ಇ-ಆಫೀಸ್ ತಂತ್ರಾಂಶದ ಅನುಷ್ಠಾನದ ಉದ್ಘಾಟನೆ

ಗದಗ 05: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬೆಂಗಳೂರು ಹಾಗೂ ರಾಜ್ಯ ಅಪರಾಧ ದಾಖಲಾತಿ ವಿಭಾಗ ಬೆಂಗಳೂರು ಮತ್ತು ಜಿಲ್ಲಾಡಳಿತ ಗದಗ ಇವರ ಆಶ್ರಯದಲ್ಲಿ ಗದಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಇ-ಆಫೀಸ್ ತಂತ್ರಾಂಶದ ಅನುಷ್ಠಾನದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಅವರು ದಿ. 04ರಂದು ನೆರವೇರಿಸಿದರು. 

ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇ-ಆಫೀಸ್ ಮೂಲಕ ಕಚೇರಿ ಕಡತಗಳ ನಿರ್ವಹಣೆಯನ್ನು ಸರಕಾರದ ಆದೇಶದಂತೆ ದಿ. 01ರಿಂದ ಪ್ರತಿ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಮಾಡಬೇಕಿರುವುದು ಕಡ್ಡಾಯವಾಗಿದ್ದು ಇನ್ನು ಮುಂದೆ ಜಿಲ್ಲಾ ಮಟ್ಟದ ಕಚೇರಿಗಳು ಹಾಗೂ ತಾಲೂಕು ಮಟ್ಟದ ಕಚೇರಿಗಳು ಹಿಂದಿನ ಹಳೆ ಪದ್ಧತಿಯಿಂದ ತ್ವರಿತ, ಸಾರ್ವಜನಿಕ ಸ್ನೇಹಿ ಹಾಗೂ ಪೇಪರ್ ಲೆಸ್ ಆಡಳಿತದ ಕಡೆಗೆ ಹೆಜ್ಜೆಯಿರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಮಾತನಾಡಿ ಜಿಲ್ಲಾ ಪೋಲೀಸ್ ಕಾರ್ಯಾಲಯದಲ್ಲಿ ಎಲ್ಲಾ ಸಿಬ್ಬಂದಿಗಳಿಗೆ ಮಾಸ್ಟರ್ ಟ್ರೇನಸರ್್ಗಳ ಮುಖಾಂತರ ಇ-ಆಫೀಸ್ ತರಬೇತಿಯನ್ನು ನೀಡಲಾಗಿದ್ದು, ಇ-ಆಫೀಸ್ ನಿರ್ವಹಣೆಯು ಹಿಂದಿನ ಕಾರ್ಯನಿರ್ವಹಣೆಗಿಂತ ಉತ್ತಮ ಮತ್ತು ಸುಲಭವಾಗಿದ್ದು ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹ ಬೇಡ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಲಯದ ಸಹಾಯಕ ಆಡಳಿತಾಧಿಕಾರಿ ಎನ್.ಎಸ್.ಹಿಪ್ಪರಗಿ, ಶಾಖಾಧೀಕ್ಷಕರಾದ ಪಿ.ಎಸ್.ಬಾಳಿಕಾಯಿ, ಬಸವರಾಜ ಬಿರಾದಾರ ಸೇರಿದಂತೆ ಲಿಪಿಕ ಸಿಬ್ಬಂದಿ ವರ್ಗ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.  ಜಿಲ್ಲಾಧಿಕಾರಿಗಳ ಕಾಯರ್ಾಲಯದ ಮಾಸ್ಟರ್ ತರಬೇತಿದಾರರಾದ ಪ್ರಶಾಂತ ಚಿಕ್ಕನಾಳ, ಚಂದ್ರಶೇಖರ ಅಗ್ಗಿಮಠ. ಹಾಗೂ ಅನೂಪ್ ಇಂಚಲ್. ಇವರು ಸಹ ಹಾಜರಿದ್ದರು. ತರಬೇತಿ ಹೊಂದಿದ ಲಿಪಿಕ ಸಿಬ್ಬಂದಿರವರಿಗೆ ಈ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ಜಿಲ್ಲಾಧಿಕಾರಿಗಳು ವಿತರಿಸಿದರು.