ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಲೋಕದರ್ಶನ ವರದಿ

ಗೋಕಾಕ: ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ವಿದ್ಯಾಥರ್ಿಗಳ ಸವಾರ್ಂಗೀಣ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಇಲ್ಲಿನ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಹಿಂದಿನ ವಿದ್ಯಾಥರ್ಿನಿ ಹಾಗೂ ರಾಷ್ಟ್ರ ಮಟ್ಟದ ಬಾಸಕೇಟ ಬಾಲ್ ಕ್ರೀಡಾಪಟು ರಿಯಾ ವಂಟಮೂರಿಮಠ ಹೇಳಿದರು.

    ಸೋಮವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ವಾಷರ್ಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ ಕ್ರೀಡೆಗಳಲ್ಲಿ ಷಪಾಲ್ಗೋಳುವದರಿಂದ ಸದೃಢ ಆರೋಗ್ಯವಂತರಾಗಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ವಿದ್ಯಾಥರ್ಿಗಳು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿ ಪ್ರತಿಭಾನ್ವಿತರಾಗಿರೆಂದು ಹಾರೈಸಿದರು. 

   ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇನ್ನೋರ್ವ ಕ್ರೀಡಾಪಟು ಮಧುಶ್ರೀ ಹಿರೇಮಠ ಮಾತನಾಡಿ ವಿದ್ಯಾಥರ್ಿಗಳು ಸೋಲು ಗೆಲುವಿಗೆ ಮಹತ್ವ ನೀಡಿದೆ ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಪಾಲ್ಗೊಂಡು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರತಿಭೆಗಳಾಗಿ ನಾಡಿನ ಕೀತರ್ಿಯನ್ನು ಹೆಚ್ಚಿಸಿರಿ ಎಂದರು.

   ವೇದಿಕೆ ಮೇಲೆ ಮುಖ್ಯೋಪಾಧ್ಯಾಯನಿ ಸಿ.ಬಿ.ಪಾಗದ, ಶಿಕ್ಷಕ ಎಂ.ಸಿ.ವಣ್ಣೂರ ಇದ್ದರು. ಶಿಕ್ಷಕಿ ಎಸ್.ಎಸ್.ಭಂಡಾರಿ ಸ್ವಾಗತಿಸಿದರು, ಎನ್.ಕೆ ಮಕಾಂದಾರ ನಿರೂಪಿಸಿದರು, ಬಿ.ಬಿ.ಕೊಚ್ಚರಗಿ ವಂದಿಸಿದರು.