ನವದೆಹಲಿ, ಜ 23 : ನಿರ್ಭಯ ಅತ್ಯಾಚಾರ , ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಬರುವ ಫೆಬ್ರವರಿ 1 ಈವರೆಗೂ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ವಾರ ತಿಹಾರ್ ಆಡಳಿತವು ಈ ಮನವಿ ಮಾಡಿದ್ದು, ನಾಲ್ವರ ಪೈಕಿ ಯಾರೂ ಇದಕ್ಕೆ ಇನ್ನೂ ಸ್ಪಂದಿಸಿಲ್ಲ, ಉತ್ತರ ಕೊಟ್ಟಿಲ್ಲ ಎಂದು ಜೈಲಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗಲ್ಲಿಗೇರಿಸುವ ಮೊದಲು ನಾಲ್ಕು ಜನರಿಗೆ ತಮ್ಮ ಕೊನೆಯ ಆಶಯವನ್ನು ಪಟ್ಟಿ ಮಾಡಲು ಲಿಖಿತವಾಗಿ ಕೇಳಲಾಗಿದೆ ಎಂಬುದನ್ನು ಜೈಲಿನ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
'ನಾವು ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಆದರೆ ಅವರಲ್ಲಿ ಈವರೆಗೆ ಯಾರೊಬ್ಬರು ಇದಕ್ಕೆ ಪ್ರತಿಕ್ರಿಯಿಸಿಲ್ಲ ಎಂದು ಹೇಳಿದ್ದಾರೆ
ಅಪರಾದಿಗಳು ರ ಕೊನೆಯ ಆಸೆ ಏನೆಂದು ತಿಳಿಸಿದರೆ, ಆಸೆ ಈಡೇರಿಸಲು ಸಾಧ್ಯವಾದರೆ ತಿಹಾರ್ ಜೈಲಿನ ಅಧಿಕಾರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. 'ಪ್ರತಿ ಆಸೆ ಆಕಾಂಕ್ಷೆ ಈಡೇರಿಸಲು ಸಾಧ್ಯವಾಗುವುದಿಲ್ಲ ಇತಿಮಿತಿಯೊಳಗೆಪೂರೈಸಲಾಗುವುದು ಎಂದರು.
ಯಾರನ್ನಾದರೂ ಭೇಟಿಯಾಗಲು ಬಯಸಿದರೆ, ಅವರು ಹೊಂದಿರುವ ಯಾವುದೇ ಆಸ್ತಿ ಅಥವಾ ವಸ್ತುಗಳನ್ನು ಯಾರಿಗಾದರೂ ವರ್ಗಾಯಿಸಲು ಕೇಳಿಕೊಳ್ಳಲಾಗಿದೆ.
ಫೆಬ್ರವರಿ 1 ರಂದು ಬೆಳಿಗ್ಗೆ 6 ಗಂಟೆಗೆ ಹಂತಕರಾದ ವಿನಯ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31), ಮುಖೇಶ್ ಕುಮಾರ್ ಸಿಂಗ್ (32) ಮತ್ತು ಪವನ್ (26) ಅವರನ್ನು ಕೋರ್ಟ್ ಆದೇಶದ ಮೇರೆಗೆ ಗಲ್ಲಿಗೇರಿಸಲಾಗುವುದು.