ರಂಗಕರ್ಮಿ ಯಶವಂತ್ ಸರದೇಶಪಾಂಡೆ ಅವರ ಜೀವಿತಾವಧಿಯ ಕೊನೆಯ ಕಾರ್ಯಕ್ರಮ

ರಂಗಕರ್ಮಿ ಯಶವಂತ್ ಸರದೇಶಪಾಂಡೆ ಅವರ ಜೀವಿತಾವಧಿಯ ಕೊನೆಯ ಕಾರ್ಯಕ್ರಮ  The last show of the life of theatre artist Yashwant Sardeshpande

ಹುಬ್ಬಳ್ಳಿ 29 : ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರು ಹುಬ್ಬಳ್ಳಿಯಲ್ಲಿ ಕಳೆದ ದಿನಾಂಕ 22, ಸೋಮವಾರ ಸಂಜೆ ಲಿಂಗರಾಜ ನಗರ ದಸರಾ-2025ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ತ ಅತಿಥಿಯಾಗಿ ಭಾಗವಹಿಸಿ, ಶಾಸಕ ಮಹೇಶ ಟೆಂಗಿನಕಾಯಿ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದರು. ಆವತ್ತು ಉತ್ಸಾಹದಿಂದ ಭಾರತೀಯ ಹಬ್ಬಗಳು, ಪ್ರಕೃತಿ, ಸಂಸ್ಕೃತಿ, ಪರಂಪರೆ ಬಗ್ಗೆ ತಮ್ಮ ಎಂದಿನ ತಿಳಿಹಾಸ್ಯದ ಶೈಲಿಯಲ್ಲಿ ಮಾತನಾಡುತ್ತ ಸಭಿಕರ ಗಮನ ಸೆಳೆದಿದ್ದರು. 

ಹುಬ್ಬಳ್ಳಿಯಲ್ಲಿ ಅದೇ ಅವರ ಕೊನೆಯ ಕಾರ್ಯಕ್ರಮವಾಗಿತ್ತು. ನಂತರ ದಿ. 27 ಶನಿವಾರ ಬೆಳಗಾವಿ ಜಿಲ್ಲೆಯ ಮುನವಳ್ಳಿಯಲ್ಲಿ ತಮ್ಮ ತಂಡದಿಂದ ’ಅಮರ ಮಧುರ ಪ್ರೇಮ’ ನಾಟಕವನ್ನು ಪ್ರಸ್ತುತಪಡಿಸಿದ್ದರು. ಅದು ಅವರ ಜೀವಿತಾವಧಿಯ ಕೊನೆಯ ಕಾರ್ಯಕ್ರಮವಾಗಿತ್ತು. ಸರದೇಶಪಾಂಡೆಯವರ ಲಿಂಗರಾಜ ನಗರ ದಸರಾ ಕಾರ್ಯಕ್ರಮ.