ಲೋಕದರ್ಶನ ವರದಿ
ಬೆಳಗಾವಿ 29: 1904 ರಲ್ಲಿ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ಸಿದ್ದನಗೌಡರು ಪ್ರಾರಂಭಿಸಿದ ಸಹಕಾರ ಸಂಸ್ಥೆ ಇಂದಿಗೆ 115 ವರ್ಷವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಹಕಾರ ಸಂಸ್ಥೆಗಳು ಬೃಹತ್ತಾಗಿ ಬೆಳೆದಿವೆ. ಪ್ರತಿ ವರ್ಷ ನವಂಬರ 14 ರಂದು ನೆಹರು ಅವರ ಹುಟ್ಟುಹಬ್ಬದ ಪ್ರಯೂಕ್ತ ಸಹಕಾರ ಸಪ್ತಾಹವನ್ನು ಆಚರಿಸುತ್ತಾ ಬಂದಿದ್ದೆವೆ. ಆದರೆ ಸಹಕಾರ ಕ್ಷೇತ್ರಕ್ಕೆ ಯುವಕರ ಪ್ರವೇಶ ತೀರಾ ಕಡಿಮೆಯಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ಧೆಶಕರಾದ ಬಿ ಎಸ್ ಸುಲ್ತಾನಪುರಿ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್ ನಿ., ಬೆಳಗಾವಿ ಹಾಗೂ ಶಿವಾ ಕ್ರೇಡಿಟ್ ಸೌಹಾರ್ದ ಸಹಕಾರಿ ನಿ., ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ಮಹಾಂತ ಭವನ ಮಹಾಂತೇಶ ನಗರ ಬೆಳಗಾವಿ ಇದರ ಸಭಾಭವನದಲ್ಲಿ ಜರುಗಿದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡಿ ಸಹಕಾರ ರಂಗದಲ್ಲಿ ಇಂದು ಒಂದು ಲಕ್ಷ್ಯ ಮಹಿಳೆಯರು ಆಡಳಿತ ಮಂಡಳಿಯ ಸದಸ್ಯರಾಗಿ ಉದ್ಯೋಗಿಯಾಗಿ ಬಾಗವಹಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ಮಹಿಳಾ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘ ನಿ., ಹುಕ್ಕೇರಿ ಮತ್ತು ರಾಮದುರ್ಗ ತಾಲೂಕಿನಲ್ಲಿ 100 ಎಕರೇ ವಿಸ್ತೀರ್ಣವಾದ ಚಂದರಗಿ ಕ್ರೀಡಾ ಶಾಲೆ, ಜೇ ಜೇ ಆಸ್ಪತ್ರೆ ಘಟಪ್ರಭಾ, ಮತ್ತು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ ನಿ., ಬೆಳಗಾವಿ ಸಂಸ್ಥೆಗಳು ಬೆಳಗಾವಿಯಲ್ಲಿ ಮಾದರಿ ಸಹಕಾರ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ, ಜಿಲ್ಲೆಯಾದ್ಯಾಂತ 12 ನೂರು ಕೊಟಿ ಸಾಲವನ್ನು ಬಿ.ಡಿ.ಸಿ.ಸಿ ಬ್ಯಾಂಕ ಮೂಲಕ ರೈತರಿಗೆ ನೀಡಲಾಗಿದೆ. ಎಂದರು. ಸಹಕಾರ ಕ್ಷೇತ್ರಕ್ಕೆ ಎಲ್ಲರು ಮುಕ್ತ ಮನಸ್ಸಿನಿಂದ ಬಂದು ಭಾಗವಹಿಸಬೇಕು. ಸಹಕಾರ ಕ್ಷೇತ್ರದ ಬೆಳವಣಿಗೆಗೆ ಯುವಕರ ಪಾತ್ರ ಪ್ರಮುಖವಾಗಿದೆ, ಅನೇಕ ರಾಜಕಿಯ ನಾಯಕರಿಗೆ ಸಹಕಾರ ಕ್ಷೇತ್ರ ಭದ್ರ ಬುನಾದಿ ಯಾಗಿದೆ ಎಂದು ಹೆಳಿದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ ಬಿ.ಡಿ. ಪಾಟೀಲ ಮಾತನಾಡಿ, ಈ ಸಹಕಾರ ಕ್ಷೇತ್ರಕ್ಕೆ ಯುವಕರು ಹೆಚ್ಚಿನ ಸೆಂಕ್ಕೆಯಲ್ಲಿ ಬಾಗವಹಿಸಬೇಕು ಮತ್ತು ಸ್ವಂತ ಉಧ್ಯೋಗ ಮಾಡಲು ಸಹಕಾರ ಸಂಸ್ಥೆಗಳಿಂದ ಅನೇಕ ಸೌಲಭ್ಯಗಳನ್ನು ಸಾಲ ಸೌಲಭ್ಯಗಳನ್ನು ನಿರೂದ್ಯೋಗ ಯುವಕರು ಮತ್ತು ಯುವತಿಯವರು ಇದರ ಪ್ರಯೋಜನವನ್ನು ಪಡೆದುಕೊಳಬೇಕೆಂದು ವಿಧ್ಯಾರ್ಥಿಗಳಿಗೆ ಸಲಹೆ ನೀಡಿದರು.
ಉಪನ್ಯಾಸಕರಾದ ಬೆಳಗಾವಿ ಪ್ರಾಂಶುಪಾಲರು ಎಮ್ ಎನ್ ಆರ್ ಶಿಕ್ಷಣ ಮಹಾವಿಧ್ಯಾಲಯ ಮಹಾತೇಂಶ ನಗರ ಬೆಳಗಾವಿ ಶ್ರೀಮತಿ ಡಾ// ಎನ್ ಜಿ ಭಟ್ಟಲ್ ಇವರು ಯುವ ಜನ ಮಹಿಳಾ ಮತ್ತು ಅಭಲ ವರ್ಗಕ್ಕಾಗಿ ಸರಕಾರ ಸಂಸ್ಥೆಗಳು ಎಂಬ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ನಿನ ಉಪಾಧ್ಯಕ್ಷರಾದ ಶ್ರೀ ಬಿ.ಎನ್ ಉಳ್ಳಾಗಡ್ಡಿ, ಶಿವಾ ಕ್ರೇಡಿಟ ಸೌಹಾರ್ದ ಸಹಕಾರಿ ನಿ. ಇದರ ನಿರ್ಧೆಶಕರಾದ ವಾಯ.ಎನ್. ಮೇಲಿನಮನಿ, ಸಹಾಯಕ ಸಹಕಾರ ಸಂಘಗಳ ಸಹಾಯಕ ನಿಭಂದಕರು ಬೆಳಗಾವಿ, ಎಮ್.ಎಸ್ ಗೌಡಪ್ಪಣವರ ಮುಖೋಪಾದ್ಯಾಯರಾದ ಮುಖ್ಯ ಗುರುಗಳಾದ ಎಸ್.ಎಮ್ ಬಡ್ಡೂರ, ಮುಖೋಪಾದ್ಯಾಯರಾದ ಶೈಲಜಾ ಡಿ ಲಕ್ಷಮೇಶ್ವರ ವೇದಿಕೆಯ ಮೇಲಿದ್ದರು.
ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ ಸ್ವಾಗತಿಸಿದರು. ಜಿಲ್ಲಾ ಸಹಕಾರ ಶಿಕ್ಷಕರಾದ ಹಾಲಪ್ಪ ಜಗ್ಗಿವರ ಅವರು ನಿರೂಪಿಸಿ, ವಂದಿಸಿದರು.