ಆಸ್ಪತ್ರೆಯಲ್ಲೇ ಮಗುವಿನ ಥಂಬ್ ಪಡೆದ ಆಧಾರ ಸಿಬ್ಬಂದಿ

ಬಾಗಲಕೋಟೆ26: ಕಾಯಿಲೆಯಿಂದ ಬಳಲುತ್ತಿದ್ದ ಐದುವರೆ ವರ್ಷದ ಬಾಲಕಿಯ ಆಧಾರ ತಿದ್ದುಪಡಿಗಾಗಿ ಆಸ್ಪತ್ರೆಗೆ ತೆರಳಿ ಮಗುವಿನ ಥಂಬ್ ಪಡೆದುಕೊಳ್ಳಲಾಯಿತು.

ಆಧಾರ ತಿದ್ದುಪಡಿಗಾಗಿ ಜಿಲ್ಲಾ ಆಧಾರ ಸಂಯೋಜಕರನ್ನು ಭೇಟಿ ಮಾಡಲು ಬಂದ ಕೌಶಲ್ಯ ಮಾದರ ಎಂಬ ಬಾಲಕಿ ಪಾಲಕರು ಮಗು ಆಸ್ಪತ್ರೆಯಲ್ಲಿರುವುದಾಗಿ ತಿಳಿಸಿದಾಗ ಜಿಲ್ಲಾ ಆಧಾರ ಕೇಂದ್ರದ ಸಿಬ್ಬಂದಿಗಳಾದ ಶಂಕ್ರಪ್ಪ ನಂದಿಹಾಳ, ಸಿದ್ದಪ್ಪ ತಪ್ಪದಲ ಆಸ್ಪತ್ರೆಗೆ ತೆರಳಿ ಮಗುವಿನ ಥಂಬ್ ಪಡೆದುಕೊಂಡಿದ್ದಾರೆ. ಆಧಾರ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಶ್ಲಾಘಿಸಿದರು.