ರಾಯಬಾಗ 31: ಮನುಷ್ಯನು ಎಲ್ಲರಲ್ಲಿ ಮಾನವೀತೆಯನ್ನು ಹೊಂದಿ ನೊಂದವರ, ಬಡವರ, ದೀನದಲಿತರ ಪಾಲಿಗೆ ಬೆಳಕಾಗಬೇಕು. ಅವರ ಕಣ್ಣಿರು ಒರೆಸುವ ಕಾರ್ಯ ಮಾಡಿ, ಕಲ್ಪವೃಕ್ಷದಂತಾಗಬೇಕೆಂದು ಶರಣಡಾ.ಈಶ್ವರ ಮಂಟೂರ ಹೇಳಿದರು. ಬುಧವಾರ ಪಟ್ಟಣದ ಚೌಗುಲೆ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ಸಂಸ್ಥೆ ಉತ್ಸವ ಅಂಗವಾಗಿ ಬಸವಜ್ಞಾನಗುರುಕುಲ ಬಳಗದ ರಾಯಬಾಗ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದಅವರು, ಬಸವಾದಿ ಶರಣರಕಾಯಕ, ದಾಸೋಹ, ಶಿವಯೋಗ, ಸಮಾನತೆ, ಶಿವಾನುಭವ ಈ ಐದುತತ್ವ ಸಿದ್ಧಾಂತಗಳನ್ನು ಮನೆ ಮನೆಗಳಿಗೆ ಮುಟ್ಟಿಸುವ ಕಾರ್ಯವನ್ನು ಬಸವಜ್ಞಾನ ಗುರುಕುಲ ಬಳಗ ಮಾಡುತ್ತಿದೆಎಂದರು. 2020ರ ಜನವರಿಯಿಂದ ರಾಯಬಾಗ ತಾಲೂಕಿನಲ್ಲಿ ಊರಿಗೆ ಮೂರು ಮಾತು ಎಂಬ ಶಿರ್ಷಿಕೆಯಡಿ ಸಂಚಾರಿ ಶಿವಾನುಭವ ಪ್ರವಚನ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷಎಲ್.ಬಿ.ಚೌಗುಲೆ ಮಾತನಾಡಿ, ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಬಿತ್ತರಿಸುವ ಉದ್ದೇಶದಿಂದ ರಾಯಬಾಗದಲ್ಲಿ ಬಸವಜ್ಞಾನ ಗುರುಕುಲ ಬಳಗ ಶಾಖೆ ಸ್ಥಾಪಿಸಲಾಗಿದ ಎಂದು ತಿಳಿಸಿದರು. ಮಮದಾಪೂರದ ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ಸಾನಿಧ್ಯವನ್ನು ವಹಿಸಿದ್ದರು.
ಧಾರವಾಡದ ಡಾ.ಎಚ್.ಎ.ಇಳಕಲ್ ಅವರು ಹಳೆಯ ಹಿಂದಿ ಗಾಯನದ ಮೂಲಕ ಸಭಿಕರನ್ನು ರಂಜಿಸಿದರು.ಎಲ್ಲ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸಂಗೀತಾ ಚೌಗುಲೆ ಅವರಿಗೆಸತೀಶ ಚೌಗುಲೆ ಪ್ರಶಸ್ತಿ ನೀಡಲಾಯಿತು.ಮಲೇಶಿಯಾದ ಜುಹೇರ್ಬರುದಲ್ಲಿ ನಡೆಯಲಿರುವ 5ನೇ ಸ್ಟುಡೆಂಟ್ಸ್ ಒಲಂಪಿಕ್ ಇಂಟರ್ನ್ಯಾಷನಲ್ಗೇಮ್ಸ್ನ ಕಬ್ಬಡಿ ವಿಭಾಗದಲ್ಲಿ ಆಯ್ಕೆಯಾದ ಬಿ.ಎ.ಚೌಗುಲೆ ಕಾಲೇಜಿನ ಪದವಿ ವಿದ್ಯಾರ್ಥಿಗಳಾದ ಗೊಮ್ಮಟೇಶ ಸುರೇಂದ್ರಕಡಹಟ್ಟಿ ಹಾಗೂ ವಿವೇಕ ಸುಭಾಷ ಕುಂಬಾರ ಇವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆ ಉಪಾಧ್ಯಕ್ಷೆ ಭಾರತಿ ಚೌಗುಲೆ, ನಿವೃತ್ತಚಿಕ್ಕೋಡಿಡಿಡಿಪಿಐಎಮ್.ಜಿ.ದಾಸರ, ಚಿಕ್ಕೋಡಿ ಬಸವೇಶ್ವರ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷರಾಜೇನಗೌಡ ಪಾಟೀಲ, ಶ್ರೀಶೈಲ ಊಳಾಗಡ್ಡಿ, ಬಿ.ಪಿ.ಹೀರೆಸೋಮನ್ನವರ, ಎಸ್.ಎಸ್.ಚೌಗಲಾ, ವಿನಯ ಚೌಗುಲೆ, ಅಪ್ಪಾಸಾಬ ಚೌಗುಲೆ, ಎಚ್.ಎ.ಇಳಕಲ್, ಮಲ್ಲಿಕಾಜರ್ುನ ಹುಲಗಬಾಳಿ, ಸದಾನಂದ ಬೆಳ್ಳೂರು, ಸುನೀಲ ಕರಗಾಂವೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.