ಜನಮನ ಸೂರೆಗೊಂಡ ಜೋಡೆತ್ತಿನ ಗಾಡಿ ಶರ್ಯತ್ತು

ಲೋಕದರ್ಶನ ವರದಿ

ಚಿಕ್ಕೋಡಿ 16: ಮೂರು ವರ್ಷಕ್ಕೊಮ್ಮೆ ಜರುಗುವ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ಶ್ರೀ ಮಹಾಲಕ್ಷ್ಮೀದೇವಿ  ಜಾತ್ರೆ ಅಂಗವಾಗಿ ರವಿವಾರ ಜರುಗಿದ ಅಂತರರಾಜ್ಯ ಮಟ್ಟದ ಭವ್ಯ ಜೋಡೆತ್ತಿನ ಗಾಡಿ ಶರ್ಯತ್ತು, ಕುದರೆ ಗಾಡಿ ಶರ್ಯತ್ತು ಜನಮನ ಸೆಳೆದವು.

ಹತ್ತರವಾಟ ಗ್ರಾಮದಿಂದ ಹತ್ತರವಾಟ ಕ್ರಾಸ್ದವರಿಗೆ ಅಂದಾಜು 6 ಕಿ.ಮೀ ದೂರದವರಿಗೆ ನಡೆದ ಭವ್ಯ ಅಂತರಾಜ್ಯಮಟ್ಟದ ಜೋಡೆತ್ತಿಗಾಡಿಯ ಶರ್ಯತ್ತುಗಳಿಗೆ ಖ್ಯಾತ ನ್ಯಾಯವಾದಿ ಮತ್ತು ಮಾಜಿ ತಾಪಂ ಸದಸ್ಯ ಅಶೋಕ ಹರಗಾಪೂರೆ ಚಾಲನೆ ನೀಡಿದರು. ಜೋಡೆತ್ತಿನ ಗಾಡಿ ಶರ್ಯತ್ತು ಮತ್ತು ಕುದರೆ ಗಾಡಿ ಶರ್ಯತ್ತು ನೋಡಲು ನೆರೆಯ ಮಹಾರಾಷ್ಟ್ರ ಮತ್ತು ರಾಜ್ಯದ ಗಡಿ ಭಾಗದ ಸಾವಿರಾರು ಜನರು ಉತ್ಸಾಹದಿಂದ ಶಯತ್ತು ವಿಕ್ಷಿಸಲು ಸಾಕ್ಷಿಯಾದರು.

  ಈ ಭವ್ಯ ಜೋಡೆತ್ತಿನ ಗಾಡಿಯ ಶರ್ಯತ್ತಿನಲ್ಲಿ ಮಹಾರಾಷ್ಟ್ರದ ಧಾನೋಳಿ ಬಂಡಾ ಖಿಲಾರೆ ಎತ್ತುಗಳು ಪ್ರಥಮ ಸ್ಥಾನ ಪಡೆದು 50ಸಾವಿರ ನಗದು ಬಹುಮಾನ ಪಡೆದುಕೊಂಡರು. ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದ ಭೀಮಗೌಡ ಹುದ್ದಾರ ಎತ್ತುಗಳು ದ್ವಿತೀಯ ಸ್ಥಾನ ಪಡೆದು 40 ಸಾವಿರ ರೂ ನಗದು ಬಹುಮಾನ ಪಡೆದರು. ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದ ಮಹಾದೇವ ಗಜಬರ ಎತ್ತುಗಳು ತೃತೀಯ ಸ್ಥಾನ ಪಡೆದು 30 ಸಾವಿರ ರಊ ನಗದು ಬಹುಮಾನ ಪಡೆದುಕೊಂಡರು.

ಹಲ್ಲು ಹಚ್ಚದ ಕುದುರೆ ಗಾಡಿ ಶರ್ಯತ್ತು: ಬಿದರೊಳ್ಳಿಯ ಅಶೋಕ ಕಿಲ್ಲೆದಾರ ಕುದುರೆ ಗಾಡಿ ಪ್ರಥಮ, ಹತ್ತರವಾಟದ ಬಸವರಾಜ ಕಮತೆ ಕುದರೆ ಗಾಡಿ ದ್ವಿತೀಯ, ಘಟಪ್ರಭಾದ ದಯಾನಂದ ಕಾಂಬಳೆ ಕುದರೆ ಗಾಡಿ ತೃತೀಯ ಸ್ಥಾನ ಪಡೆದವು.

ಹಲ್ಲು ಹಚ್ಚಿದ ಕುದುರೆ ಗಾಡಿ ಶರ್ಯತ್ತು: ಮಹಾರಾಷ್ಟ್ರದ ಕುವಾಡದ ಪ್ರಮೋದ ರಜಪೂತ ಕುದರೆ ಗಾಡಿ ಪ್ರಥಮ, ಘಟಪ್ರಭಾದ ದಯಾನಂದ ಕಾಂಬಳೆ ದ್ವಿತೀಯ, ನರಸಿಂಹವಾಡಿಯ ಸಾಗರ ಗೌಂಡಿ ತೃತೀಯ ಸ್ಥಾನ ಪಡೆದವು.

ಒಂದು ಎತ್ತು ಮತ್ತು ಒಂದು ಕುದರೆ ಗಾಡಿ ಶರ್ಯತ್ತು: ಧಾನೋಳಿಯ ಬಂಡು ಖಿಲಾರೆ ಗಾಡಿ ಪ್ರಥಮ, ಸಾಂಗಲಿಯ ನಾಮದೇವ ಮಾನೆ ದ್ವಿತೀಯ, ಧಾನವಾಡದ ಸತೀಶ ಅಂಭಿ ಗಾಡಿ ತೃತೀಯ ಸ್ಥಾನ ಪಡೆದವು.

ಗ್ರಾಮದ ಮುಖಂಡ ಅಶೋಕ ಹರಗಾಪೂರೆ ಮಾತನಾಡಿ, ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಹಾಲಕ್ಷ್ಮೀದೇವಿ ಜಾತ್ರೆಯಲ್ಲಿ ಜನಪದ ಶೈಲಿಯ ಎತ್ತಿನ ಗಾಡಿ ಮತ್ತು ಕುದುರೆ ಗಡಿ ಶರ್ಯತ್ತುಗಳು ಭವ್ಯವಾಗಿ ಜರುಗಿ ಸುತ್ತಮುತ್ತ ಹತ್ತಾರು ಹಳ್ಳಿಯ ಜನರಿಗೆ ಮನರಂಜನೆ ಲಭಿಸಿದೆ. 

ಜಾತ್ರೆಗೆ ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ಸುಮಾರು ಲಕ್ಷ ಜನ ದರ್ಶನ ಪಡೆದುಕೊಂಡು ಹೋಗುತ್ತಾರೆ. ಶರ್ಯತ್ತಿನಲ್ಲಿ ಗೆದ್ದಿರುವ ಗಾಡಿಯ ಮಾಲಿಕರಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದರು.

ಜೈನುಲುಬಾ ಪಟೇಲ, ರವೀಂದ್ರ ಹಿರೇಕೊಡಿ, ಕುಮಾರ ಕಮತೆ, ಪೀರ ಮುಲ್ಲಾ, ರಾಜು ಮಗದುಮ್ಮ, ಆನಂದ ಕಮತೆ, ಮನೋಹರ ಕಮತೆ ಸೇರಿದಂತೆ ಜಾತ್ರೆ ಕಮೀಟಿ ಸದಸ್ಯರು ಉಪಸ್ಥಿತರಿದ್ದರು.