ಧಾರವಾಡ04: ರಾಜ್ಯದಲ್ಲಿ ಒಂದಿಲ್ಲೊಂದು ಕಡೆ ದಿನನಿತ್ಯೆ ವಕೀಲರ ಮೇಲೆ ಹಲ್ಲೆ ದಾಳಿ ಮತ್ತು ದೌರ್ಜನ್ಯದಂತಹ ಘಟನೆಗಳು ಜರುಗುತ್ತಿವೆ. ಮೇ.31ರಂದು ಧಾರವಾಡ ವಕೀಲರ ಸಂಘದ ಸದಸ್ಯರಾದ ರಾಜು ಠಾಕೂರ ವಕೀಲರ ಮೇಲೆ ನರೇಂದ್ರ ಗ್ರಾಮದ ಬಸವರಾಜ ಉರ್ಫ ರಾಜು ತಂದೆ ಬಾಬಾಸಾಹೇಬರ ದೇಸಾಯಿ ಎಂಬುವವರು ಮಧ್ಯ ರಾತ್ರಿಯಲ್ಲಿ ಮದ್ಯ ಸೇವನೆ ಮಾಡಿ ಅನುಚಿತವಾಗಿ ವರ್ತನೆ ಮಾಡಿ ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಧಾರವಾಡ ವಕೀಲರ ಸಂಘದ ಮತ್ತು ರಾಜ್ಯಾದಂತ್ಯಾ ಇತರ ವಕೀಲರ ಸಂಘಗಳಲ್ಲಿ ಸಭೆ ಜರುಗಿ ಪ್ರತಿಭಟನೆ ಮಾಡಿ ಆರೋಪಿಯನ್ನು ಶೀಘ್ರವಾಗಿ ಬಂಧನ ಮಾಡುವಂತೆ ಒತ್ತಾಯಿಸಿದರೂ ಕೂಡಾ ಧಾರವಾಡ ಗ್ರಾಮೀಣ ಪೋಲೀಸ ಠಾಣೆಯವರು ಇದೂರವರೆಗೂ ಆರೋಪಿಯನ್ನು ಬಂಧಿಸದೇ ಇರುವುದು ಪೋಲೀಸ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ.
ಜೂ.01ರಂದು ನರಗುಂದದ ಹಿರಿಯ ವಕೀಲರಾದ ಸಿ ಎಸ್ ಪಾಟೀಲ ಮತ್ತು ವ್ಹಿ ಎಸ್ ದೇಶಪಾಂಡೆ ಇವರು ತಮ್ಮ ಕಕ್ಷಿದಾರರ ಪರವಾಗಿ ಮಾತನಾಡಲು ಪೋಲೀಸ ಠಾಣೆಗೆ ಹೋದಾಗ ನರಗುಂದ ಪೋಲೀಸ ಠಾಣೆಯ ಸಿಪಿಐ ಯವರಾದ ಸುಧೀರ ಬೆಂಕಿಯವರು ಸಾರ್ವಜನಿಕರ ಎದುರುಗೆ ಹಿರಿಯ ವಕೀಲರಿಗೆ ಅವಾಶ್ಚ ಶಬ್ದಗಳಿಂದ ಬೈದು ವೈಯಕ್ತಿಕವಾಗಿ ಅಸಂವಿಧಾನದ ಪದಗಳಿಂದ ಬೈದು ಅನುಚಿತವಾಗಿ ವರ್ತನೆ ಮಾಡಿ ಅವಮಾನ ಮಾಡಿದ್ದಾರೆ. ಅಲ್ಲದೇ ವಕೀಲರಿಗೆ ಜೀವ ಬೆದರಿಕೆಯನ್ನು ಸಹಾ ಹಾಕಿರುತ್ತಾರೆ.
ಇದೂವರೆಗೆ ಸದರಿ ಪೋಲೀಸ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಕೊಳ್ಳದೇ ಇರುವುದು ವಿಪಯರ್ಾಸದ ಸಂಗತಿ.
ಅಲ್ಲದೇ ಜೂ.01ರಂದು ಭದ್ರವತಿಯ ವಕೀಲರ ಸಂಘದ ಅಧ್ಯಕ್ಷರ ಮೇಲೆ ಭದ್ರಾವತಿಯ ಪೋಲೀಸ ಅಧಿಕಾರಿಗಳು ಅನುಚಿತವಾಗಿ ವತರ್ಿಸಿ ಅವಾಚ್ಚ ಶಬ್ದಗಳಿಂದ ನಿಂದಿಸಿ ದೌರ್ಜನ್ಯವನ್ನು ಎಸಗಿರುತ್ತಾರೆ. ಸದರಿ ಪೋಲೀಸ ಅಧಿಕಾರಿಯನ್ನು ಕೂಡಾ ಅಮಾನತ್ತು ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಲ್ಲಿ ಪೊಲೀಸ ಇಲಾಖೆ ನಿರ್ಲಕ್ಷವಹಿಸಿರುವುದು ಬೇಸರದ ಸಂಗತಿ.
