ಪೇಜಾವರ ಶ್ರೀ ಆರೋಗ್ಯ ಸ್ಥಿರವಾಗಿಯೇ ಮುಂದುವರಿದೆ; ಮಣಿಪಾಲ್ ಆಸ್ಪತ್ರೆ

ಉಡುಪಿ, ಡಿ 23,ಮಣಿಪಾಲ್ ಕಸ್ತೂರಿ ಬಾ ಮಡಿಕಲ್  ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ  ಚಿಕಿತ್ಸೆ ಕಲ್ಪಿಸಲಾಗುತ್ತಿರುವ  ಪೇಜಾವರ ವಿಶ್ವೇಶ ತೀರ್ಥ ಶ್ರೀ ಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಗಂಭೀರವಾಗಿಯೇ ಮುಂದುವರಿದಿದೆ.ಶ್ರೀಗಳಿಗೆ  ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ ಎಂದು  ಆಸ್ಪತ್ರೆ ಸೋಮವಾರ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.ಉಸಿರಾಟದ ಸಮಸ್ಯೆ ಹಾಗೂ ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಂಡ ನಂತರ  ಪೇಜಾವರ ಶ್ರೀಗಳನ್ನು ಶುಕ್ರವಾರ ಮುಂಜಾನೆ  ಕೆಎಂಸಿ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಭಾನುವಾರ  ಆಸ್ಪತ್ರೆಗೆ ಭೇಟಿ ನೀಡಿದ್ದ  ಸುಪ್ರಸಿದ್ದ  ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ,  ಶ್ರೀ ಮಠದ ಕಿರಿಯ ಶ್ರೀ ವಿಶ್ವ ಪ್ರಸನ್ನ ತೀರ್ಥರು,  ಶ್ರೀಗಳ ಆರೋಗ್ಯ ಸುಧಾರಣೆ ಕುರಿತು  ವೈದ್ಯರಿಂದ  ಮಾಹಿತಿ ಪಡೆದುಕೊಂಡಿದ್ದರು.ಪೇಜಾವರ ಶ್ರೀಗಳ  ಆಪ್ತ ಕಾರ್ಯದರ್ಶಿ  ವಿಷ್ಣುಮೂರ್ತಿ ಆಚಾರ್ಯ,   ಶ್ರೀಗಳು ಚಿಕಿತ್ಸೆಗೆ  ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಕುರಿತು ವದಂತಿಗಳನ್ನು ಹಬ್ಬಿಸದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸೋಂಕು ತಗುಲುವ ಭೀತಿಯಿಂದ, ಪೇಜಾವರ ಶ್ರೀಗಳ ಬಳಿ  ತೆರಳಲು ಭಕ್ತಾಧಿಗಳನ್ನು ನಿರಾಕರಿಸಲಾಗುತ್ತಿದೆ  ಎಂದು ಸ್ಪಷ್ಟಪಡಿಸಿದರು.ಶ್ರೀಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಕೋರಿ  ಭಕ್ತಾಧಿಗಳು  ಸೋಮವಾರ ಕಾರ್ಕಳದ  ಶ್ರೀ ರಾಘವೇಂದ್ರ ಮಠದಲ್ಲಿ  ವಿಷ್ಣ ಸಹಸ್ರನಾಮ  ಪಠಿಸಿದರು.