ಧಾರವಾಡ : ವಿದ್ಯಾರ್ಥಿ ಜೀವನದಿಂದಲೇ ನಾಡು, ನುಡಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು, ರಾಷ್ಟ್ರನಾಯಕರ ಆದರ್ಶ ಗುಣ ಕಲಿಯಬೇಕು, ಖಾದಿಬಟ್ಟೆ, ಸ್ವದೇಶಿ ವಸ್ತುಗಳನ್ನು ಬಳಸಬೇಕು ಎಂದು ಕ.ವಿ.ವ.ಸಂಘದ ಅಧ್ಯಕ್ಷರಾದ ಶತಾಯುಷಿ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ವಿದ್ಯಾರ್ಥಿ ಗಳಿಗೆ ಕಿವಿ ಮಾತು ಹೇಳಿದರು.
ಕರ್ನಾ ಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪ ಹಾಗೂ ಲಕ್ಷ್ಮೇಶ್ವರದ ಚಂದನ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಲಕ್ಷ್ಮೇಶ್ವರದ ಚಂದನ ಶಾಲೆಯಲ್ಲಿ ಆಯೋಜಿಸಿದ್ದ `ಸುಗಮ ಸಂಗೀತ' ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಾವು ಬಾಲಕರಿದ್ದಾಗ ರಾಷ್ಟ್ರೀಯ ನಾಯಕರ ಆದರ್ಶಗುಣ ಹಾಗೂ ಗಾಂಧೀಜಿಯವರ ದೇಶಪ್ರೇಮದಿಂದ ಖಾದಿಬಟ್ಟೆ ಧರಿಸುವುದು ಸೇರಿದಂತೆ ಕನ್ನಡ ನಾಡು, ನುಡಿ ಹಾಗೂ ರಾಷ್ಟ್ರಪ್ರೇಮ ಕಲಿತೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಮುಖ್ಯ ಅತಿಥಿಯಾಗಿ ಧಾರವಾಡ ರಂಗಾಯಣ ನಿರ್ದೇ ಶಕ ರಮೇಶ ಪರವಿನಾಯಕ ಅವರು ಮಾತನಾಡಿ, ವಿದ್ಯಾರ್ಥಿ ಗಳು ಸಾಮಾಜಿಕ ಜಾಲತಾಣವನ್ನು ಜವಾಬ್ದಾರಿಯುತವಾಗಿ ಉತ್ತಮ ಕಾರ್ಯಕ್ಕೆ, ಶೈಕ್ಷಣಿಕ ಜ್ಞಾನಕ್ಕೆ ಮಾತ್ರ ಉಪಯೋಗಿಸಿಕೊಳ್ಳಬೇಕು. ಅತಿಯಾದ ಮೊಬೈಲ್ ಬಳಕೆ ಹಾಗೂ ದುಶ್ಚಟಗಳಿಂದ ದೂರವಿದ್ದು ಜ್ಞಾನ, ಸಂಸ್ಕಾರ, ಭಾರತೀಯ ಸಂಸ್ಕೃತಿ ಯೋಗ, ಸಂಗೀತ ಕಲಿಕೆಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದರ ಜೊತೆಗೆ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಬಹುದು ಎಂದರು.
ಒಡೆಯರಮಲ್ಲಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎನ್. ಕೆ. ಹತ್ತಿಕಾಳ ಹಾಗೂ ಹುಬ್ಬಳ್ಳಿಯ ಪದವಿಪೂರ್ವ ಅಂಧ ಬಾಲಕರ ಪಾಠಶಾಲೆಯ ಶಿಕ್ಷಕ ಅಣ್ಣಪ್ಪ ಕೋಳಿ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೇಶ್ವರದ ಸ್ಕೂಲ್ ಚಂದನ ಸಂಸ್ಥಾಪಕ ಟಿ. ಈಶ್ವರ ಮಾತನಾಡಿ, ಕನರ್ಾಟಕ ಏಕೀಕರಣ, ಕನ್ನಡ ನಾಡು, ನುಡಿ, ನೆಲ, ಜಲ ಭಾಷೆ ಸಂಸ್ಕೃತಿಯ ರಕ್ಷಣೆಗೆ ಸಂಘದ ಕೊಡುಗೆ ಅಪಾರ. ಪಾಪುರವರ ಆಗಮನ ಹಳೆಬೇರು, ಹೊಸ ಚಿಗುರುಗಳ ಸಮ್ಮಿಲನ, ಅರ್ಥಪೂರ್ಣ ಸಂಕ್ರಾಂತಿಯ ಆಚರಣೆಗೆ, ಕನ್ನಡ ಆಗ್ರಭಾಷೆಗೆ ಪಾಪು ಕೊಡುಗೆ ಅಪಾರ, ಪಾಪು ಚಿಂತನೆ ಶಾಶ್ವತವಾಗಿ ಉಳಿಯಬೇಕೆಂದರು.
ನಂತರ ಯುವಗಾಯಕ ಡಾ. ಅರ್ಜು ನ ವಠಾರ ಸೊಗಸಾಗಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನೀಡಿ ಸಭಿಕರ ಮನತಣಿಸಿದರು. ಇವರಿಗೆ ಗಂಗಾಧರ ಗಾಣಿಗೇರ ಹಾರ್ಮೋನಿಯಂ, ನವೀನ ಕುಲಕರ್ಣಿ ತಬಲಾ ಸಾಥ್ ನೀಡಿದರು.
ಮಕ್ಕಳ ಸಾಹಿತಿ, ಕ.ವಿ.ವ. ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಾ ಮಂಟಪದ ಸಂಚಾಲಕ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮಕ್ಕಳಿಂದ ಪ್ರಾರ್ಥನೆ ಹಾಗೂ ನಿರೂಪಣೆ ಜರುಗಿತು.
ವಿದ್ಯಾರ್ಥಿ ಗಳು, ಲಕ್ಷ್ಮೇಶ್ವರದ ಹಿರಿಯರು, ನಾಗರಿಕರು ಸೇರಿದಂತೆ ಅನೇಕರು ಭಾಗವಹಿಸಿದ್ದರು.