ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ

ಲೋಕದರ್ಶನ ವರದಿ

ಬೈಲಹೊಂಗಲ 04: ವಿದ್ಯಾರ್ಥಿಗಳಲ್ಲಿ ಸತತ ಪ್ರಯತ್ನವಿದರೆ ಬಡತನವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೆಎಎಸ್  ಐಎಎಸ್ ಅಂತಃ ಹುದ್ದೇ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ಬಡಿಗೇರ ಹೇಳಿದರು.

     ಅವರು ಸೋಮವಾರ ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಾಪೂಜಿ ಕಲಾ ಮತ್ತು ವಾಣಿಜ್ಯ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಹಾಗೂ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡಿದಾಗ ಮಾತ್ರ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ.ಬರೀ ಓದು-ಬರಹದಲ್ಲಿ ಪ್ರತಿಭಾವಂತರಾದರೆ ಸಾಲದು, ಸಾಮಾನ್ಯ ಜ್ಞಾನ, ಹಾಸ್ಯ, ಸಂಗೀತ, ಕ್ರೀಡೆ, ಜನರಲ್ ನಾಲೇಡ್ಜ್ ಸೇರಿದಂತೆ ವಿವಿಧ ಕ್ಷೇತ್ರಗಳ ಜ್ಞಾನವೂ ತಿಳಿದುಕೊಳ್ಳಬೇಕೆಂದರು. 

      ಯಕ್ಕುಂಡಿಯ ವಿರಕ್ತಮಠದ ಕುಮಾರೇಶ್ವರ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ  ವೆಂಕವ್ವಾ ಯರಡ್ಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಬಸವರಾಜ ಅಡಿಕಿ, ಮೋಹನದಾಸ ಕಟಗಿ, ಸುರೇಶ ಯರಡ್ಡಿ, ನಾರಾಯಣ ನವಲಡೆ, ವಿಜಯಕುಮಾರ ಕಡಕೋಳ, ಪ್ರಾಚಾರ್ಯರಾದ ಹಸನ ಗೋರವನಕೊಳ್ಳ, ರಮೇಶ ಸವನೂರ ಇದ್ದರು. ಎಸ್.ಡಿ.ಹೊಸಮನಿ, ಬಿ.ಸಿ.ಹುಬ್ಬಳ್ಳಿ, ಎಮ್.ಎಮ್.ಶೆಲ್ಲಿ, ಎಲ್.ಎಫ್.ಬೊಳೆತ್ತಿನ,ಪಿ.ಎಸ್.ಕುಲಕಣರ್ಿ, ಜಿ.ಎಂ.ತುರಮರಿ, ವ್ಹಿ.ವ್ಹಿ.ಸಂಗೊಳ್ಳಿ, ಎನ್.ಎಸ್.ಹೂಲಿ, ಎಸ್.ಎಸ್.ಉಪ್ಪಿನ, ವ್ಹಿ.ಆಯ್.ಸತ್ತಿಗೇರಿ, ಎಸ್.ಜಿ.ಗಾಡದ, ಬಿ.ಬಿ.ಮರೇಪ್ಪಗೋಳ ಹಾಗೂ ವಿದ್ಯಾರ್ಥಿಗಳು ಇದ್ದರು.