ಲೋಕದರ್ಶನ ವರದಿ
ವಿಜಯಪುರ 03:ನಗರದ ಹೊಸದಾಗಿ ನಿಮರ್ಿತವಾದ ಬಡಾವಣೆಗಳಿಗೆ, ಕಾಲೋನಿಗಳಿಗೆ, ಮೂಲಭೂತ ಸೌಕರ್ಯಗಳು ಮತ್ತು ನಗರ ಸಾರಿಗೆ ವ್ಯವಸ್ಥೆ ಜೊತೆಗೆ ಬಸ್ ನಿಲ್ದಾಣ ಸ್ಥಾಪಿಸುವ ಕುರಿತು ಇವತ್ತು ದಿ: 03ರಂದು ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮಹಾನಗರ ಪಾಲಿಕೆ ಸದಸ್ಯರು, ಮಹಾನಗರ ಪಾಲಿಕೆಯ ಆಯುಕ್ತರು, ಡಿ.ಎಸ್.ಪಿ ಅಶೋಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ವಿಜಯಪುರ ನಗರ ಸಾರಿಗೆಯ ಬಸನಲ್ಲಿ ಹೊಸ ಬಡಾವಣೆಗಳಾದ ಸಾಯಿಪಾರ್ಕ, ಗಡಗಿ ಲೇಔಟ್, ಗೋಕಲ್ ಪಾರ್ಕ ಸಮರ್ಥ ನಗರ, ವಜ್ರಹನುಮಾಣ ನಗರ, ಸಾಯಿ ಹಾಸ್ಪಿಟಲ್ ಏರಿಯಾ, ಸೇರಿದಂತೆ ಸುತಮುತ್ತಲಿನ ಬಡಾವಣೆಗಳಲ್ಲಿ ಸಂಚರಿಸಿದರು.
ಆಯಾ ಬಡಾವಣೆಗಳ ನಿವಾಸಿಗಳು ಶಾಸಕರಿಗೆ ತಮ್ಮ ಅವಶ್ಯಕತೆಗಳನ್ನು ಹೇಳಿಕೊಂಡರು. ಆಗ ಶಾಸಕರು ಸ್ಥಳದಲ್ಲಿ ಲಭ್ಯವಿದ್ದ ಅಧಿಕಾರಿಗಳೊಂದಿಗೆ ಸಮಸ್ಯೆಗಳನ್ನು ಚರ್ಚಸಿ ಬೇಗ ಬಗೆಹರಿಸಿ ಕೊಡಬೇಕೆಂದು ಸೂಚಿಸಿದರು. ಸ್ಥಳಿಯರೊಂದಿಗೆ ಮಾತನಾಡುತ್ತಾ ನಾನು ವಿಜಯಪುರ ನಗರ ಶಾಸಕನಾದ ಮೇಲೆ ಸಾಕಷ್ಟು ಜನಸ್ಪಂದಾನ ಕಾರ್ಯಕ್ರಮಗಳನ್ನು ಮಾಡಿ ಆಯಾ ವಾಡರ್್ಗಳಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರ ನೀಡಿದ್ದೇನೆ. ಆದೆ ರೀತಿ ಇವತ್ತು ಹೊಸ ಬಡಾವಣೆಗಳಾದ ಗಡಗಿ ಲೇಔಟ್, ಗೋಕಲ್ಪಾರ್ಕ, ಸಮರ್ಥನಗರ, ಏರಿಯಾಗಳಲ್ಲಿ ಹೊಸದಾಗಿ ಬಸ್ ಸಂಚಾರ ಸೇರಿದಂತೆ ಸ್ಥಳಿಯವಾಗಿ ಬಸ ನಿಲ್ದಾಣ ನಿಮರ್ಿಸಿಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಔದ್ರಾಮ್, ನಗರ ಸಾರಿಗೆ ಅಧಿಕಾರಿಗಳು, ವಿ.ಡಿ.ಎ ಅಧಿಕಾರಿಗಳು, ಮಹಾಪೌರರಾದ ಶ್ರೀಮತಿ ಲೋಗಾಂವಿ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಅಶೋಕ ಬೆಲ್ಲದ, ಪರಶುರಾಮ ರಜಪೂತ, ಡಿ.ಎಸ್.ಪಿ. ಅಶೋಕ, ಭಾಗಪ್ಪಾ ಕನ್ನೊಳ್ಳಿ, ಲಕ್ಷ್ಮೀ ಕನ್ನೊಳ್ಳಿ, ಮುಕುಂದ ದೇಸಾಯಿ, ಶ್ರೀನಿವಾಸ ಬೆಟಗೇರಿ, ಶ್ರೀಹರಿ ಗೊಳ್ಳಸಂಗಿ, ಚಂದ್ರು ಚೌಧರಿ, ರಾಮನಗೌಡ ಪಾಟೀಲ ಯತ್ನಾಳ, ಮಧು ಯಲಗುದ್ರಿ, ದತ್ತಾ ಗೋಲಾಂಡೆ, ಅಮೀತ ಗರುಡಕರ್, ಸೇರಿದಂತೆ ಸ್ಥಳಿಯರು ಉಪಸ್ಥಿತರಿದ್ದರು.