ದೇವರಾಜ ಅರಸು ಭವನದ ಉದ್ಘಾಟನೆ ಎಂದು?

ಶಶಿಧರ ಶಿರಸಂಗಿ

ಶಿರಹಟ್ಟಿ 10: ಕರ್ನಾಟಕ ಸರ್ಕಾರವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಾವಿರಾರು ಕೋಟಿ ಹಣವನ್ನು ಮಂಜೂರು ಮಾಡುತ್ತಿದೆ. ಅದೇ ರೀತಿ ಶಿರಹಟ್ಟಿ ತಾಲೂಕಿನ ಡಿ ದೇವರಾಜು ಅರಸು ಭವನದ ನಿಮರ್ಾಣಕ್ಕೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸಭಾ ಭವನ ಮತ್ತು ಕಚೇರಿ ಬಳಕೆಗೆ ವ್ಯವಸ್ಥೆಗಳನ್ನು ಒಳಗೊಂಡ ಸುಂದರವಾದ ಕಟ್ಟಡ ಶಿರಹಟ್ಟಿ ಪಟ್ಟಣದ ಛಬ್ಬಿ ರಸ್ತೆಗೆ ಹೊಂದಿಕೊಂಡು ನಿರ್ಮಾಣವಾಗಿ ತಿಂಗಳುಗಳಿಂದ ಉದ್ಘಾಟನೆಗಾಗಿ ಕಾಯುತ್ತಾ ಇದೆ. ಆದರೆ ಕಾರಣಾಂತರಗಳಿಂದ ಲೋಕಾರ್ಪಣೆಗೊಳ್ಳದೇ ಹಾಗೆಯೇ ತಲೆ ಎತ್ತಿ ನಿಂತಿದೆ. ಹೂವು ಬಾಡುವ ಮುನ್ನ ದೇವರಿಗೆ ಸಮಪರ್ಿತವಾಗಬೇಕು ಎನ್ನವಂತೆ ಹಾಗೆಯೇ ಈ ಕಟ್ಟಡ ಆದಷ್ಟು ಬೇಗನೆ ಸಾರ್ವಜನಿಕರಿಗೆ ಉಪಯೋಗವಾಗಲಿ ಎನ್ನುವುದು ಜನರ ಆಶಯವಾಗಿದೆ. 

ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣ: ಹಿಂದು ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸ್ ಭವನವನ್ನು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸುಂದರವಾಗಿ ಭವ್ಯ ಹಾಗೂ ಸುಸಜ್ಜಿತವಾಗಿ, ನಿರ್ಮಿತಿ ಕೇಂದ್ರದವರಿಂದ ನಿಮರ್ಾಣವಾಗಿದೆ. ಸೂಕ್ತ ಸಮಯದಲ್ಲಿ ಉದ್ಘಾಟನೆಗೊಂಡು ಸಾರ್ವಜನಿಕರಿಗೆ ಉಪಯುಕ್ತವಾದರೆ ಸಾರ್ಥಕವಾಗುತ್ತದೆ. ಇಲ್ಲವಾದರೆ ಪುಂಡ ಪೋಕರಿಗಳಿಗೆ ಹೇಳಿ ಮಾಡಿಸಿದ ಅನೈತಿಕ ಚಟುವಟಿಕೆಗಳಿಗೆ ಆಶ್ರಯದಾಣವಾಗುತ್ತದೆ. ಆದ್ದರಿಂದ ಶೀಘ್ರವಾಗಿ ಉದ್ಘಾಟನೆಗೊಳ್ಳುವುದು ಅವಶ್ಯವಿದೆ ಎಂಬುದು ಸಾರ್ವಜನಿಕರ ಆಸೆಯಾಗಿದೆ.  

ಸದ್ಯ ಈ ಇಲಾಖೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ: ಸದ್ಯ ಹಿಂದು ವರ್ಗಗಳ ಕಲ್ಯಾಣ ಇಲಾಖೆಯು ಪಟ್ಟಣದ ಕೇಂದ್ರ ಭಾಗದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ತಿಂಗಳು ಸುಮಾರು 12 ಸಾವಿರ ಬಾಡಿಗೆಯನ್ನು ನೀಡಿ ಕಾರ್ಯನಿರ್ವಹಿಸುತ್ತಿರುವುದು ಎಲ್ಲರ ಕೆಂಗೆಣ್ಣಿಗೆ ಗುರಿಯಾಗಿದೆ. ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿದ್ದರೂ ಸಹಿತ ಉದ್ಘಾಟನೆಯಾಗಿಲ್ಲ ಎಂಬ ನೆಪದಿಂದ ಅನಾವಶ್ಯಕವಾಗಿ ಬಾಡಿಗೆ ನೀಡಲಾಗುತ್ತಿದೆ. ಈ ಕುರಿತು ತಾಲೂಕ ಪಂಚಾಯತ ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಯಲ್ಲಿ ಸಾಕಷ್ಟು ಬಾರಿ ಚಚರ್ೆಯಾಗಿದ್ದರು ಸಹಿತ ಉದ್ಘಾಟನೆಗೆ ಭಾಗ್ಯ ಬಂದಿಲ್ಲ ಎಂಬುದು ನಿರಾಸೆಯನ್ನು ತಂದಿದೆ. 

ಈ ಲೇಖನದ ಮೂಲಕವಾದರು ಅಧಿಕಾರಿಗಳು ಎಚ್ಚೆತ್ತುಕೊಂಡು ಶೀಘ್ರವಾಗಿ ಉದ್ಘಾಟನೆಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಾರೋ ಇಲ್ಲವೂ ಇನ್ನು ಮುಂದೆಯೂ ಕುಂಟು ನೆಪ ಹೇಳಿ ಬಾಡಿಗೆ ಕಟ್ಟಡದಲ್ಲಿಯೇ ಮುಂದುವೆರೆಯುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.  ಉದ್ಘಾಟನೆಯ ನೆಪದಲ್ಲಿ ನಿರ್ಲಕ್ಷವಾದರೆ ಕಟ್ಟಡ ನಿರುಪಯುಕ್ತವಾಗಿ ದುರ್ಬಳಕೆಗೆ ಕಾರಣವಾಗಬಾರದು. ಶೀಘ್ರವಾಗಿ ನಿರ್ಧಾರವನ್ನು ಕೈಗೊಂಡು ಉದ್ಘಾಟನೆಯನ್ನು ನೆರವೇರಿಸಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.