ಉತ್ತರ ಕರ್ನಾಟಕದ ಭಾಷೆಯ ಸೊಗಡೆ ವಿಶೇಷವಾದದ್ದು

ಬೆಳಗಾವಿ :  ಉತ್ತರ ಕರ್ನಾಟಕದ ಭಾಷೆಯ ಸೊಗಡೆ ವಿಶೇಷವಾದಂತಹದ್ದು. ಕೇಳಿದರೆ ಇನ್ನೂ ಕೇಳಬೇಕೆನ್ನುವಂತಹ  ಬಾಷೆ ಇದು. ಬೆಳಗಾವಿಯದ್ದೊಂದು ಭಾಷೆಯಾದರೆ, ಧಾರವಾಡದ್ದು ಇನ್ನೊಂದು. ಗದಗ, ರಾಯಚೂರು, ಬಿಜಾಪೂರ, ಬಳ್ಳಾರಿ ಹೀಗೆ ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯೂ ತನ್ನದೇ ಆದ ಭಾಷೆಯ ವಿಶಿಷ್ಟ ಸೊಗಸನ್ನು ಹೊಂದಿದೆ. ಒಂದೊಂದು ಜಿಲ್ಲೆಯಲ್ಲಿ ಒಂದು ಹೊಸ ಹೊಸ ಪದಪ್ರಯೋಗ ಮಾಡುತ್ತಾರೆ. ಜಿಲ್ಲೆಯ ಪದಕೋಶಗಳನ್ನು ಹೊರ ತರುವ ಕಾರ್ಯವಾಗಬೇಕಿದೆ ಎಂದು ನಿವೃತ್ತ ಪ್ರಾಧ್ಯಾಪಕಿ, ಲೇಖಕಿ ಧಾರವಾಡದ ಮಾಲತಿ ಪಟ್ಟಣಶೆಟ್ಟಿ  ಹೇಳಿದರು. 

ಹಿಂದವಾಡಿಯಲ್ಲಿರುವ  ಆಯ್ಎಂಇಆರ್  ಸಭಾಭವನದಲ್ಲಿ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ  ಹಮ್ಮಿಕೊಂಡ 2019ರ ಸಿರಿಗನ್ನಡ ಗೌರವ ಹಾಗೂ 2018ರ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಮತ್ತು ವಿವಿಧ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಸಂಶೋಧಕ ತುಮಕೂರಿನ ಡಾ. ಎಸ್. ಪಿ. ಪದ್ಮಪ್ರಸಾದ ಅವರು ಮಾತನಾಡಿ, ಜಿಲ್ಲೆಯ ಬರಹಗಾರರ ಕೃತಿಗಳನ್ನು ಆಹ್ವಾನಿಸಿ ಅವುಗಳ ಮೌಲ್ಯಮಾಪನ ಮಾಡಿ ಪ್ರಶಸ್ತಿ ನೀಡುವ ಮೂಲಕ ಬರಹಗಾರರನ್ನು ಪ್ರೋತ್ಸಾಹಿಸುತ್ತಿರುವ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಕಾರ್ಯ  ಕೊಂಡಾಡಿದರು.  

ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದಿಂದ ಕೊಡಮಾಡುವ ಸಿರಿಗನ್ನಡ ಗೌರವ ಪ್ರಶಸ್ತಿಯನ್ನು ಪ್ರೊ. ಎಮ್.ಆರ್. ಉಳ್ಳೇಗಡ್ಡಿ ಹಾಗೂ ಆರ್. ಟಿ. ಜಂಗಲ ಅವರಿಗೆ ಹಾಗೂ ಬಸವಣ್ಣೆಪ್ಪ ಕಂಬಾರ ಅವರ ಕೃತಿ "ಗಾಂಧಿ ಪ್ರಸಂಗ" ಕಥಾ ಸಂಕಲನಕ್ಕೆ ಅಲ್ಲದೇ ಡಾ. ಬಸು ಬೇವಿನಗಿಡದ ಅವರ "ಓಡಿ ಹೋದ ಹುಡುಗ" ಮಕ್ಕಳ ಕೃತಿಗಾಗಿ ಸಿರಿಗನ್ನಡ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಲೇಖಕಿಯರ ಜೀವಮಾನ ಸಾಧನೆಗಾಗಿ ಆಶಾ ಕಡಪಟ್ಟಿಯವರಿಗೆ ಡಾ. ಲತಾ ಗುತ್ತಿ ದತ್ತಿನಿಧಿ ಪ್ರಶಸ್ತಿ, ಲೇಖಕರ ಜೀವಮಾನ ಸಾಧನೆಗಾಗಿ ಡಾ. ಬಾಳಾಸಾಹೇಬ ಲೋಕಾಪೂರ ಅವರಿಗೆ ಪ್ರಲ್ಹಾದಕುಮಾರ ಭಾಗೋಜಿ ದತ್ತಿ ಪ್ರಶಸ್ತಿ, ಸಂಗೀತ ಹಾಗೂ  ನಾಟಕ ಕ್ಷೇತ್ರದಲ್ಲಿಯ ಸೇವೆಗಾಗಿ ನಿರ್ಮಲಾ ಪ್ರಕಾಶ ಅವರಿಗೆ ಸುಮನ್ ಹುದಲಿ ದತ್ತಿ ಪ್ರಶಸ್ತಿ, ಜಿಲ್ಲೆಯ ಶ್ರೇಷ್ಠ ಶಿಕ್ಷಕ ಸಾಹಿತಿಗಾಗಿ  ಎ.ಎ. ಸನದಿ ಅವರಿಗೆ  ದಿ. ವ್ಯಂ. ಲ. ಜೋಶಿ ದತ್ತಿ ಪ್ರಶಸ್ತಿ, ಜಿಲ್ಲೆಯ ಉತ್ತಮ ಪ್ರಕಾಶಕರೆಂದು  ಅಥಣಿ ಮೋಟಗಿಮಠದ ಗುರು ಚನ್ನಬಸವೇಶ್ವರ ಗ್ರಂಥಮಾಲೆಯವರಿಗೆ ತಾರಾಮತಿ ಪರ್ವತರಾಜ ಪಾಟೀಲ ದತ್ತಿ ಪ್ರಶಸ್ತಿ, ಶ್ರೇಷ್ಠ ಸೃಜನೇತರ ಕೃತಿಗಾಗಿ ಡಾ.ಎಸ್.ಎಲ್. ಕುಲಕಣರ್ಿಯವರ "ಬಸವಣ್ಣನವರ ವಚನಗಳಲ್ಲಿ ರೂಪಕಗಳು" ಕೃತಿಗೆ ಎಸ್. ಎಂ. ಕುಲಕಣರ್ಿ ಷಷ್ಠಾಬ್ದಿ ಸಮಿತಿ ದತ್ತಿ ಪ್ರಶಸ್ತಿ.

