರೀಪಾದ ಕುಲಕಣರ್ಿ, ಮುರಗಯ್ಯ ವಿರಕ್ತಮಠ, ಚಲನಚಿತ್ರ ನಟ್ ವಿಜಯ,ರಾಜು ಗಡ್ಡಿ,ಡಾ.ಕಿರಣ ಹುಲಗೂರ, ಮುತ್ತಣ್ಣ ಹಂಡಿ, ತಾಪಂ ಸದಸ್ಯ ಮಂಜುನಾಥ ಗೌಡರ, ಜಗದೀಶ ಕಾಟವಾ, ನಬಿ ನದಾಫ(ಅನಗವಾಡಿ) ಸೇರಿದಂತೆ ಇನ್ನಿತರರು ಇದ್ದರು

ಕನ್ನಡಿಗರ ಮನಗೆದ್ದ ಪಂಚಭಾಷಾ ಗಾಯಕಿ ಮಧುಶ್ರೀ