ಉಚಿತ ದಂತ ತಪಾಸಣಾ ಶಿಬಿರ ಉದ್ಘಾಟನೆ

ಲೋಕದರ್ಶನ ವರದಿ

ಶಿರಸಂಗಿ 14: ಹಲ್ಲು ಮಾನವನ ಶರೀರದ ಪ್ರಮುಖ ಅಂಗ. ಹಲ್ಲು ತೆಗೆಸಿದರೆ ಕಣ್ಣು ಕುರುಡಾಗುವುದು, ತಲೆ ಮಂದಾಗುವುದು ಎಂಬ ತಪ್ಪು ತಿಳುವಳಿಕೆ ದೂರ ಮಾಡಿ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ದಂತ ವೈದ್ಯಾಧಿಕಾರಿ ಡಾ. ಅಯ್ಯನಗೌಡ ಕಬ್ಬೂರ ಹೇಳಿದರು. ಜೈಂಟ್ಸ್ ವೆಲ್ಫೇರ್ ಪೌಂಡೇಶನ್, ಜೈಂಟ್ಸ್ ಗ್ರೂಪ್ ಆಪ್ ಸವದತ್ತಿ ಹಾಗೂ ಡಾ. ಕಬ್ಬೂರ ಮಲ್ಟಿ ಸ್ಪೇಷಾಲಿಟಿ ಡೆಂಟಲ್ ಕ್ಲಿನಿಕ್ ಸವದತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕಗಧಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಉಚಿತ ದಂತ ತಪಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಮಕ್ಕಳ ಹಾಗೂ ಜನತೆಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ. ಮಕ್ಕಳಿಗೆ ಆಹಾರ ಸೇವಿಸುವಲ್ಲಿ ಹೆಚ್ಚು ಆಸಕ್ತಿ ವಹಿಸುವುದು ಅಗತ್ಯವಿದೆ ಎಂದರು. ಜೈಂಟ್ಸ್ ವೇಲ್ಪೇರ್ ಪೌಂಡೇಶನ್ ಅಧ್ಯಕ್ಷ ಎಮ್.ಎಸ್. ಸವರ್ಿ ಕಾರ್ಯಕ್ರಮ ಉದ್ಘಾಟಿಸಿದರು. ಜೈಂಟ್ಸ್ ಗ್ರೂಪ್ ಅಧ್ಯಕ್ಷ ಬಿ.ಎಸ್. ಬಾಂಡೇಕರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನ್ಯಾಯವಾದಿ ಹಾಗೂ ಜೈಂಟ್ಸ್ ವೇಲ್ಪರ್ ಪೌಂಡೇಶನ್ ನಿರ್ದೇಶಕ ಎಮ್.ಎಮ್. ಯಲಿಗಾರ, ಜೈಂಟ್ಸ್ ಗ್ರೂಪಿನ್ ಕಾರ್ಯದರ್ಶಿ ಯಶವಂತ ಪಾಸ್ತೆ, ಡಾ. ಶಾಂತೇಶ ಮಳಗಿ, ಡಾ. ವಿಲಾಸ ಪತ್ತಾರ, ಶಾಲೆಯ ಮುಖ್ಯೋಪಾಧ್ಯಯ ರಮೇಶ ರಾಠೋಡ, ಮಾಯಪ್ಪ ಜೊತೆನ್ನವರ, ಎಸ್.ವಿ. ಶೆಟ್ಟರ ಸೇರಿದಂತೆ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಟೂಥ್ಪೆಸ್ಟ್ ಮತ್ತು ಬ್ರೇಶ್ಗಳನ್ನು ನೀಡಿದರು.