ಸಂವಿಧಾನ ಶೋಷಿತ ಸಮುದಾಯಗಳ ಅಕ್ಷಯಪಾತ್ರೆ: ಭಜಂತ್ರಿ

ಪ್ರಜಾಪ್ರಭುತ್ವ ವ್ಯವಸ್ಥೆಯ ನಮ್ಮ ದೇಶದ ಸಂವಿಧಾನವೆಂಬುದು ಶೋಷಿತ ಸಮುದಾಯಗಳಿಗೆ ಅಕ್ಷಯಪಾತ್ರೆಯಿದ್ದಂತೆ. ಬಯಸಿದ್ದನ್ನು ಕೊಡುವ ಮಹಾಭಾರತದ ಅಕ್ಷಯಪಾತ್ರೆಯಂತೆ ಸಂವಿಧಾನ ನೀಡಿದ ಅವಕಾಶ ಮತ್ತು ಸವಲತ್ತುಗಳ ಮೂಲಕ ನಾವೀಗ ಅಲ್ಪ ಮಟ್ಟಿಗೆ ಗುರಿ ಸಾಧಿಸುತ್ತಿದ್ದೇವೆ. ಜೊತೆಗೆ ನಿರಂತರ ಹೋರಾಟದ ದಾರಿ ಮತ್ತು ತಲುಪಬೇಕಾದ ಗುರಿ ಇನ್ನೂ ದೂರವಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ವೈ.ಎಂ.ಭಜಂತ್ರಿ ಅರ್ಥಪೂರ್ಣವಾಗಿ ಹೇಳಿದರು. ಅವರು ಇತ್ತೀಚೆಗೆ ಧಾರವಾಡದ ಗಣಕರಂಗ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಸಾಮಾಜಿಕ ಪರಿವರ್ತನಕಾರರ ಸ್ಮರಣೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 202ನೇ ಕೋರೆಗಾಂವ ವಿಜಯೋತ್ಸವದ ಪ್ರಯುಕ್ತ ಸಾಧಕರಿಗೆ ಸನ್ಮಾನ, ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ ಮತ್ತು ಅನಾಮಧೇಯ ಹೂ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಎದೆಗೆ ಬಿದ್ದ ಅಕ್ಷರ ಮತ್ತು ನೆಲಕ್ಕೆ ಬಿದ್ದ ಬೀಜ ಒಂದಲ್ಲಾ ಒಂದು ದಿನ ಫಲ ನೀಡುವಂತೆ ನಾವು ಯೋಚಿಸಿದಂತೆ ನಮ್ಮ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಹಂಪಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯತ್ವ ನನಗೆ ದಕ್ಕಿರುವುದೇ ಸಾಕ್ಷಿ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹಿರಿಯ ಜಂಟಿ ನಿರ್ದೇ ಶಕ ಸದಾಶಿವ ಮರ್ಜಿ ಯವರು ಯಾವುದೇ ಚಳುವಳಿ ಮೊಳಕೆಯೊಡೆಯುವುದೇ ಕೆಲವೇ ಜನರಿಂದ. ಮುಂದೆ ಅದು ಜನಾಂಧೋಲನವಾಗಿ ಹೋರಾಟದ ಕಿಚ್ಚು ಮೈಗೂಡಿಸಿಕೊಂಡು ಯಶಸ್ವಿಯಾಗುತ್ತವೆ. ಹಾಗೆಯೇ ಅಂದು ಫುಲೆ ದಂಪತಿಗಳಿಂದ ಆರಂಭಗೊಂಡ ಅಕ್ಷರದ ಚಳುವಳಿಯು ಇಂದು ಫಲ ನೀಡುತ್ತಿದೆ. ಪರಿಣಾಮವಾಗಿ ಸಾಧಕರು ಹೆಚ್ಚು ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ.ವೈ.ಎಂ.ಭಜಂತ್ರಿ (ಶಿಕ್ಷಣ), ತಮ್ಮಣ್ಣ ಮಾದರ (ಸಾರ್ವಜನಿಕ ಸೇವೆ), ಡಾ.ಪ್ರಕಾಶ ಮಲ್ಲಿಗವಾಡ (ಕಲೆ), ಮಾತರ್ಾಂಡಪ್ಪ ಕತ್ತಿ (ಸಾಹಿತ್ಯ) ಮತ್ತು ಅಶೋಕ ಹೊಸಮನಿ (ಕಾವ್ಯ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅನಾಮಧೇಯ ಹೂ ಕೃತಿಯನ್ನು ಬಿಡುಗಡೆ ಮಾಡಿದ ಶಿಕ್ಷಕಸಾಹಿತಿ ಮೈಲಾರಪ್ಪ ಬೂದಿಹಾಳರವರು ಕೃತಿಯ ಪರಿಚಯ ಮಾಡಿದರು. ವೇದಿಕೆಯಲ್ಲಿ ಚಿಂತಕ ಲಕ್ಷ್ಮಣ ಬಕ್ಕಾಯಿ ಉಪಸ್ಥಿತರಿದ್ದರು. ಅನಿಲ ಮೇತ್ರಿ ಮತ್ತು ಸಂಗಡಿಗರಿಂದ ಗಾಯನ ಕಾರ್ಯಕ್ರಮ ಮತ್ತು ಪ್ರಕಾಶ ಮಲ್ಲಿಗವಾಡ ತಂಡದಿಂದ ಸಮೂಹ ನೃತ್ಯ ಕಾರ್ಯಕ್ರಮ ನಡೆದವು. ಕೊನೆಯಲ್ಲಿ ಭಾಸ್ಕರ ಹಿತ್ತಲಮನಿ ತಂಡದವರು ಯೋಗೇಶ ಪಿ. ನಿರ್ದೇ ಶನದಲ್ಲಿ ಕೊನೆ ಎಂದಿಗೆ ? ನಾಟಕ ಪ್ರದರ್ಶನ ನೀಡಿದರು. ಗಣಕರಂಗದ ಹಿಪ್ಪರಗಿ ಸಿದ್ಧರಾಮ ನಿರೂಪಿಸಿ ವಂದಿಸಿದರು. ವೈಬಿ ಚಲವಾದಿ, ಡಾ.ಅನ್ನಪೂರ್ಣ ತಳಕಲ್ಲ, ನಿತಿನ್ ಗುಡಿಮನಿ, ಎಎ ದರ್ಗಾ , ಪ್ರೇಮಾನಂದ ಸಿಂಧೆ ಮುಂತಾದವರು ಉಪಸ್ಥಿತರಿದ್ದರು.