ಲೋಕದರ್ಶನ ವರದಿ
ಬೆಳಗಾವಿ 24: ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಸದ್ಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿ ಕಾರ್ಯ ನಿರ್ವಹಿಸುತ್ತಿರುವವರಿಗೆ, ಎ.ಬಿ.ಸಿ. ವಲಯದಲ್ಲಿ ವಗರ್ಾವಣೆ ಕೌನ್ಸಿಲಿಂಗ್ ನಡೆಸಬೇಕೆಂದು ಕನರ್ಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಬೆಳಗಾವಿ ಜಿಲ್ಲಾಘಟಕವು ಡಿ.ಡಿ.ಪಿ.ಐ ಎ.ಬಿ. ಪುಂಡಲೀಕರಿಗೆ ಇಂದು ಮನವಿ ನೀಡಿ ಶಿಕ್ಷಕರ ವಗರ್ಾವಣೆ ಕೌನ್ಸಿಲಿಂಗ್ ನಡೆಸುವುದಕ್ಕಿಂತ ಮೊದಲು ಮುಖ್ಯೋಪಾಧ್ಯಾಯರ ಎ.ಬಿ.ಸಿ. ವಗರ್ಾವಣೆ ಮಾಡಲು ಆಗ್ರಹಿಸಿದೆ.
ಕಳೆದ 4 ವರ್ಷಗಳಿಂದ ಮುಖ್ಯೋಪಾಧ್ಯಾಯರ ವಗರ್ಾವಣೆ ಆಗಿರುವುದಿಲ್ಲ, ಇಲಾಖಾ ನಿಯಮಾವಳಿಯಂತೆ ವರ್ಷಕ್ಕೆ ಎರಡು ಸಲ ಎ.ಬಿ.ಸಿ ವಲಯದ ಮುಖ್ಯೋಪಾಧ್ಯಾಯರ ವಗರ್ಾವಣೆ ನಡೆಸಬೇಕೆಂಬ ಇಲಾಖಾ ನಿಯಮಾವಳಿಯಂತೆ ಜಿಲ್ಲೆಯಲ್ಲಿ ಸದ್ಯ ವಗರ್ಾವಣೆ ಪ್ರಕ್ರಿಯೆ ನಡೆಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಜೊತೆಗೆ ಪ್ರಾಥಮಿಕ ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸೇವಾ ಜ್ಯೇಷ್ಠತೆ ಆಧಾರದ ಮೇರೆಗೆ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ನೀಡುವಂತೆ ಸಂಘವು ಆಗ್ರಹಿಸಿದೆ.
ಮನವಿ ನೀಡುವ ಸಮಯದಲ್ಲಿ ಶಿಕ್ಷಣಾಧಿಕಾರಿಗಳಾದ ಮಹಾದೇವ ಬೆಳ್ಳನ್ನವರ ಉಪಸ್ಥಿತರಿದ್ದರು, ಜಿಲ್ಲಾ ಸಂಘದ ಗೌರವಾಧ್ಯಕ್ಷ ಶಶಿಧರ ರೊಟ್ಟಿ, ಅಧ್ಯಕ್ಷ ಬಿ.ಎಸ್. ಹುಣಸೀಕಟ್ಟಿ, ಪ್ರಧಾನ ಕಾರ್ಯದಶರ್ಿ ಬಸವರಾಜ ಸುಣಗಾರ, ಪದಾಧಿಕಾರಿಗಳಾದ ಎಂ.ಎಸ್. ಅಥಣಿ, ಎಸ್.ಬಿ. ಜಕಾತಿ, ಎಂ.ಎಸ್. ಬೋಳಣ್ಣವರ, ಎಸ್.ಎಂ. ಶಹಾಪೂರಮಠ, ಎಸ್.ಜಿ. ಚವಲಗಿ, ಪಿ.ಕೆ.ಘೋಲಪೆ, ವಾಯ್.ಆರ್.ಗುಡಿ, ಎಂ.ಎಸ್. ಪಾಟೀಲ, ಎಸ್.ಜಿ. ರಜಪೂತ, ರಾಜೇಂದ್ರ ಚಲವಾದಿ ಸುರೇಶಕೋಲಕಾರ ಸೇರಿದಂತೆ ಹಲವು ಪದಾಧಿಕಾರಿಗಳು ಮನವಿ ಸಲ್ಲಿಸಿದರು.