ನೂತನ ಕ್ರೀಡಾ ಮೈದಾನ ಉದ್ಘಾಟನೆ

ಮೂಡಲಗಿ 12:   ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆ ಮಾಡಿದ ಕರುನಾಡು ಸೈನಿಕ ತರಬೇತಿ ಕೇಂದ್ರವು ಗ್ರಾಮೀಣ ಭಾಗದ ಯುವಕರಿಗೆ ಸೇನೆಗೆ ಸೇರುವ ಭರವಸೆ ಕಲ್ಪಿಸಿದೆ ಎಂದು ಬಿ.ಇ.ಓ ಅಜೀತ ಮನ್ನಿಕೇರಿ ಹೇಳಿದರು.

ಇಲ್ಲಿಯ ವಿ.ಬಿ. ಸೋನವಾಲಕರ ಮೆಮೊರಿಯಲ್ ಇಂಗ್ಲಿಷ್ ಮಾಧ್ಯಮ ಶಾಲಾ ಆವರಣದಲ್ಲಿ ನಿಮರ್ಾಣಗೊಂಡ ನೂತನ ಸುಸಜ್ಜಿತ ಕ್ರೀಡ ಮೈದಾನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕ್ರೀಡಾ ಮೈದಾನವು ಸೈನಿಕ ತರಬೇತಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಸೇನಾ ತರಬೇತಿ ಕೇಂದ್ರಕ್ಕೆ ಕ್ರೀಡಾ ಮೈದಾನವನ್ನ ಕಲ್ಪಿಸಿಕೊಟ್ಟಿರುವ ವೀರಣ್ಣ ಹೊಸೂರ ಅವರು ದೇಶಪ್ರೇಮವನ್ನು ಮೆರೆದಿದ್ದಾರೆ ಎಂದರು.

ಯುವಕರು ತಮ್ಮ ಉಜ್ವಲ ಭವಿಷ್ಯ ನಿಮರ್ಾಣಕ್ಕೆ ಸಾಕಷ್ಟ ಅವಕಾಶಗಳಿದ್ದು, ಶ್ರದ್ಧೆ, ಪರಿಶ್ರಮದ ಮೂಲಕ ಉತ್ತಮ ಭವಿಷ್ಯವನ್ನು ನಿಮರ್ಿಸಿಕೊಳ್ಳಬೇಕು ಎಂದರು. ಅತಿಥಿ ಬಾಲಶೇಖರ ಬಂದಿ ಮಾತನಾಡಿ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಪೌಷ್ಟಿಕ ಆಹಾರ, ಆರೋಗ್ಯ ಮತ್ತು ಶಿಕ್ಷಣ ಪ್ರಮುಖವಾಗಿದೆ. ಯುವಕರು ಸದೃಢ ದೇಶ ಕಟ್ಟುವ ಸಲುವಾಗಿ ಜ್ಞಾನದೊಂದಿಗೆ ಸದೃಢ ಶರೀರವನ್ನು ನಿಮರ್ಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆವಹಿಸಿದ್ದ ವ್ಹಿ. ಬಿ. ಸೋನವಾಲ್ಕರ ಆಂಗ್ಲ ಮಾದ್ಯಮ ಶಾಲೆ ಅದ್ಯಕ್ಷ ವೀರಣ್ಣ ಹೊಸೂರ ನೂತನ ಕ್ರೀಡಾ ಮೈದಾನವನ್ನು ಗಣ್ಯರೊಂದಿಗೆ ಉದ್ಘಾಟಿಸಿದರು. 

ಪುರಸಭೆ ಮಾಜಿ ಉಪಾದ್ಯಕ್ಷ ಆರ್.ಪಿ.ಸೋನವಾಲ್ಕರ, ಹಿರಿಯ ಪತ್ರಕರ್ತ, ಕರುನಾಡು ತರಬೇತಿ ಕೇಂದ್ರದ ಸಂಚಾಲಕ ಶಂಕರ ತುಕ್ಕನ್ನವರ ಪ್ರಾಸ್ತಾವಿಕ ಮಾತನಾಡಿದರು.ಮಲ್ಲಿಕಾಜರ್ುನ ಬಳಿಗಾರ, ಎಮ್.ವೈ ಮರೆಪ್ಪಗೋಳ,ತಾ.ಪಂ.ಸದಸ್ಯ ಶಿವಬಸು ಜುಂಜರವಾಡ, ಸಿದ್ದಪ್ಪ ಮಗದುಮ್, ಈರಪ್ಪ ಡವಳೇಶ್ವರ, ಅಸ್ಕರ ಇನಾಮದಾರ ಇನ್ನಿತರರು ಇದ್ದರು.