ಆಟ ಪಾಠದೊಂದಿಗೆ ಮಕ್ಕಳಗೆ ಪುಸ್ತಕ ಓದುವ ಹವ್ಯಾಸ ರೂಢಿಸಬೇಕು

The habit of reading books should be developed for children along with game lessons

 ಆಟ ಪಾಠದೊಂದಿಗೆ ಮಕ್ಕಳಗೆ ಪುಸ್ತಕ ಓದುವ ಹವ್ಯಾಸ ರೂಢಿಸಬೇಕು  

ಕೊಪ್ಪಳ 28: ಪ್ರತಿಯೊಬ್ಬ ಮಗುವಿಗೆ ಪುಸ್ತಕ ಓದುವ ಅಭ್ಯಾಸವನ್ನು ಬೆಳಸಬೇಕಿದೆ ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು. 

ಅವರು ಶ್ರೀಶೈಲನಗರದಲ್ಲಿ ಇರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಂಚಜನ್ಯ ಅಕ್ಷರ ಕಲಿತವರ ಬದುಕು ಧನ್ಯ ಎಂಬ ಅಡಿ ಬರಹದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರಸ್ತುತ ದಿನಮಾನಗಳಲ್ಲಿ ತಂತ್ರಜ್ಞಾನಗಳು ಬೆಳದಂತೆ ಮಕ್ಕಳು ಓದುವ ಹವ್ಯಾಸವನ್ನು ಬಿಟ್ಟು ಮೊಬೈಲ ಬಳಕೆಯಲ್ಲೇ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. 

ಮಕ್ಕಳು ಮೊಬೈಲ್ ಬದಲಾಗಿ ಅವರು ಪುಸ್ತಕವನ್ನು ಅಭ್ಯಾಸ ಮಾಡುವಂತ ಹವ್ಯಾಸವನ್ನು ಬೆಳಸಬೇಕಿದೆ.ಪುಸ್ತಕವನ್ನು ಹೆಚ್ಚು ಹೆಚ್ಚು ಅಧ್ಯಾಯನ ಮಾಡುವುದರಿಂದ ಹೆಚ್ಚು ಜ್ಞಾನ ಸಿಗುತ್ತದೆ.ವಿದ್ಯಾರ್ಥಿಗಳ ಜೀವನದಲ್ಲಿ ಸಮಯ ಬಹಳ ಮಯತ್ವದಾಗಿದೆ.ವಿದ್ಯಾರ್ಥಿಗಳನ್ನು ತಮಗೆ ಸಿಕ್ಕ ಸಮಯವನ್ನು ಸರಿಯಾದ ರೀತಿಯಿಂದ ಬಳಿಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ.ಸಮಾಜದಲ್ಲಿ ಕಷ್ಟದಿಂದ ಬೆಳೆದು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಉನ್ನತವಾದ ಹುದ್ದೆಯನ್ನು ಪಡೆದವರು ಅನೇಕರಿದ್ದಾರೆ. 

ಅಂತವರ ಸಾಧನೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟಾಗ ಮಕ್ಕಳು ಕೂಡಾ ತಾವು ಸಾಧನೆ ಮಾಡಬೇಕು ಎಂಬ ಹಂಬಲ ಉಂಟಾಗುತ್ತದೆ.ಪಾಲಕರು ಕೂಡಾ ಮಕ್ಕಳ ಶೈಕ್ಷಣಿಕ ಪ್ರಗತಿಯ ಕಡೆ ಹೆಚ್ಚು ಗಮನವನ್ನು ಹರಿಸಬೇಕು ಎಂದು ಹೇಳಿದರು. 

 ಶಾಲೆಯ ಮುಖ್ಯೋಪಾಧ್ಯಾಯರಾದ ಬಾಲನಾಗಮ್ಮ ಕಾರ್ಯಕ್ರಮದ ಕುರಿತಾಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಸಿದ್ದ ಜಿಲ್ಲಾ ಕಾರಾಗೃಹದ ಮುಖ್ಯ ಅಧಿಕ್ಷರಾದ ಅಂಬರೇಶ ಪೂಜಾರ ಮಾತನಾಡಿ,ಸರಕಾರಿ ಶಾಲೆಯಲ್ಲಿ ಪಾಂಚಜನ್ಯ ಎಂಬ ವಿನೂತನವಾದ ಪರಿಪಲ್ಪನೆಯನ್ನು ಇಟ್ಟುಕೊಂಡು ಶಾಲಾ ವಾರ್ಷಿಕೋತ್ಸವ ಆಚರಣೆಯನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಪಾಂಚಜನ್ಯ ಸಾಹಿತ್ಯ ಅಭಿರುಚಿ ಬೆಳೆಸುವುದು,ಸ್ಪಷ್ಟ ಓದು-ಶುದ್ದ ಬರಹ,ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಮಾಹಿತಿ ಪಡೆಯುವುದು,ಪರಿಸರ ಜಾಗೃತಿ, ಕಲಿಕಾ ಖಾತರಿ ಎಂಬ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದರು. 

ನಗರಸಭೆಯ ಅಧ್ಯಕ್ಷರಾದ ಅಮ್ದಜ ಪಟೇಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ತಾಲೂಕ ಅಧಿಕಾರಿ ಮಲ್ಲಿಕಾರ್ಜುನ ಗುಡಿ,ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರ​‍್ಪ ಅಂಡಗಿ,ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಶಿವಪ್ಪ ಜೋಗಿ,ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ ಪಾಟೀಲ,ತಾಲೂಕ ಅಧ್ಯಕ್ಷರಾದ ಹೋಳಿಬಸಯ್ಯಾ.ಕೆ.ಎಂ.,ಶಿಕ್ಷಣ ಪ್ರೇಮಿಗಳಾದ ಅಜರತ ಅಲಿ, ಪೀರಸಾಬ ಬೆಳಗಟ್ಟಿ,ಸಲೀಂ ಅಳವಂಡಿ, ಬಸವರಾಜಯ್ಯಾ ವಸ್ತ್ರದ ಮುಂತಾದವರು ಹಾಜರಿದ್ದರು. 

 ಶಿಕ್ಷಕರಾದ ಮುಸ್ತಿಸಾಬ ವಾಲಿಕಾರ ಸ್ವಾಗತಿಸಿ, ಬೀಬಿಜಾನ ವಂದಿಸಿದರು. 

ಪೋಟೊ: ನಗರದ ಶ್ರೀಶೈಲನಗರದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಾಂಚಜನ್ಯ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಉದ್ಘಾಟಿಸಿದರು.