ಲೋಕದರ್ಶನ ವರದಿ
ಧಾರವಾಡ 11: ಧಾರವಾಡದ ಮಣ್ಣಿನ ವಾಸನೆಯೇ ವಿಶಿಷ್ಠವಾದದ್ದು, ಸಂಗೀತ-ನಾಟಕ-ಸಾಹಿತ್ಯ ಇತ್ಯಾದಿಗಳಿಗೆ ವಿಶೇಷವಾದ ಪ್ರಾಧಾನ್ಯತೆ ಕೊಟ್ಟು ಆಶ್ರಯಿಸಿವೆ. ಮುರುಘಾಮಠದ ಸ್ವಾಮಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳಂತವರನ್ನು ಪಡೆದ ಈ ಕನ್ನಡ ನಾಡೇ ಧನ್ಯ. ಧಾರವಾಡದಾಗ ಸಿದ್ಧಿ ಪಡೆದವರು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯುವುದರಲ್ಲಿ ಎರಡು ಮಾತಿಲ್ಲ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ಹಿಂದುಸ್ತಾನಿ ಗಾಯಕ ಪಂ. ಸೋಮನಾಥ ಮರಡೂರ ಹೇಳಿದರು.
ಅವರು ಜೀವಿ ಕಲಾ ಬಳಗ (ರಿ) ಹುಬ್ಬಳ್ಳಿ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಹಾಗೂ ಕನರ್ಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಇವರ ಸಹಯೋಗದಲ್ಲಿ ಏರ್ಪಡಿಸಿರುವ ರಾಜ್ಯಮಟ್ಟದ ನಾಟಕೋತ್ಸವದ 5 ನೇ ದಿನದ ಕಾರ್ಯಕ್ರಮವನ್ನು ಹಾಮರ್ೋನಿಯಂ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ನಾಟಕ ಕ್ಷೇತ್ರಕ್ಕೆ ಜೀವಿಕಲಾ ಬಳಗದ ಕೊಡುಗೆಯನ್ನು ಕೊಂಡಾಡಿದರು. ಇನ್ನೊಬ್ಬ ಅತಿಥಿ ಪ್ರಕಾಶ ಬೆಂಡಿಗೇರಿ ಮಾತನಾಡಿ, ನಟ, ನಿದರ್ೇಶಕ, ನಾಟಕಕಾರ, ಗದಿಗೆಯ್ಯ ವ್ಹಿ. ಹಿರೇಮಠರಿಗೆ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ ಸಿಗುವಂತಾಗಬೇಕು. ಈ ದಿಶೆಯಲ್ಲಿ ಸಂಬಂಧಪಟ್ಟವರು ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.
ಜಾನಪದ ವಿದ್ವಾಂಸ ಬಸಲಿಂಗಯ್ಯ ಹಿರೇಮಠ ಮಾತನಾಡಿ, ವೃತ್ತಿ ಹಾಗೂ ಗ್ರಾಮೀಣ ರಂಗಭೂಮಿಗಳು ಒಂದೇ ನಾಣ್ಯದ ಎರಡು ಮುಖ ಎನ್ನುತ್ತಾ ಹಾಡಿದ ಕೆಲ ಸುಶ್ರಾವ್ಯ ಗೀತೆಗಳು ಅವರ ಅಧ್ಯಕ್ಷೀಯ ಭಾಷಣವನ್ನು ಹಾಡಾಗಿ ಪರಿವತರ್ಿಸಿತು.
ಇದೇ ಸಂದರ್ಭದಲ್ಲಿ ಗಾಯಕಿ ಡಾ. ನಂದಾ ಪಾಟೀಲ, ಕೊಳಲು ವಾದಕ ಹರೀಶ ಕುಲಕಣರ್ಿ, ಕವಿ ಸಾಧುಕಠಾರೆ, ರಂಗ ಕಲಾವಿದ ವೀರಣ್ಣ ಪತ್ತಾರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಚನಬಸಪ್ಪ ಕಾಳೆ ಕಾಳೆ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ವಂದಿಸಿದರು. ಶಿವಪ್ರಕಾಶ ಬಳಿಗಾರ ನಿರೂಪಿಸಿದರು.
ಕೊನೆಯಲ್ಲಿ ಸಾಧು ಕಠಾರೆ ವಿರಚಿತ ಗಾನಯೋಗಿ ಪುಟ್ಟರಾಜ ಗವಾಯಿಗಳು ನಾಟಕ `ಗಾನಯೋಗಿ ಪುಟ್ಟರಾಜ ಗವಾಯಿಗಳು' ನಾಟಕ ಗದಿಗೆಯ್ಯ ಹಿರೇಮಠ ನಿದರ್ೇಶನದಲ್ಲಿ ಜೀವಿ ಕಲಾಬಳಗದಿಂದ ಸೊಗಸಾಗಿ ಪ್ರದಶರ್ಿಸಲ್ಪಟ್ಟಿತು. ವಿಶ್ವನಾಥ ಕಂಬಾಳಿಮಠ, ವೀರಣ್ಣ ಅಡಗತ್ತಿ, ರವೀಂದ್ರ ವಸ್ತ್ರದ, ವಿಶ್ವನಾಥ ಹಿರೇಗೌಡ್ರ ಮುಂತಾದವರು ಉಪಸ್ಥಿತರಿದ್ದರು.