ಲಕ್ಷ್ಮೀ ವೆಂಕಟೇಶ್ವರ ಮೂರ್ತಿಗಳ ಅದ್ದೂರಿ ಮೆರವಣಿಗೆ ಚಾಲನೆ

ಲೋಕದರ್ಶನವರದಿ

ಹಾವೇರಿ: ತಾಲೂಕಿನ ನೆಗಳೂರ ಗ್ರಾಮದಲ್ಲಿ ನೂತನವಾಗಿ ನಿಮರ್ಿಸಿರುವ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ರವಿವಾರ ನೂತನ ಲಕ್ಷ್ಮೀ ವೆಂಕಟೇಶ್ವರ ಮೂರ್ತಿ ಮರವಣಿಗೆ ಅದ್ದೂರಿ ಯಾಗಿ ಜರುಗಿತು. ಗ್ರಾಮದ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮೇರವಣಿಗೆಗೆ ಚಾಲನೆ ನೀಡಿದರು. ಸಂಸ್ಥಾನ ಹಿರೇಮಠ ದಿಂದ ಪ್ರಾರಭಗೊಂಡ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೆಂಕಟೇಶ್ವರ ದೇವಾಲಯ ತಲುಪಿತು. ಮೇರವಣಿಗೆಯಲ್ಲಿ ಮಹಿಳೆಯರು ಪೂರ್ಣ ಕುಂಭ ಕಳಸ ಆರತಿ ಗಳೊಂದಿಗೆ ಸಾಗಿದರು.  ಮೇರವಣಿಗೆಯಲ್ಲಿ ಎಪಿಎಂಸಿ ಸದಸ್ಯ ಕೃಷ್ಣರೆಡ್ಡಿ ಮೈದೂರ  ಬಸನಗೌಡ ಸುಕುಳಿ ಶಿವಾನಂದಪ್ಪ ಸಪ್ಪಿನ್ ಸಿದ್ದಮಲ್ಲಪ್ಪ ಬಾಲಣ್ಣನವರ. ಹನುಮಂತಪ್ಪ ತಮ್ಮಣ್ಣನವರ ನೀಲಪ್ಪ ಸಂಜೀವಣ್ಣನವರ ಶಿವಾನಂದ ಸಂಜೀವಣ್ಣನವರ ಡಿ.ಹೆಚ್.ತಮ್ಮಣ್ಣನವರ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.