ಲೋಕದರ್ಶನ ವರದಿ
ಗದಗ 21: ಇಂದಿನ ಸಮಾಜದಲ್ಲಿ ಶಿಕ್ಷಕರ ಜವಾಬ್ದಾರಿ ಗುರುತರವಾಗಿದೆ. ಶಿಕ್ಷಕ ಏರಿದ ಏತ್ತರಕ್ಕೆ ಸಮಾಜ ಎಂದೂ ಏರಲಾರದು ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಪ್ರೊ. ಎಸ್ ವ್ಹಿ ಸಂಕನೂರ ಹೇಳಿದರು.
ಅವರು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘ, ರಾಜ್ಯ ಸಿರಿಗನ್ನಡ ನುಡಿಬಳಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ 2018-19 ನೆಯ ಸಾಲಿನಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ 125 ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ, ಶೇಕಡಾ 100ರಷ್ಟು ಫಲಿತಾಂಶ ಪಡೆದ ಕನ್ನಡ ಭಾಷಾ ಶಿಕ್ಷಕರಿಗೆ ಅಭಿನಂದನಾ ಸಮಾರಂಭ, ಎಸ್ ಎಸ್ ಎಲ್ ಸಿ ವಿದ್ಯಾಥರ್ಿಗಳ ಮಾರ್ಗದರ್ಶಿ ಕೈಪಿಡಿ ಬಿಡುಗಡೆ, ಪರಿಣಾಮಕಾರಿ ಬೋಧನೆಯ ಆಯಾಮಗಳು" ಕುರಿತು ಉಪನ್ಯಾಸ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಕರ ಬಹುತೇಕ ಸಂಘಟನೆಗಳು ಕೇವಲ ಶಿಕ್ಷಕರ ಸಮಸ್ಯೆಗಳ ಕುರಿತು ಹೋರಾಟ ಮಾಡುವ ಪರಿಪಾಠ ಬೆಳೆಸಿಕೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಗದಗ ಗ್ರಾಮೀಣ ವಲಯದ ಕನರ್ಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಹಾಗೂ ಸಿರಿಗನ್ನಡ ನುಡಿಬಳಗದವರು ಇಂದು ಗುಣಾತ್ಮಕ ಶಿಕ್ಷಣದ ಕುರಿತು ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಕಾಯರ್ಾಗಾರ ಹಮ್ಮಿಕೊಂಡಿರುವುದು ಅಭಿನಂದನಾರ್ಹ ಕೆಲಸವಾಗಿದೆ.
ಶಿಕ್ಷಕ ತನ್ನ ಬೋಧನಾ ವಿಷಯ ಬೋಧನೆಯಲ್ಲಿ ಭಾಷೆಯ ಮೇಲೆ ಪ್ರಭುತ್ವ ಹೊಂದಿ ಮಕ್ಕಳಲ್ಲಿ ಅಡಗಿರುವ ಜ್ಞಾನವನ್ನು ಜಾಗೃತಗೊಳಿಸಿದರೆ ಉತ್ತಮ ಪ್ರತಿಭೆ ಹೊರಹೊಮ್ಮತ್ತದೆ. ಶಿಕ್ಷಕ ತನ್ನ ಹಕ್ಕು ಕರ್ತವ್ಯವನ್ನರಿತು ಕಾರ್ಯ ಪ್ರವೃತ್ತನಾದರೆ ಮಕ್ಕಳ ಪ್ರತಿಭೆ ಹೊರಹೊಮ್ಮುತ್ತದೆ ಎಂದರು.