ಗೋಕಾಕ 02: 'ದೇವಿಯನ್ನು ವಿಶ್ವದಾದ್ಯಂತ ಆರಾಧಿಸುತ್ತಿದ್ದು, ದೇವಿಯ ಶಕ್ತಿ, ಪ್ರಭಾವವು ಅಪಾರವಾಗಿದೆ' ಎಂದು ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಸಿದ್ಧ ಸಂಸ್ಥಾನ ಪೀಠದಲ್ಲಿ ದಸರಾ ಮಹೋತ್ಸವ ನಿಮಿತ್ತವಾಗಿ ಏರ್ಪಡಿಸಿದ್ದ ಶ್ರೀದೇವಿ ಮಹಾತ್ಮೆ ಪುರಾಣ, ಪ್ರವಚನದಲ್ಲಿ ಮಾತನಾಡಿದರು.
ದೇಶದಲ್ಲಿ 18 ಶಕ್ತಿಪೀಠಗಳಿದ್ದು, ದಸರೆಯ ಹಬ್ಬವು ಭಾರತಕ್ಕೆ ಬಹುಮುಖ್ಯವಾದ ಉತ್ಸವ, ಆಚರಣೆಯಾಗಿದೆ. ಜಗತ್ತಿನ ವಿವಿಧ ದೇಶಗಳಲ್ಲಿಯೂ ಸಹ ದೇವಿಯನ್ನು ಬೇರೆ ಬೇರೆ ರೂಪಗಳಲ್ಲಿ ಆರಾಧಿಸುವರು ಎಂದರು.
ನವರಾತ್ರಿಯು ದೇವಿಯ ಪ್ರಸನ್ನತೆಯಲ್ಲಿರುವುದರಿಂದ ಭಕ್ತರ ಕೋರಿಕೆಗೆ ಕೃಪೆದೋರುವಳು ಎಂದು ಹೇಳಿದರು. ಶೂನ್ಯ ಸಿಂಹಾಸನಾಧೀಶ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀಶಿವಲಿಂಗೇಶ್ವರ ಕುಮಾರೇಂದ್ರ್ಸ ಮಹಾಸನ್ನಿಧಿಯವರು ಆಶೀರ್ವದಿಸಿದರು.
ರೋಣದ ಪುಟ್ಟರಾಜ ಸಂಗೀತವು ಶ್ರೋತೃತಗಳ ಮನತಣಿಸಿತು. ವಿಜಯ ದೊಡ್ಡಣ್ಣವರ ತಬಲಾ ಸಾಥ್ ಗಮನಸೆಳೆಯಿತು. ನಾಡಿನ ವಿವಿಧೆಡೆಯಿಂದ ಭಕ್ತರು ಭಾಗವಹಿಸಿದ್ದರು.