ವಿಜ್ಞಾನ ಉತ್ಸವದ ಅನ್ವೇಷಣೆಗೆ ಅದ್ದೂರಿ ಚಾಲನೆ

ಮುಧೋಳ೧೮: ಸ್ಥಳಿಯ ಬೀಳೂರು ಗುರುಬಸವ ಮಹಾಸ್ವಾಮಿಜಿ ಇನಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮುಧೋಳದಲ್ಲಿ ಎರಡು ದಿನಗಳ ವಿಜ್ಞಾನ ಹಬ್ಬ  ಸವಿಷ್ಕಾರ 2019  ಕ್ಕೆ ನ್ಯಾಷನಲ್ ಏರೋನಾಟಿಕ್ನ ಖ್ಯಾತನಾಮ ವಿಜ್ಞಾನಿ ಗಿರೀಶ ಯನಮಶೆಟ್ಟಿ ಅದ್ದೂರಿ ಚಾಲನೆ ನೀಡಿದರು. ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಗಿರೀಶ ಯನಮಶೆಟ್ಟಿ  ಅವರ ವಿವಿಧ ಕೇಂದ್ರಿಯ ಸಂಶೋಧನಾ ಕೇಂದ್ರದಲ್ಲಿ ವಿದ್ಯಾಥರ್ಿಗಳಿಗಿರುವ ವಿಪುಲ ಅವಕಾಶಗಳ ಬಗ್ಗೆ ತಿಳಿಸುತ್ತಾ, ವಿಜ್ಞಾನದ ಬಗ್ಗೆ ಈ ಭಾಗದ ವಿದ್ಯಾರ್ಥಿ ಗಳಿಗಿರುವ ಆಸಕ್ತಿ ಕಂಡು ಪ್ರಶಂಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಏಂಖ ಅಧಿಕಾರಿ ಶ್ರೀಯುತ ಸಚ್ಚಿದಾನಂದ ಕುಂಚನೂರ  ಬೆಳೆಯುವ ಸಿರಿ ಮೊಳಕೆಯಲ್ಲಿ  ಎಂಬಂತೆ ವಿದ್ಯಾರ್ಥಿಗಳು ಉನ್ನತ ಹುದ್ದೆಗೆರಲು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಉತ್ತಮ ತಳಪಾಯ ಹಾಕಿಕೊಳ್ಳುವಂತೆ ತಿಳಿಸಿದರು ತಾವು ಏಂಖ ಪರೀಕ್ಷೆಯಲ್ಲಿ ಎದುರಿಸಿದ ಅನೇಕ ಸಮಸ್ಯೆಗಳ ಬಗ್ಗೆ ಮತ್ತು ಅದಕ್ಕೆ ಸಮಂಜಸವಾದ ಉತ್ತರಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಯಿಸಿದ ಸಂಸ್ಥೆಯ ಕಾರ್ಯದ್ಯಕ್ಷರಾದ ಶ್ರೀಯುತ ಮಹಾಂತೇಶ ಶೆಟ್ಟರ್ ಅವರು ಮಾತನಾಡಿ ಸಂಸ್ಥೆಯಲ್ಲಿರುವ ಅತ್ಯಾಧುನಿಕ ಉಪಕರಣಗಳು ಮತ್ತು ಈ ಭಾಗದ ವಿದ್ಯಾರ್ಥಿಗಳಿಗಿರುವ ಅವಕಾಶಗಳ ಬಗ್ಗೆ ವಿವರಿಸಿದರು.ಕಾರ್ಯಕ್ರಮದಲ್ಲಿ ತಾಲೂಕಿನ 80ಕ್ಕೂ ಹೆಚ್ಚು ಶಾಲೆಗಳ 350ಕ್ಕು  ಅಧಿಕ ವಿಜ್ಞಾನ ಮಾಡಲ್ಗಳನ್ನು ಪ್ರದಶರ್ಿಸಲಾಯಿತು ಈ ಸಂರ್ಧಬದಲ್ಲಿ ಎಲ್ಲ ವಿದ್ಯಾರ್ಥಿಗಳಿಗು ಉತ್ತರ ಕರ್ನಾಟಕ  ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಶ್ರವಣಕುಮಾರ ಕೆರೂರ, ಕ್ಷೇತ್ರ ಸಂಯೋಜನಾಧಿಕಾರಿ ಮಹಾಂತೇಶ  ನರಸನಗೌಡರ,  ಎಸ್ ಎಸ್ ಹಳವಾರ  ಪ್ರೋ. ಮಂಜುನಾಥ ಗಬಸವಳಗಿ ಮತ್ತು ಪ್ರೋ. ಆದಿನಾಥ ದೊಡ್ಡಮನಿ ಉಪಸ್ಥಿತರಿದ್ದರು.