ಲೋಕದರ್ಶನ ವರದಿ
ಮಕ್ಕಳಲ್ಲಿರುವ ಅಡಗಿರುವ ಸುಪ್ತ ಪ್ರತಿಭೆ ಇನ್ನಷ್ಟು ಹೊರ ಹೊಮ್ಮಲು ಕಲಿಕೆ ಹಬ್ಬದಿಂದ ಸಾಧ್ಯ ಬಿ.ಇ.ಓ. ಸಿದ್ದಲಿಂಗ ಮೂರ್ತಿ
ಕಂಪ್ಲಿ 25; ಮಗುವಿನಲ್ಲಿ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಸುಪ್ತವಾಗಿರುವ ಈ ಪ್ರತಿಭೆಯನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಕಲಿಕ ಹಬ್ಬ ಪೂರಕವಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಹೆಚ್.ಹುಲುಗಪ್ಪ ಹೇಳಿದರು.ತಾಲೂಕಿನ ಹಂಪಾದೇವನಹಳ್ಲಿ ಗ್ರಾಮದ ಸ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ದೇವಸಮುದ್ರ ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಮಕ್ಕಳ ಕಲಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಕುರುಗೋಡು ಮತ್ತು ಕಂಪ್ಲಿ ಬಿ.ಇ.ಓ. ಸಿದ್ದಲಿಂಗ ಮೂರ್ತಿ ಪ್ರಸ್ತಾವಿಕ ಮಾತನಾಡಿ ಮಕ್ಕಳಲ್ಲಿರುವ ಅಡಗಿರುವ ಸುಪ್ತ ಪ್ರತಿಭೆ ಇನ್ನಷ್ಟು ಹೊರ ಹೊಮ್ಮಲು ಕಲಿಕೆ ಹಬ್ಬದಿಂದ ಸಾಧ್ಯ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿಹೊಂದಲು ಪಾಲಕರೊಂದಿಗೆ ಶಿಕ್ಷಕರು ಹೆಚ್ಚಿನ ಶ್ರಮವಹಿಸಬೇಕು ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬವನ್ನು ಹಚ್ಚು ಕಟ್ಟಾಗಿ ಮಾಡುತ್ತಿರುವುದು ಸಂತೋಷವಾಗಿದೆ ಎಂದರು. ನಂತರ ದೇವಸಮುದ್ರ ಸಿಆರ್ ಪಿ ಎಸ್.ಈರೇಶ ಮಾತನಾಡಿ, ಕಲಿಕಾ ಹಬ್ಬವು ಶೈಕ್ಷಣಿಕ ಪರಿಸರದ ಬೆಂಬಲ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು. ಪರಸ್ಪರ ಹಂಚಿಕೊಂಡ ಕಲಿಕೆಯ ಅನುಭವಗಳು ಮಕ್ಕಳ ಹಾಗೂ ಒಂದು ಶಾಲೆಯ ಸಾಮೂಹಿಕ ಬೆಳವಣಿಗೆ ಮತ್ತು ಸುಧಾರಣೆಯನ್ನು ಪ್ರೋತ್ಸಾಹಿಸುತ್ತವೆ. ಮಕ್ಕಳು ಮತ್ತು ಶಿಕ್ಷಕರು ಜೊತೆಯಾಗಿ ಪೋಷಕರನ್ನು ಹಾಗೂ ಸಮುದಾಯದ ಸದಸ್ಯರನ್ನು ಪರಸ್ಪರ ಭೇಟಿಯಾಗಲು, ಅವರನ್ನು ಸಂತಸದಾಯಕ ವಾತಾವರಣದ ಕಡೆಗೆ ಸ್ವಾಗತಿಸಲು ಮತ್ತು ಕಲಿಕೆಯ ಅವಕಾಶವನ್ನು ಸಮುದಾಯದೊಂದಿಗೆ ವಿಸ್ತರಿಸಲು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಉದ್ದೇಶವಾಗಿದೆ. ತದನಂತರ ಮುಖ್ಯಗುರು ವಿರೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ,ಇಲ್ಲಿನ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಕಥೆ ಹೇಳುವುದು ಸ್ಮರಣ ಪರೀಕ್ಷೇ ಕೈಬರಹ ಸಂತೋಷದಾಯಕ ಗಣಿತ ರಸಪ್ರಶ್ನೆ ಗಟ್ಟಿ ಓದು ಮೋಜಿನ ಆಟಗಳು ಸಂವಾದಾತ್ಮಕ ಏಳು ಸ್ಪರ್ಧೆಗಳು ಜರುಗಿದವು. ವೇದಿಕೆ ಕಾರ್ಯಕ್ರಮ ಮುಂಚಿತವಾಗಿ ಗ್ರಾಮದಲ್ಲಿ ಕಲಿಕಾ ಹಬ್ಬದ ಸುಂದರ ಮೆರವಣಿಗೆ ಜರುಗಿತು.ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಉಪ ಪ್ರಾಚಾರ್ಯ ಸುಜಾತ, ಸಿಆರ್ ಪಿ ಈರೇಶ, ಎನ್ ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ನಾಗನಗೌಡ ಎಂ.ಎ, ಜಿಪಿಟಿ ಶಿಕ್ಷಣ ಸಂಘದ ಅಧ್ಯಕ್ಷ ಮಂಜುನಾಥ, ಇಸಿಒ ರೇವಣ್ಣ, ಸಿಆರ್ಿಗಳಾದ ರೇಣುಕಾರಾಧ್ಯ, ಚಂದ್ರಯ್ಯ ಸೊಪ್ಪಿಮಠ, ಭೂಮೇಶ್ವರ, ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷೆ ಸುನೀತಾ, ರಾಜೇಶ್ವರಿ, ರಾಮಣ್ಣ, ಶಿಕ್ಷಕ ಹೆಚ್.ಜಡೆಪ್ಪ, ನಾಗವೇಣಿ ಸೋಮಶೇಖರ, ಫ್ಯಾರಿಜನ್, ಜೋಗಿ ರುದ್ರ್ಪ, ಮುಖಂಡರಾದ ಎ.ಹುಲುಗಪ್ಪ ಸೇರಿದಂತೆ ಮಕ್ಕಳು.ಇದ್ದರು ಮಾ002ಹಂಪಾದೇವನ ಹಳ್ಲಿ ಗ್ರಾಮದ ಸ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವಸಮುದ್ರ ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಮಕ್ಕಳ ಕಲಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