ಬಾಗಲಕೋಟೆ22: ಲಿಂಗಭೇದ, ಜಾತಿಭೇದ, ವರ್ಣಭೇಧಗಳ ವಿರುದ್ದ ತಮ್ಮ ವಚನಗಳ ಮೂಲಕ ಜನರ ಮನ ಮುಟ್ಟಿದವರು ಕಾಯಕ ಶರಣಯೋಗಿಗಳು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶರಣರು ಅನುಭವ ಮಂಟಪದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಮಾಜದಲ್ಲಿ ಸಮಾನತೆ ಎಷ್ಟು ಅವಶ್ಯಕವಾಗಿದೆ ಎಂಬುವದನ್ನು ಜನರಿಗೆ ತಿಳಿಸುವ ಕಾರ್ಯ ಮಾಡಿದ್ದಾರೆ. ಅಂತವರ ತತ್ವಾದರ್ಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದರು.
ಸಕರ್ಾರ ಬಸವಣ್ಣನವರ ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ 12ನೇ ಶತಮಾನದಲ್ಲಿ ಆಗಿ ಹೋದ ಎಲ್ಲ ಶರಣರಿಗೂ ವಚನಕಾರರಿಗೂ ಗೌರವ ನೀಡುವ ಉದ್ದೇಶದಿಂದ ಒಂದೇ ದೃಷ್ಟಿಕೋನದಿಂದ 108 ಶರಣರ ಗ್ರಾಮ ಸ್ಥಾಪನೆ ಮಾಡಲು ಈಗಾಗಲೇ ಸಕರ್ಾರ ನಿರ್ಧರಿಸಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಪರಶುರಾಮ ಮಹಾರಾಜನವರ ಮಾತನಾಡಿ ಸಂವಿಧಾನದ ಪ್ರಕಾರ ಸರ್ವರು ಸಮಾರು ಎಂದು ಹೇಳ್ಮತ್ತದೆ. ಆದರೆ ನಮಗೆ ಇದುವರೆಗೂ ಸಮಾಜಿಕ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲವಾದರೆ 12ನೇ ಶತಮಾನದಲ್ಲಿ ಯಾವುದೇ ಸಂವಿಧಾನ ಇರಲಿಲ್ಲ. ಅಂತಹ ಕಾಲದಲ್ಲಿ ತಮ್ಮ ವಚನಗಳ ಮೂಲಕ ಜನರನ್ನು ತಲುಪಿ ಸಮಾನತೆ ಸಾರಿದ ಮಹಾನ ಸಾಧಕರು ನಮ್ಮ ಕಾಯಕ ಶರಣರು ಎಂದು ಹೇಳಿದರು.
ಕೆಳ ಜಾತಿಯ ಶರಣರು ಯಾರಿಗೂ ಕಡಿಮೆ ಇಲ್ಲ ಎಂದು ತಿಳಿಸುವ ಮಟ್ಟಿಗೆ ಕುಲಗಳನ್ನು ಮೆಟ್ಟಿ ನಿಂತು ವೀರಶೈವ ಧರ್ಮಕ್ಕೆ ಕನ್ನಡಿ ಹಿಡಿಯುವಂತೆ ವಚನಗಳನ್ನು ರಚಿಸಿದ್ದಾರೆ. ಇವರ ಈ ವಚನಗಳು ಕನರ್ಾಟಕದಲ್ಲಿ ಲಿಂಗಾಯತ ಚಳುವಳಿಗೆ ಕಾರಣವಾಗಿ ಅನುಭವ ಮಂಟಪದಲ್ಲಿ ವಚನಕ್ರಾಂತಿ ಹುಟ್ಟಿಸಿ ಸಮಾನತೆಗೆ ನಾಂದಿ ಹಾಕಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಇನ್ನೊರ್ವ ಉಪನ್ಯಾಸಕರಾದ ಮಾರ್ಕಂಡೇಯ ದೊಡ್ಡಮನಿ ಮಾತನಾಡಿ ಈ ಶರಣರ ವಚನಗಳ ಕೀತರ್ಿ ಕೇವಲ ಕನರ್ಾಟಕದಲ್ಲಿ ಮಾತ್ರವಲ್ಲದೆ ಇಸೀ ದೇಶಕ್ಕೆ ಮಾರ್ಗಸೂಚಿಗಳಾಗಿವೆ. ಅವರ ಯೋಚನೆಗಳು, ಅಲೋಚನೆಗಳು ಇಂದಿಗೂ ಪ್ರಚಲಿತವಾಗಿವೆ. ಅದಕ್ಕಾಗಿ ಸರಕಾರ ಇಂತಹ ಜಯಂತಿಗಳನ್ನು ಆಚರಣೆ ಮಾಡುವ ಮೂಲಕ ಜನರಿಗೆ ಸಮಾನತೆ ಕುರಿತು ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯಲ್ಲಪ್ಪ ಬೆಂಡಿಗೇರಿ ಸಮಾಜದಲ್ಲಿ ಇಂದಿನ ವರೆಗೂ ಸಮಾನತೆ ಬೆಳೆಯುತ್ತಿದೆ ಎಂದರೆ ಈ ಕಾಯಕ ಶರಣರ ವಚನಗಳೇ ಕಾರಣ ಇಂತಹ ಶರಣರಿಗಾಗಿ ಒಂದು ಶರಣರ ಗುರುಪೀಠ ನಿಮರ್ಾಣ ಮಾಡಬೇಕು ಅದಕ್ಕಾಗಿ ಸರಕಾರ 4 ರಿಂದ 5 ಎಕರೆ ಜಾಗೆ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮಲ್ಲಿ ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾ ಪಂಚಾಯತ ಉಪಕಾರ್ಯದಶರ್ಿ ಅಶೋಕ ತೋಟದ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ದಿಶಾ ಸಮಿತಿ ಹಾಗೂ ಬಾಬು ಜಗಜೀವನರಾವ್ ಸಮಿತಿ ಸದಸ್ಯ ರಾಜೀವ ಮಣ್ಣಿಕೇರಿ, ಸಮಾಜದ ಮುಖಂಡ ಎಮ್.ಆರ್.ಹೊಸಮನಿ ಸ್ಭೆರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಂಕರಲಿಂಗ ದೇಸಾಯಿ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಬಸವರಾಜ ಶಿರೂರ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾಡಳಿತ ಭವನದಿಂದ ಕಾಯಕ ಶರಣರ ಭಾವಚಿತ್ರ ಮೇರಣಿಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನಗರದದ ಪ್ರಮೂಕ ಮಾರ್ಗಗಳಲ್ಲಿ ಸಂಚರಿಸಿ ಬಿ. ಆರ್, ಅಂಬೇಡ್ಕರ್ ಭವನಕ್ಕೆ ಬಂದು ತಲುಪಿತು.