ಜಿಲ್ಲೆಯ ಲೇಖಕಿಯರ ಶ್ರೇಷ್ಠ  ಕೃತಿಯೆಂದು ಪಾರ್ವತಿ ಪಿಟಗಿಯವರ "ಹೀಗೊಂದು ಗ್ರಾಮಾಯಣ" ಕೃತಿಗೆ ದಿ. ಚಂದ್ರವ್ವ ಧಮರ್ಾಜಿ ಅನಗೋಳ ದತ್ತಿ ಪ್ರಶಸ್ತಿ, ಜಿಲ್ಲೆಯ ಲೇಖಕರ ಶ್ರೇಷ್ಠ ಅನುವಾದ ಕೃತಿಗಾಗಿ ಡಾ. ಜೆ.ಪಿ ದೊಡಮನಿಯವರ "ರಾಜಶ್ರೀ ಶಾಹೂ ಛತ್ರಪತಿ" ಕೃತಿಗೆ, ಶ್ರೇಷ್ಠ ಕಥಾಸಂಕಲನವೆಂದು ವಾಮನ ಕುಲಕಣರ್ಿಯವರ "ಜಾಳ ಪೋಳ" ಕೃತಿಗೆ ಹಣಮಂತರಾವ್ ಸವಣನೂರ ಸ್ಮಾರಕ ದತ್ತಿ ಪ್ರಶಸ್ತಿ,  ಉತ್ತಮ ನಾಟಕ ಪ್ರಕಾರಕ್ಕಾಗಿ ಸುನಂದಾ ಎಮ್ಮಿಯವರ "ಗಾಂಧಾರಿ ಶಾಪ ಮತ್ತು ಇತರ ನಾಟಕಗಳು" ಡಾ. ಎಂ.ಎಲ್. ತುಕ್ಕಾರ ಅಭಿನಂದನ ಸಮಿತಿ ದತ್ತಿ ಪ್ರಶಸ್ತಿ,  ವೈಚಾರಿಕ  ಸಾಹಿತ್ಯಕ್ಕಾಗಿ  ಡಾ.  ಗುರುಪಾದ ಮರಿಗುದ್ದಿಯವರ "ಮಾತು ಮೌನಗಳ ರಾಗರತಿ" ಕೃತಿಗಾಗಿ  ಅಪ್ಪಾಸಾಹೇಬ ಸದರಜೋಶಿ ದತ್ತಿ ಪ್ರಶಸ್ತಿ, ಜಿಲ್ಲೆಯ ಅತ್ಯುತ್ತಮ ಚುಟುಕು ಸಾಹತ್ಯವೆಂದು ಆರತಿ ಘಟಿಗಾರ ಅವರ "ಭಾವದ ಹಕ್ಕಿ" ಕೃತಿಗೆ ಶಿವಕವಿ ಉಳವೀಶ ಹುಲೆಪ್ಪನವರಮಠ ದತ್ತಿ ಪ್ರಶಸ್ತಿ,  ಪ್ರಥಮ ಉತ್ತಮ ಕೃತಿಗಾಗಿ ಮಹಾನಂದಾ ಪಾಟೀಲ ಅವರ "ನನ್ನೊಳಗಿನ ಬುದ್ಧ" ಕವನ ಸಂಕಲನಕ್ಕೆ,  ಪ್ರವಾಸ ಕಥನಕ್ಕಾಗಿ ಶ್ವೇತಾ ನರಗುಂದ ಅವರ "ಕವಿಗಳ ನಾಡಿನೊಳಗೊಂದು ಪ್ರವಾಸ" ಕೃತಿಗೆ  ಕೆ. ಚಂದ್ರಮೌಳಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಲೇಖಕಿ ಮಾಲತಿ ಪಟ್ಟಣಶೆಟ್ಟಿ ಹಾಗೂ ಲೇಖಕಿ ಶೀಲಾ ಅಂಕೋಲಾ ಮೌಲ್ಯಪಕರಾಗಿದ್ದರು. 

ಆರ್. ಟಿ. ಜಂಗಲ, ಪ್ರೊ.ಎಂ.ಆರ್. ಉಳ್ಳೇಗಡ್ಡಿ,  ಬಸವಣ್ಣೆಪ್ಪ  ಕಂಬಾರ, ಬಾಳಾಸಾಹೇಬ ಲೋಕಾಪೂರ, ಆಶಾ ಕಡಪಟ್ಟಿ, ವಾಮನ ಕುಲಕಣರ್ಿ, ಸುನಂದಾ ಎಮ್ಮಿ ಪ್ರಶಸ್ತಿ ಪುರಸ್ಕೃತರ ಪರ ಮಾತನಾಡಿದರು. ಎಸ್.  ಎಂ. ಕುಲಕಣರ್ಿ ಅಧ್ಯಕ್ಷತೆ  ವಹಿಸಿದ್ದರು. ಡಾ. ಶ್ರೀಧರ ಹುಕ್ಕೇರಿ ನಿರೂಪಿಸಿದರು.  ಜಯಂತ ಜೋಶಿ ಸ್ವಾಗತಿಸಿದರು. ರಂಜನಾ ನಾಯಕ ಪರಿಚಯಿಸಿದರು. ನಿರಜಾ ಗಣಾಚಾರಿ ವಂದಿಸಿದರು.  ಡಾ. ಸರಜೂ ಕಾಟ್ಕರ್, ಶಿರೀಷ ಜೋಶಿ, ಎನ್. ಬಿ. ದೇಶಪಾಂಡೆ, ಪ್ರೊ. ಜಿ.ಕೆ. ಕುಲಕಣರ್ಿ, ವಿಜಯ ತೇಲಿ,  ಅರವಿಂದ ಹುನಗುಂದ, ಮೋಹನ ಗುಂಡ್ಲೂರ, ನಾರಾಯಣ ಗಣಾಚಾರಿ, ಅನಂತ ಗೋನಬಾಳ, ಪ್ರೊ. ಗಿರಿಧರ ಸೂಡಿ ಮುಂತಾದವರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.