ಈ ರೀತಿ ರಾಜ್ಯಾದ್ಯಾಂತ ಅಲ್ಲಲ್ಲಿ ವಕೀಲರ ಮೇಲೆ ಹಲ್ಲೆ, ದಾಳಿ, ಅವಾಚ್ಚ ಶಬ್ದಗಳಿಂದ ನಿಂದಿಸುವುದು ಅನುಚಿತವಾಗಿ ವರ್ತನೆ ಮಾಡುವುದು, ದೌರ್ಜನ್ಯ ಎಸಗುವ ಕುರಿತು ನಿರಂತರವಾಗಿ ಮುಂದುವರಿದಿರುತ್ತದೆ. ವಕೀಲರು ಕೂಡಾ ನ್ಯಾಯಂಗದ ಒಂದು ಭಾಗವಾಗಿ ಕೆಲಸ ನಿರ್ವಹಿಸುತ್ತಿರುವದರಿಂದ ನ್ಯಾಯಾಂಗದ ಘನತೆ ಕಾಪಾಡಲು ಮತ್ತು ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವುದು ಸಕರ್ಾರಗಳ ಆದ್ಯ ಕರ್ತವ್ಯ. ವಕೀಲರ ಮೇಲೆ ನಿರಂತರವಾಗಿ ದೌರ್ಜನ್ಯ ದಾಳಿಗಳು ನಡೆದರೂ ಕೂಡಾ ಸಕರ್ಾರಗಳು ವಕೀಲರ ಸೌಂರಕ್ಷಣ ಕಾಯ್ದೆಯನ್ನು ರೂಪಿಸಿ ಜಾರಿ ಮಾಡುವಲ್ಲಿ ಮೀನ ಮೇಷ ಎಣಸುತ್ತಿವೆ. ಈ ರೀತಿ ಮುಂದುವರಿದಲ್ಲಿ ವಕೀಲರು ವಿವಿಧಭಾಗಗಳಲ್ಲಿ ವಕೀಲರ ವೃತ್ತಿಯನ್ನು ಮಾಡುವುದು ಬಹಳೇ ಕಷ್ಟಕರವಾಗುತ್ತದೆ.
ಅಲ್ಲದೇ ಸಾರ್ವಜನಿಕ ಬದುಕಿನಲ್ಲಿ ವಕೀಲರನ್ನು ಅತ್ಯಂತ ಅಗೌರವ ರೀತಿಯಲ್ಲಿ ಕಾಣುವಂತಾಗುತ್ತದೆ. ಈಗಾಗಲೇ ಕನರ್ಾಟಕ ರಾಜ್ಯ ಪರಿಷತ್ತಿನಿಂದ ಕೂಡಾ ವಕೀಲರ ರಕ್ಷಣಾ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಲು ಒತ್ತಾಯ ಮಾಡಲಾಗಿದೆ. ಆದರೆ ಸಕರ್ಾರಗಳು ಇದನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಅತ್ಯಂತ ನೋವಿನ ಸಂಗತಿ.
ಆದ್ದರಿಂದ ಈ ಕೂಡಲೇ ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ವಕೀಲರ ರಕ್ಷಣೆಗಾಗಿ ಮತ್ತು ಬಧ್ರತೆಗಾಗಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ರೂಪಿಸಬೇಕು. ವಕೀಲರ ಮೇಲೆ ಹಲ್ಲೆ ಮಾಡಿದ ದುಷ್ಟಕಮರ್ಿಗಳನ್ನು ಶೀಘ್ರವಾಗಿ ಬಂಧನ ಮಾಡಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು. ಅಲ್ಲದೇ ವಕೀಲರಿಗೆ ಅನುಚಿತವಾಗಿ ವರ್ತನೆ ಮಾಡಿದ ಪೋಲೀಸ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಿ ಕಾನೂನು ಕ್ರಮ ಜರುಗಿಸಬೇಕು.
ಇದೇ ರೀತಿಯಾಗಿ ಘಟನೆಗಳು ಮುಂದುವರಿದಲ್ಲಿ ವಕೀಲರು ರಾಜ್ಯಾದ್ಯಂತ ಬೀದಿಗೆ ಇಳಿದು ಪೋಲೀಸ ಇಲಾಖೆ ಮತ್ತು ಸಕರ್ಾರಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ.