ಬೆಂಗಳೂರು,
ಮಾ. 28, ಸ್ಯಾಂಡಲ್ ವುಡ್ ಖ್ಯಾತ ನಟ ನಿಖಿಲ್ ಕುಮಾರಸ್ವಾಮಿ ರಾಜ್ಯ
ಚಲನಚಿತ್ರ ಬಡ ಕಾರ್ಮಿಕ, ಕಿರುತೆರೆ ಕಾರ್ಮಿಕರಿಗೆ ಒಟ್ಟು 37ಲಕ್ಷ ರೂ ಧನ ಸಹಾಯ
ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿರುವ 24 ವಿಭಾಗಗಳ ಎಲ್ಲಾ ಕುಟುಂಬಗಳಿಗೂ ಅವರು ಸಹಾಯ ಧನ ನೀಡಿದ್ದಾರೆ.ನಿರ್ಮಾಪಕ
ಸಾ.ರಾ.ಗೋವಿಂದು ಅವರ ಮೂಲಕ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ನಿಖಿಲ್
ಅವರು ಪ್ರತಿಯೊಂದು ವಿಭಾಗಕ್ಕೂ ಶನಿವಾರ ಚೆಕ್ ರವಾನಿಸಿದ್ದಾರೆ.ಕರ್ನಾಟಕ ಚಲನಚಿತ್ರ ಕಾರ್ಮಿಕರಿಗೆ 32 ಲಕ್ಷ ರೂ, ಕಿರುತೆರೆ ಕಾರ್ಮಿಕರಿಗೆ 5 ಲಕ್ಷ ರೂ ಸೇರಿ ಒಟ್ಟು 37 ಲಕ್ಷ ರೂಪಾಯಿ ಧನ ಸಹಾಯ ನೀಡಿದ್ದಾರೆ.ಟೆಲಿವಿಷನ್ ಅಸೋಸಿಯೇಷನ್ ಪರವಾಗಿ ನಟಿ ಅಭಿನಯ ಅವರು ಸಾ.ರಾ.ಗೋವಿಂದು ಅವರಿಂದ ಚೆಕ್ ಪಡೆದಿದ್ದಾರೆ.ಸಿನಿಮಾ
ಕುಟುಂಬದ ಸದಸ್ಯರಾದ ಲೈಟ್ಸ್ ಬಾಯ್ಸ್ ಅಸೋಸಿಯೇಷನ್, ಯುನಿಟ್ ಬಾಯ್ಸ್ ಅಸೋಸಿಯೇಷನ್,
ಪ್ರೊಡಕ್ಷನ್ ಅಸೋಸಿಯೇಷನ್, ಫೈಟರ್ಸ್ ಅಸೋಸಿಯೇಷನ್, ಮೇಕಪ್ ಮೆನ್ ಹಾಗೂ ಇತ್ಯಾದಿ
ಸುಮಾರು 3ಸಾವಿರಕ್ಕೂ ಹೆಚ್ಚು ಸಿನಿಮಾ ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಹಣ
ಹಾಕಲು ನಿರ್ಧರಿಸಿದ್ದು, ಸಂಬಂಧಪಟ್ಟ ಸಂಘಟನೆಗಳಿಗೆ ಪ್ರತ್ಯೇಕವಾಗಿ ಚೆಕ್
ವಿತರಿಸಿದ್ದಾರೆ.