ಬೆಂಗಳೂರು 30: ನಗರದ ಮೂರು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯಮಿ ಅವಿನಾಶ್ ಅಗವರ್ಾಲ್ ಬೌರಿಂಗ್ ಇನ್ಸ್ಟಿಟ್ಯೂಟ್ನ ಲಾಕರ್ನಲ್ಲಿ ಇಟ್ಟಿದ್ದ ದಾಖಲೆಗಳು ಪತ್ತೆಯಾದ ನಂತರ ಈ ದಾಳಿ ನಡೆಸಲಾಗಿದೆ.
ಬಿಜೆಪಿ ನಾಯಕ ಜಿ ಪ್ರಸಾದ್ ರೆಡ್ಡಿ ಅವರಿಗೆ ಸೇರಿದ ಮೂರು ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಪ್ರಸಾದ್ ರೆಡ್ಡಿಯ ಮನೆ, ಕಚೇರಿ ಮತ್ತು ಪ್ರಸಾದ್ ರೆಡ್ಡಿ ಆಪ್ತ ಸೈಯದ್ ಅಲೀಮುದ್ದೀನ್ ಮನೆಯ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ. ಮೂರೂ ಕಡೆ ಐಟಿ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ಸಿಕ್ಕಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಮುಖಂಡರಾಗಿರುವ ಜಿ.ಪ್ರಸಾದ್ ರೆಡ್ಡಿ ಜೊತೆಗೆ ಉದ್ಯಮಿ ಅವಿನಾಶ್ ಅಗರ್ ವಾಲ್ ವ್ಯವಹಾರ ಮಾಡಿದ್ದರು. ಅವಿನಾಶ್ ಮಾಲೀಕತ್ವದ ಅನುಷ್ಕಾ ಎಸ್ಟೇಟ್ಸ್ನಿಂದ ಪ್ರಸಾದ್ ರೆಡ್ಡಿಗೆ ಸೇರಿದ ಹಲವು ನಿವೇಶನಗಳನ್ನು ಖರೀದಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.