ಶ್ರೀಗವಿಮಠ ಶ್ರೀಗಳಿಂದ ಸದ್ಭಾವನ ಪಾದಯಾತ್ರೆ

ಲೋಕದರ್ಶನ ವರದಿ

ಕೊಪ್ಪಳ: ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಶ್ರೀಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳವರ ಪ್ರವಚನ ಕಾರ್ಯಕ್ರಮ ಆರಂಭವಾಗಿದ್ದು ಶುಕ್ರವಾರ ಸದ್ಭಾವನ ಪಾದಯಾತ್ರೆ ಜರುಗಿತು.

ಪಾದಯಾತ್ರೆಯು ಕಾರಟಗಿ ಪಟ್ಟಣದ ಸರಕಾರಿ ಪ್ರೌಢಶಾಲೆಯ ಆವರಣದ ಸಿದ್ದೇಶ್ವರ ಬಯಲು ರಂಗ ಮಂದಿರದಲ್ಲಿ ನಡೆಯುವ ಶ್ರೀ ಗವಿಮಠದ ಗವಿಶ್ರೀಗಳವರ ಪ್ರವಚನ ಕಾರ್ಯಕ್ರಮ ಅಂಗವಾಗಿ  ಪಟ್ಟಣ ಆಂಜನೇಯಸ್ವಾಮಿ ದೇವಸ್ಥಾನದಿಂದ ಪೂಜೆ ಸಲ್ಲಿಸಿ ಭಜನಾ ತಂಡದೊಂದಿಗೆ  ಸದ್ಭಾವನಾ ಯಾತ್ರೆ ಆರಂಭಗೊಂಡ ಸದ್ಭಾವನಾಯಾತ್ರೆ  ಸುಂಕಲಮ್ಮನ ದೇವಸ್ಥಾನದ ಗುತ್ತೂರ ಆಂಜನೇಯಸ್ವಾಮಿ ದೇವಸ್ಥಾನ, ಉಪ್ಪಾರ ಓಣಿ, ಹಳೆ ನಾಡಕಚೇರಿ ರಸ್ತೆಯ ಮೂಲಕ ಸಂಗಮೇಶ್ವರ ದೇವಸ್ಥಾನ, ಕಬ್ಬೇರ ಓಣಿ, ಬೂದಿಯವರ ಓಣಿ, ಸಾಲೋಣಿ ಮಾರ್ಗವಾಗಿ ಕನಕಬಸವ ಭವನ ತಲುಪಿ ಮುಕ್ತಾಯಗೊಂಡಿತು. 

ಪಾದಯಾತ್ರೆಯಲ್ಲಿ ಪಟ್ಟಣ್ಣ ಸೇರಿದಂತೆ ಸುತ್ತಾ-ಮುತ್ತಲಿನ ವಿವಿಧ ಗ್ರಾಮಗಳ ಹಲವಾರು ಭಕ್ತರು ಪಾಲ್ಗೊಂಡಿದ್ದರು. ಅಭಿನವ ಗವಿಶ್ರೀಗಳು ಪಾದಯಾತ್ರೆ ನಡೆಸುವ ಹಾದಿ ಉದ್ದಕ್ಕೂ, ಮಹಿಳೆಯರು ಸಗಣಿ, ನೀರು ಸಾರಿಸಿ, ವಿವಿಧ ತರಹದ ರಂಗೋಲಿಯನ್ನು ಹಾಕಿ, ಹೂವುಗಳಿಂದ ಶೃಂಗರಿಸಿ ಸ್ವಾಮೀಜಿಗಳವರನ್ನು ಸ್ವಾಗತಿಸಿದರು. ಪಾದಯಾತ್ರೆಯಲ್ಲಿ ಬಳಗಾನೂರಿನ ಶಿವಶಾಂತಶರಣರು ಶ್ರೀಗಳವರ ಕುರಿತು ಭಜನೆ ಮೂಲಕ ಭಕ್ತಿಗೀತೆಯನ್ನು ಹಾಡಿದರು. ನಂತರ ಕನಕಬಸವ ಭವನದಲ್ಲಿ ಹಮ್ಮಿಕೊಂಡ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗವಿಶ್ರೀಗಳು ಕನಕದಾಸರ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ನಮನ ಸಲ್ಲಿಸಿದರು. 

ಪಾದಯಾತ್ರೆಯಲ್ಲಿ ಹೂವಿನಹಡಗಲಿಯ ಗವಿಸಿದ್ಧೆಶ್ವರ ಶಾಖಾಮಠದ ಹಿರೇಶಾಂತವೀರ ಮಹಾಸ್ವಾಮಿಗಳು, ಶಿವಲಿಂಗಯ್ಯ ಸ್ವಾಮಿಗಳು ಹಂಚಿನಾಳಮಠ,  ವೀರಭದ್ರಯ್ಯ ಸ್ವಾಮಿಗಳು ತಲೇಖಾನಮಠ, ಮರುಳಸಿದ್ಧಯ್ಯಸ್ವಾಮಿಗಳು ಹಿರೇಮಠ, ಶಾಸಕ ಬಸವರಾಜ ದಡೆಸೂಗುರ, ಮಾಜಿ ಸಚಿವ ನಾಗಪ್ಪ ಸಾಲೋಣಿ, ವಿರೇಶಪ್ಪ ಚಿನಿವಾಲ, ಶಿವರಡ್ಡಿನಾಯಕ, ಗುಂಡಪ್ಪ ಕುಳಗಿ,  ಮಲ್ಲಯ್ಯಸ್ವಾಮಿ ಬೇವಿನಾಳ, ಯಂಕಾರಡ್ಡೆಪ್ಪ ಚನ್ನಳ್ಳಿ, ಅಮರೇಶ ಕುಳಗಿ, ಶರಣಪ್ಪ ಪರಕಿ, ಅಯ್ಯಪ್ಪ ಬಂಡಿ,  ಖಾಜಾ ಹುಸೇನ್ ಮುಲ್ಲಾ, ಪ್ರವೀಣ ಪುರೋಹಿತ, ವಿಠಲ್ ಶೇಠ, ಈಶಪ್ಪ ಇಟ್ಟಂಗಿ, ಪ್ರಭು ಉಪನಾಳ, ಬಸವರಾಜ ಪಗಡದಿನ್ನಿ, ಹೊಳೆಯಪ್ಪ ದೇವರಮನಿ, ಉಮೇಶ ಬಂಘಿ, ಪರಶುರಾಮ ದಾರಿಮನಿ, ಚನ್ನಪ್ಪ ಕಂಚಿ  ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮಹಿಳಾ ಸಂಘಗಳ ಪ್ರತಿನಿಧಿಗಳು ಹಾಗೂ ವಿವಿಧ ಗ್ರಾಮಗಳ ಸಾವಿರಾರು ಸದ್ಭಕ್ತರು ಭಾಗವಹಿಸಿದ್ದರು.