ಹಾವೇರಿ04: ತಾಪಮಾನ ಹೆಚ್ಚಳ ಕಾರಣ ಮಾನ್ಸೂನ್ ಮಳೆಯ ವ್ಯತ್ಯಯದಿಂದ ಕೃಷಿ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬಿರುತ್ತದೆ ಎಂದು ಕೃಷಿ ಹವಾಮಾನದ ವಿಷಯ ತಜ್ಞರಾದ ಡಾ. ಪ್ರವೀಣಕುಮಾರ ಗುಳೇದ ಅವರು ಹೇಳಿದರು.
ಹನುಮನಮಟ್ಟಿ ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕದ (ಆಂಒಗ) ವತಿ "ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಕುರಿತು" ಶಿಗ್ಗಾಂವಿ ತಾಲೂಕಿನ ಬಿಸೆಟ್ಟೆಕೊಪ್ಪ ಗ್ರಾಮದಲ್ಲಿ ಬುಧವಾರ ಜರುಗಿದ ಹೊರ ಆವರಣ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಾ. ಶಿವಮೂತರ್ಿ. ಡಿ. ಅವರು ಹವಾಮಾನ ಬದಲಾವಣೆಗೆ ಸೂಕ್ತವಾದ ಪಯರ್ಾಯ ಬೆಳೆ ಪದ್ಧತಿಯ ಬಗ್ಗೆ ಹಾಗೂ ಡಾ. ಕೃಷ್ಣ ನಾಯ್ಕ್ ಅವರು ಹವಾಮಾನ ಬದಲಾವಣೆಗೆ ಅನುಗುಣವಾಗಿ ಕೀಟ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯ ಹನುಮಂತಪ್ಪ ವಾಲಿಕಾರ, ನೀಲಕಾಂತಗೌಡ ಪಾಟೀಲ, ಅಜ್ಜಪ್ಪ ಉಪಾಧ್ಯಯಾ, ಜಗದೀಶ ಮಲ್ಲೂರ ಮತ್ತು ಬಿಸೆಟ್ಟಿಕೊಪ್ಪದ ರೈತರು ಮತ್ತು ರೈತ ಮಹಿಳೆಯರು ಉಪಸ್ಥಿತರಿದ್ದರು.