ಎಸ್ಎಸ್ಎಲ್ಸಿ ವಿದ್ಯಾಥರ್ಿಗಳ ಮಾರ್ಗದಶರ್ಿ ಕೈಪಿಡಿಯನ್ನು ಗದಗ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಸಿದ್ಧಲಿಂಗೇಶ ಪಾಟೀಲ ಬಿಡುಗಡೆಗೊಳಿಸಿ ಮಾತನಾಡುತ್ತಾ ಈ ಬಾರಿ ಗದಗ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ಗುಣಾತ್ಮಕವಾಗಿ ಹೆಚ್ಚಳವಾಗಬೇಕು. ಗದಗ ಜಿಲ್ಲೆಯ ಎಲ್ಲ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯಲು ಎಲ್ಲ ಅಧಿಕಾರಿಗಳೂ ಹಾಗೂ ಶಿಕ್ಷಕರು ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ ಎ ರಡ್ಡೇರ ಮಾತನಾಡುತ್ತಾ ಶಿಕ್ಷಕರು ಉತ್ಸಾಹದಿಂದ ತರಗತಿಗೆ ಹೋದರೆ ಪರಿಣಾಮಕಾರಿಯಾಗಿ ಮಕ್ಕಳಿಗೆ ಬೋಧಿಸಲು ಸಾಧ್ಯವಿದೆ.ಈ ದೇಶದ ಭವಿಷ್ಯ ವರ್ಗಕೋಣೆಯಲ್ಲಿ ಅಡಗಿದೆ ಎಂಬ ಡಿ.ಎಸ್.ಕೋಠಾರಿ ಆಯೋಗದಲ್ಲಿರು ಸಾಲುಗಳನ್ನು ನೆನೆದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಗದಗ ಗ್ರಾಮೀಣ ವಲಯದ ಅಧ್ಯಕ್ಷರಾದ ಬಿ ಎಪ್ ಪೂಜಾರ ಮಾತನಾಡಿ ಕನ್ನಡ ಕಟ್ಟುವ ನಿಜವಾದ ಕಟ್ಟಾಳುಗಳೇ ಇವತ್ತಿನ ಈ ಪರಸ್ಕೃತ ಮಕ್ಕಳು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪ, ನಾಡು, ನುಡಿ ಇವೆಲ್ಲವುಗಳನ್ನು ಗೌರವಿಸಿ ಎಂದು ಹೇಳುತ್ತಾ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ರವರ ವಾಣಿ ನೆನೆದರು.
ಧಾರವಾಡದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಬೋಧನೆಯ ವಿವಿಧ ಆಯಾಮಗಳನ್ನು ಕುರಿತು ವಿ.ಎಚ್ ಲಕ್ಷಾಣಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಶರಣು ಗೋಗೇರಿ, ಕ್ಷೇತ್ರ ಸಮನ್ವಯಾಧಿಕಾರಿ ಎಮ್.ಎಚ್. ಕಂಬಳಿ, ವಿ.ವಿ. ನಡುವಿನಮನಿ, ವಿ.ಎಮ್. ಮೆಣಸಿನಕಾಯಿ, ಪಿ.ಎಚ್.ಕಡಿವಾಲ, ಎಲ್.ಎಸ್. ಬೆಳವಟಗಿ, ಸಿರಿಗನ್ನಡ ನುಡಿಬಳಗದ ಅಧ್ಯಕ್ಷ ಎಂ.ಬಿ ಕರಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ನೀಲಮ್ಮ ಅಂಗಡಿ ಪ್ರಾಥರ್ಿಸಿದರು. ಎಂ.ಎಚ್ ನ್ಯಾರಲಗಂಟಿ ಸ್ವಾಗತಿಸಿದರು. ಎಸ್.ಪಿ ಪ್ರಭಯ್ಯನಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಂ.ಎ ಯರಗುಡಿ ನಿರೂಪಿಸಿದರು. ಎಂ.ಎಂ ಹಳಪೇಟಿ, ಬಿ.ಎಚ್ ಹೊಂಬಳ ನಿರ್ವಹಣೆ ಮಾಡಿದರೆ, ಕೊನೆಗೆ ಡಿ.ಬಿ ತಳವಾರ ವಂದಿಸಿದರು.